ಬ್ಯಾಂಕಾಕ್: ಐಶೋಸ್ಪೀಡ್ ಎಂದೇ ಜನಪ್ರಿಯವಾಗಿರುವ ಅಮೆರಿಕನ್ ಯೂಟ್ಯೂಬರ್ ಡ್ಯಾರೆನ್ ಜೇಸನ್ ವ್ಯಾಟ್ಕಿನ್ಸ್ ಜೂನಿಯರ್ ಇತ್ತೀಚೆಗೆ ಥೈಲ್ಯಾಂಡ್‌ನಲ್ಲಿದ್ದಾಗ (Thailand) ತಮಾಷೆಯ ಮತ್ತು ಗೊಂದಲದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡರು. ಅವರು ಕಾರಿನಲ್ಲಿ ಪ್ರಯಾಣಿಸುತ್ತ ಯೂಟ್ಯೂಬ್‍ನಲ್ಲಿ (Youtube) ನೇರಪ್ರಸಾರ ಮಾಡುತ್ತಿದ್ದರು. ಈ ವೇಳೆ ಮೋಟಾರ್ ಸೈಕಲ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಭಾರತೀಯ ಯುವಕರು ಸೇರಿದಂತೆ ಉತ್ಸಾಹಭರಿತ ಅಭಿಮಾನಿಗಳ ಗುಂಪು ಅವರನ್ನು ಹಿಂಬಾಲಿಸಿದೆ. ಈ ವೇಳೆ ಟಿವಿಕೆ ಮತ್ತು ದಳಪತಿ ವಿಜಯ್ ಎಂದು ಕೂಗುತ್ತಲೇ ಇದ್ದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಅಭಿಮಾನಿಗಳು ಡ್ಯಾರೆನ್ ಜೇಸನ್ ವ್ಯಾಟ್ಕಿನ್ಸ್ ಅವರನ್ನು ನೋಡಿ ರೋಮಾಂಚನಗೊಂಡಿದ್ದರು. ಆದರೆ ಡ್ಯಾರೆನ್ ಮಾತ್ರ ಸಂಪೂರ್ಣವಾಗಿ ಗೊಂದಲಕ್ಕೊಳಗಾಗಿದ್ದರು. ಅವರು ಏನು ಹೇಳುತ್ತಾರೆಂದು ಅರ್ಥ ಮಾಡಿಕೊಳ್ಳಲು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದರು. ಆದರೆ ಅವರ ಉತ್ಸಾಹಭರಿತ ಪ್ರತಿಕ್ರಿಯೆಗಳು ಅವರಿಗೆ ವಿಚಾರವನ್ನು ಮತ್ತಷ್ಟು ಗೊಂದಲಗೊಳಿಸಿದವು.
ಲೈವ್ ಸ್ಟ್ರೀಮ್ ಸಮಯದಲ್ಲಿ ಸ್ಪೀಡ್ ಅಭಿಮಾನಿಗಳು ಟಿವಿಕೆ ಮತ್ತು ದಳಪತಿ ವಿಜಯ್ ಹೆಸರನ್ನು ಪದೇ ಪದೆ ಜಪಿಸಿದರು. ಒಂದು ಹಂತದಲ್ಲಿ, ಅಭಿಮಾನಿಗಳು ವಿಜಯ್ ಅವರನ್ನು ಭಾರತದ ಮುಖ್ಯಮಂತ್ರಿ ಎಂದು ಕೂಡ ಕರೆದರು. ಇದು ಸ್ಪೀಡ್ ಅವರನ್ನು ಗೊಂದಲಕ್ಕೀಡು ಮಾಡಿತು. ಅವರು ಕ್ರಿಕೆಟಿಗ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಿದ್ದಾರೆಯೇ ಎಂದು ಆಶ್ಚರ್ಯ ಪಡುತ್ತಿದ್ದರು. ವಿಚಿತ್ರ ಸಂವಹನದಿಂದ ಹತಾಶೆಗೊಂಡ ಅವರು ಕ್ಯಾಮರಾದಲ್ಲಿ ಕಿರಿಕಿರಿಗೊಂಡಂತೆ ಕಾಣಿಸಿಕೊಂಡರು. ಲೈವ್ ಸ್ಟ್ರೀಮ್ ಸಮಯದಲ್ಲಿ ಅಶ್ಲೀಲ ಪದಗಳನ್ನು ಸಹ ಕೇಳಿಬಂದವು.
