ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thamma OTT Release: ಮನೆಯಲ್ಲೇ ನೋಡಿ ರಶ್ಮಿಕಾ ಮಂದಣ್ಣ ನಟನೆಯ ಹಾರರ್‌ ಕಾಮಿಡಿ ಚಿತ್ರ, ಆದ್ರು ಇಲ್ಲೊಂದು ಟ್ವಿಸ್ಟ್‌ ಇದೆ

Rashmika Mandanna: ರಶ್ಮಿಕಾ ನಟಿಸಿ, ಬಾಕ್ಸ್ ಆಫೀಸ್​​ನಲ್ಲಿ ಸೂಪರ್ ಹಿಟ್ ಆಗಿದ್ದ ‘ಥಾಮಾʼ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಕ್ಟೋಬರ್ 21, 2025 ರಂದು ಬಿಡುಗಡೆಯಾದ ಚಿತ್ರ ಈಗ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಮಿಸ್‌ ಮಾಡಿಕೊಂಡವರು ಈ ಸಿನಿಮಾವನ್ನು ಈಗ ಒಟಿಟಿಯಲ್ಲಿ ನೋಡಬಹುದು. ಆದರೆ ಟ್ವಿಸ್ಟ್‌ ಒಂದು ಇದೆ.

ಮನೆಯಲ್ಲೇ ನೋಡಿ ರಶ್ಮಿಕಾ ಮಂದಣ್ಣ ನಟನೆಯ ಹಾರರ್‌ ಕಾಮಿಡಿ ಚಿತ್ರ!

ಒಟಿಟಿ ಸಿನಿಮಾ -

Yashaswi Devadiga
Yashaswi Devadiga Dec 2, 2025 7:50 PM

ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದ ಮಹಿಳಾ ಪ್ರಧಾನ ಸಿನಿಮಾ ‘ದಿ ಗರ್ಲ್​​ಫ್ರೆಂಡ್’ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಬೆನ್ನಲ್ಲೇ ಮತ್ತೊಮ್ಮೆ ಫ್ಯಾನ್ಸ್‌ಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ರಶ್ಮಿಕಾ ನಟಿಸಿ, ಬಾಕ್ಸ್ ಆಫೀಸ್​​ನಲ್ಲಿ ಸೂಪರ್ ಹಿಟ್ ಆಗಿದ್ದ ‘ಥಾಮಾʼ (Thamma OTT Release) ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಕ್ಟೋಬರ್ 21, 2025 ರಂದು ಬಿಡುಗಡೆಯಾದ ಚಿತ್ರ ಈಗ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ (OTT Streaming) ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಮಿಸ್‌ ಮಾಡಿಕೊಂಡವರು ಈ ಸಿನಿಮಾವನ್ನು ಈಗ ಒಟಿಟಿಯಲ್ಲಿ ನೋಡಬಹುದು. ಆದರೆ ಟ್ವಿಸ್ಟ್‌ ಒಂದು ಇದೆ.

ಹಾರರ್ ಕಾಮಿಡಿ ಚಿತ್ರ

ಅಕ್ಟೋಬರ್ ತಿಂಗಳ 21ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಹಾರರ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಆಯುಷ್ಮಾನ್ ಮತ್ತು ರಶ್ಮಿಕಾ ಜೊತೆಗೆ, ಹಾರರ್ ಕಾಮಿಡಿ ಚಿತ್ರ 'ನವಾಜುದ್ದೀನ್ ಸಿದ್ದಿಕಿ' ಮತ್ತು 'ಪರೇಶ್ ರಾವಲ್' ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. OTT ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳು ಈಗ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ.

ಇದನ್ನೂ ಓದಿ: Diés Iraé OTT release: ಪ್ರಣವ್ ಮೋಹನ್ ಲಾಲ್ ನಟನೆಯ ಬೆಚ್ಚಿಬೀಳಿಸೋ ಈ ಹಾರರ್ ಮೂವಿ ಯಾವ ಒಟಿಟಿಗೆ ಎಂಟ್ರಿ?

ಸ್ಟ್ರೀಮಿಂಗ್‌ ಎಲ್ಲಿ?

