ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Thalapathy Vijay: ಶೀಘ್ರದಲ್ಲಿಯೇ ತ್ರಿಶಾ ಮದುವೆ? ತಾಯಿ ಉಮಾ ಸುಳಿವು ನೀಡಿದ್ದೇನು?

Thalapathy Vijay: ವಿಜಯ್ ಮತ್ತು ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ವಿವಾದ ಆರಂಭವಾದ ನಂತರ, ಇತ್ತೀಚೆಗೆ ನಡೆದ ಆರತಕ್ಷತೆಯಲ್ಲಿ ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಇಬ್ಬರೂ ಒಂದೇ ರೀತಿಯ ಉಡುಪುಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ನಂತರ, ಸಂಗೀತಾ ಅವರ ವಿಚ್ಛೇದನ ಅರ್ಜಿಯಿಂದ ಉಂಟಾದ ಗೊಂದಲದ ನಡುವೆ, ತ್ರಿಶಾ ಅವರೊಂದಿಗಿನ ಸಂಬಂಧವನ್ನು ಅಧಿಕೃತಗೊಳಿಸಲು ವಿಜಯ್ ಈ ದಿಟ್ಟ ಕ್ರಮ ಕೈಗೊಂಡಿದ್ದಾರೆ ಎಂದು ವದಂತಿ ಹಬ್ಬಿತ್ತು.

ದಳಪತಿ ವಿಜಯ್‌-ತ್ರಿಷಾ

ವಿಜಯ್ ಮತ್ತು ಸಂಗೀತಾ (Thalapathy Vijay And Trisha Krishnan) ದಾಂಪತ್ಯದಲ್ಲಿ ಬಿರುಕು ಮೂಡಿದೆ. ವಿವಾದ ಆರಂಭವಾದ ನಂತರ, ಇತ್ತೀಚೆಗೆ ನಡೆದ ಆರತಕ್ಷತೆಯಲ್ಲಿ ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಇಬ್ಬರೂ ಒಂದೇ ರೀತಿಯ ಉಡುಪುಗಳಲ್ಲಿ ಕಾರ್ಯಕ್ರಮಕ್ಕೆ (Thalapathy Vijay and Trisha Krishnan) ಆಗಮಿಸಿದ್ದು, ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ನಂತರ, ಸಂಗೀತಾ ಅವರ ವಿಚ್ಛೇದನ ಅರ್ಜಿಯಿಂದ ಉಂಟಾದ ಗೊಂದಲದ ನಡುವೆ, ತ್ರಿಶಾ ಅವರೊಂದಿಗಿನ (TVK Chief's wife Sangeetha filed for divorce) ಸಂಬಂಧವನ್ನು ಅಧಿಕೃತಗೊಳಿಸಲು ವಿಜಯ್ ಈ ದಿಟ್ಟ ಕ್ರಮ ಕೈಗೊಂಡಿದ್ದಾರೆ ಎಂದು ವದಂತಿ ಹಬ್ಬಿತ್ತು.

ವಿಜಯ್ ಮತ್ತು ತ್ರಿಶಾ ಶೀಘ್ರದಲ್ಲೇ ಮದುವೆ?

ನಟ-ರಾಜಕಾರಣಿ ಶೀಘ್ರದಲ್ಲೇ ಪತ್ನಿಯಿಂದ ಕಾನೂನುಬದ್ಧವಾಗಿ ಬೇರ್ಪಟ್ಟ ನಂತರ, ತಮ್ಮ ಸಹನಟಿಯನ್ನು ಮದುವೆಯಾಗಲಿದ್ದಾರೆ ಎಂದು ಊಹಿಸಲಾಗಿತ್ತು. ಹೀಗಿರುವಾಗ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಮತ್ತು ತ್ರಿಶಾ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ‌.

ಇದನ್ನೂ ಓದಿ: Actor Upendra: ಬೆಳಗ್ಗೆ ಲಿಂಕ್ ಪೋಸ್ಟ್ ಮಾಡ್ತೀನಿ, ತಕ್ಷಣ ಡಿಲೀಟ್‌ ಮಾಡ್ತೀನಿ; ಜನರ ತಲೆಗೆ ಹುಳಬಿಟ್ಟ ಉಪೇಂದ್ರ!

ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಕೂಡ ನಡೆಯುತ್ತಿದೆ. ವಿಶೇಷ ಅಂದರೆ ಈ ಚರ್ಚೆಗೆ ತ್ರಿಶಾ ಅವರ ತಾಯಿ ಕೂಡ ಸಮ್ಮತಿ ಸೂಚಿಸಿದಂತಿದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಮತ್ತು ತ್ರಿಶಾ ಅವರ ಮದುವೆಯ ಬಗ್ಗೆ ಹಾಕಲಾಗಿದ್ದ ಒಂದು ಪೋಸ್ಟ್‌ಗೆ ತ್ರಿಶಾ ಅವರ ತಾಯಿ ಉಮಾ ಕೃಷ್ಣನ್ ಮೆಚ್ಚುಗೆಯನ್ನು ಸೂಚಿಸಿದ್ದಾರೆ.



ತ್ರಿಶಾ ಮತ್ತು ವಿಜಯ್ ಶೀಘ್ರದಲ್ಲಿಯೇ ಅಂದರೆ ಮುಂಬರುವ ತಮಿಳುನಾಡು ಚುನಾವಣೆಯ ನಂತರ ಮದುವೆಯಾಗಲಿದ್ದಾರೆ ಎಂಬ ಅಭಿಮಾನಿ ರಚಿತ್ ಅವರ ರೀಲ್ ನ್ನೂ ಮೆಚ್ಚಿಕೊಂಡಿದ್ದಾರೆ. ಉಮಾ ಕೃಷ್ಣನ್ ಅವರ ಈ ನಡೆ ಸದ್ಯ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.

ಇದನ್ನೂ ಓದಿ: Anushka Shetty: ಕೊನೆಗೂ ಅನುಷ್ಕಾ ಶೆಟ್ಟಿಗೆ ಕೂಡಿಬಂತು ಕಂಕಣ ಭಾಗ್ಯ: ಉದ್ಯಮಿ ಜೊತೆ ಮದುವೆ?

ಉಮಾ ಕೃಷ್ಣನ್ ಕೂಡ ವಿಜಯ್ ಜೊತೆ ತ್ರಿಶಾ ಅವರ ಸಂಬಂಧವನ್ನು ಅಧಿಕೃತವಾಗಿ ಘೋಷಿಸಲು ಉತ್ಸುಕರಾಗಿದ್ದಾರೆ ಎಂದು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. ಮತ್ತೊಂದು ವರ್ಗವು ಉಮಾ ಕೃಷ್ಣನ್ ಈ ರೀಲ್ ಅನ್ನು ತಪ್ಪಾಗಿ ಲೈಕ್ ಮಾಡಿರಬಹುದು ಎಂದು ಕಮೆಂಟ್‌ ಮಾಡುತ್ತಿದ್ದಾರೆ.

Yashaswi Devadiga

View all posts by this author