ವಿಡಿಯೊ ವೀಕ್ಷಿಸಿ:
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, ವಿದೇಶದಲ್ಲಿ ಅಭಿಮಾನಿಗಳು ವಿಜಯ್ ಅವರನ್ನು ಏಕೆ ಅವಮಾನಿಸುತ್ತಿದ್ದಾರೆ? ಇದು ತಮಾಷೆಯಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ಹಂಚಿಕೊಂಡಿದ್ದಾರೆ. ಕೇಳುವುದರಲ್ಲಿ ತಪ್ಪೇನಿದೆ? ಎಂದು ಮತ್ತೊಬ್ಬ ಬಳಕೆದಾರರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Viral News: ಮದ್ಯ ಇಲ್ಲ, ಮಾಂಸ ಇಲ್ಲ... ಬಹಳ ವಿಚಿತ್ರವಾಗಿದೆ ಈ ವೆಡ್ಡಿಂಗ್ ಕಾರ್ಡ್!
ದಳಪತಿ ವಿಜಯ್ ಅವರನ್ನು ಜಾನ್ ವಿಕ್ ಜತೆ ಹೋಲಿಸಿದ್ದ ಸ್ಪೀಡ್
ಥೈಲ್ಯಾಂಡ್ ಪ್ರವಾಸದ ಸಮಯದಲ್ಲಿ ಸ್ಪೀಡ್, ದಳಪತಿ ವಿಜಯ್ ಹೆಸರು ಕೇಳಿ ಗೊಂದಲಕ್ಕೊಳಕ್ಕಾದರೂ, ಅವರು ಈ ಹಿಂದೆ ವಿಜಯ್ ಅವರ ಆ್ಯಕ್ಷನ್ ಮತ್ತು ಸ್ಟಂಟ್‌ಗಳನ್ನು ಕೀನು ರೀವ್ಸ್ ಅವರ ಜನಪ್ರಿಯ ಪಾತ್ರ ಜಾನ್ ವಿಕ್‌ಗೆ ಹೋಲಿಸಿದ್ದರು. ಈ ಹಿಂದೆ ಹಂಚಿಕೊಂಡಿದ್ದ ಯೂಟ್ಯೂಬ್ ಸ್ಟ್ರೀಮ್‌ನಲ್ಲಿ, ಸ್ಪೀಡ್ ʼಲಿಯೋʼ ಚಿತ್ರದ ಟ್ರೈಲರ್ ವೀಕ್ಷಿಸಿದ್ದರು.
ದಳಪತಿ ವಿಜಯ್ ಅವರ ಮುಂಬರುವ ಯೋಜನೆ
ಇತ್ತೀಚೆಗೆ ವೆಂಕಟ್ ಪ್ರಭು ಅವರ ʼದಿ ಗೋಟ್ʼ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ದಳಪತಿ ವಿಜಯ್, ಎಚ್. ವಿನೋತ್ ಅವರ ಮುಂಬರುವ ʼಜನ ನಾಯಗನ್ʼನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮತ್ತು ಮಮಿತಾ ಬೈಜು ಕೂಡ ಅಭಿನಯಿಸುತ್ತಿದ್ದಾರೆ. ರಾಜಕೀಯ ಪ್ರವೇಶಿಸುವ ಮೊದಲು ವಿಜಯ್ ನಟಿಸುತ್ತಿರುವ ಕೊನೆಯ ಚಿತ್ರ ಇದಾಗಿದೆ ಎಂದು ವರದಿಗಳು ಹೇಳಿವೆ.