ಡಿಸೆಂಬರ್ 2ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಥಾಮಾ ಸ್ಟ್ರೀಮಿಂಗ್‌ ಆಗುತ್ತಿದೆ. ಸಿನಿಮಾ ನೋಡಲು ಇಚ್ಛಿಸುವವರು ರೆಂಟ್‌ (ಬಾಡಿಗೆ) 349 ರೂ. ಹಣ ನೀಡಿ ನೋಡಬಹುದು. ನಂತರ ಡಿಸೆಂಬರ್ 16, 2025 ರಂದು ಎಲ್ಲಾ ಪ್ರೈಮ್ ವಿಡಿಯೋ ಚಂದಾದಾರರು ನೋಡಬಹುದಾಗಿದೆ ಎನ್ನಲಾಗಿದೆ.

ಸಿನಿಮಾ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಇದರ ಜೊತೆಗೆ ಒಂದು ಲವ್​ ಸ್ಟೋರಿ ಕೂಡ ಇದೆ. ಈ ಸಿನಿಮಾ ಬುಕ್​ ಮೈ ಶೋ ನಲ್ಲಿ ಒಳ್ಳೆಯ ರೇಟಿಂಗ್ ಕೂಡ ಪಡೆದುಕೊಂಡಿತ್ತು.. 'ಥಾಮಾ' ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ, ಪರೇಶ್ ರಾವಲ್, ಫೈಸಲ್ ಮಲಿಕ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಚಿನ್-ಜಿಗರ್ ಸಂಗೀತ ಸಂಯೋಜಿಸಿದ್ದಾರೆ.

ದಿನೇಶ್ ವಿಜನ್ ಈ ಚಿತ್ರವನ್ನು ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.ಹಾರರ್ ಕಾಮಿಡಿ ಚಿತ್ರ "ಥಾಮಾ" ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸಂಪೂರ್ಣವಾಗಿ ರಂಜಿಸಿತು. ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ ಈ ಚಿತ್ರವು ತನ್ನ ಆಕರ್ಷಕ ಕಥೆಯಿಂದ ಎಲ್ಲರನ್ನೂ ಮೆಚ್ಚಿಸಿತು.

ರಶ್ಮಿಕಾ ಮಂದಣ್ಣ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಸಿನಿಮಾನಲ್ಲಿ ಮಲೈಕಾ ಅರೋರಾ, ನೋರಾ ಫತೇಹಿಯ ಐಟಂ ಹಾಡುಗಳ ಸಹ ಇವೆ.

‘ಮ್ಯಾಡಾಕ್’ ನಿರ್ಮಾಣ

ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, "ಥಾಮಾ" ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಸುಮಾರು ₹121 ಕೋಟಿ ಗಳಿಸಿದೆ, ಆದರೆ ವಿಶ್ವಾದ್ಯಂತ ಅದರ ಗಳಿಕೆ ₹165 ಕೋಟಿಯನ್ನು ಮೀರಿದೆ. ‘ಮುಂಜ್ಯ’, ‘ಕುಕುಡ’ ರೀತಿಯ ಹಾರರ್ ಸಿನಿಮಾಗಳನ್ನು ನಿರ್ದೇಶಿಸಿದ ಆದಿತ್ಯ ಸರ್ಪೋತ್​ದಾರ್ ಅವರು ‘ಥಾಮಾ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಿಸಿ ಗಮನ ಸೆಳೆದ ದಿನೇಶ್ ವಿಜನ್ ಅವರ ‘ಮ್ಯಾಡಾಕ್’ ನಿರ್ಮಾಣ ಮಾಡಿದೆ.

ಇದನ್ನೂ ಓದಿ: Kaantha OTT: ದುಲ್ಕರ್ ಸಲ್ಮಾನ್, ರಾಣಾ ಅಭಿನಯದ 'ಕಾಂತ'; ಒಟಿಟಿಗೆ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

ಮತ್ತೊಂದು ಕಡೆ ರಶ್ಮಿಕಾ ಅವರ ‘ದಿ ಗರ್ಲ್​ಫ್ರೆಂಡ್’ ಸಿನಿಮಾ ಡಿಸೆಂಬರ್ 05 ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾನಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ವಿಮರ್ಶಕರ ಮನ ಗೆದ್ದ ಸಿನಿಮಾ ಆಗಿದೆ.