ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಬಿಗ್‌ ಬಾಸ್‌ ಮನೆಯಿಂದ ತಾಂಡವ್‌ ರಾಮ್‌ ಔಟ್‌! ಬಿಕ್ಕಿ ಬಿಕ್ಕಿ ಅತ್ತ ಗಗನ್‌

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಅಂತೂ ಮಿಡ್‌ ವೀಕ್‌ ಎಲಿಮಿನೇಶನ್‌ ನಡೆದಿದೆ. ತಾಂಡವ್‌ ರಾಮ್‌ ಔಟ್‌ ಆಗಿದ್ದಾರೆ. ಗಗನ್‌, ಧನುಷ್‌ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಎಲ್ಲಾ ಮನೆಯ ಸದಸ್ಯರನ್ನು ನಾಮಿನೇಟ್ ಮಾಡುವ ಮೂಲಕ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ ಎಂಬ ಸುಳಿವು ನೀಡಿದ್ದರು.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಅಂತೂ ಮಿಡ್‌ ವೀಕ್‌ ಎಲಿಮಿನೇಶನ್‌ ನಡೆದಿದೆ. ತಾಂಡವ್‌ ರಾಮ್‌ ಔಟ್‌ (Thandav Ram Eliminate) ಆಗಿದ್ದಾರೆ. ಗಗನ್‌, ಧನುಷ್‌ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಎಲ್ಲಾ ಮನೆಯ ಸದಸ್ಯರನ್ನು ನಾಮಿನೇಟ್ ಮಾಡುವ ಮೂಲಕ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ ಎಂಬ ಸುಳಿವು ನೀಡಿದ್ದರು. ಹೀಗಾಗಿ ಮನೆಯಿಂದ ಒಬ್ಬರು ಹೊರಹೋಗುವುದು ಖಚಿತ ಎಂಬುದು ವೀಕ್ಷಕರಿಗೆ ತಿಳಿದಿತ್ತು. ಆದರೆ, ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದೇ ಎಲ್ಲರಿಗೂ ದೊಡ್ಡ ಪ್ರಶ್ನೆಯಾಗಿತ್ತು. ಅಂತೂ ಈಗ ಉತ್ತರ ವೀಕ್ಷಕರಿಗೆ ಸಿಕ್ಕಿದೆ.



ಇದನ್ನೂ ಓದಿ: ‌Bigg Boss Kannada 13ಬಿಗ್‌ಬಾಸ್ ಮನೆಗೆ ಮತ್ತೆ ಬರ್ತಿದ್ದಾರೆ ಈ ಡ್ಯಾನ್ಸರ್!

50% ವೋಟ್ ಕಸಿಯುವ ಹೊಸ ಟ್ವಿಸ್ಟ್ ನೀಡಲಾಗಿತ್ತು. ಈ ರೋಚಕ ಪ್ರಕ್ರಿಯೆ ದೊಡ್ಮನೆಯ ಆಟವನ್ನೇ ಬದಲಾಯಿಸಿದ್ದು, ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.ಅಡ್ವಾಂಟೇಜ್ ಪಡೆದಿರುವ ನಾಲ್ವರು ಸ್ಪರ್ಧಿಗಳು, ತಮ್ಮಿಚ್ಛೆಯ ಯಾವುದೇ ಒಬ್ಬ ಸದಸ್ಯರ ಒಟ್ಟು ವೋಟ್‌ಗಳಲ್ಲಿ ಶೇಕಡಾ 50% ರಷ್ಟು ವೋಟ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದು.ತಮ್ಮ ವೋಟ್‌ಗಳನ್ನು ಹೆಚ್ಚಿಸಿಕೊಂಡು ಎಲಿಮಿನೇಷನ್‌ನಿಂದ ಬಚಾವ್ ಆಗುವ ಅವಕಾಶ ಕೆಲವರಿಗೆ ಸಿಕ್ಕರೆ, ಮತ್ತೆ ಕೆಲವರು ವೋಟ್‌ಗಳನ್ನು ಕಳೆದುಕೊಂಡು ನೇರವಾಗಿ ಮನೆಯಿಂದ ಹೊರಹೋಗುವ ಅಪಾಯದಲ್ಲಿ ಇದ್ದರು. ಧನುಷ್‌ ಈ ಅಡ್ವಾಟೇಂಜ್‌ ಪಡೆದು ತಾಂಡವ್‌ ಮನೆಗೆ ಹೋಗುವಂತಾಯ್ತು.

ಇನ್ನು ವೀಕ್ಷಕರು ಕೂಡ ತಾಂಡವ್‌ ಔಟ್‌ ಆಗಿರೋದು ಡೌಟ್‌ ಅಂತ ಕಮೆಂಟ್‌ ಮಾಡಿದ್ದಾರೆ, ವೋಟಿಂಗ್‌ ಲೈನ್‌ ಮತ್ತೆ ಓಪನ್‌ ಆಗಿದೆ. ಇನ್ನೂ ಇಬ್ಬರು ಎಲಿಮಿನೇಟ್‌ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಶೇಷವೆಂದರೆ ತಾಂಡವ್ ಅವರು ಕಡಿಮೆ ಮತ ಪಡೆದು ಹೊರಗೆ ಹೋಗಿದ್ದಲ್ಲ, ಬದಲಿಗೆ ಅದೃಷ್ಟ ಕೈಕೊಟ್ಟ ಕಾರಣ ಹೊರಗೆ ಹೋಗಿದ್ದು. ಅಲ್ಲಿಗೆ ಈ ವಾರ ಜನ ಬಯಸಿದವರು ಹೊರಗೆ ಹೋಗಿಲ್ಲ ಬದಲಿಗೆ ಅದೃಷ್ಟ ಯಾರಿಗೆ ಇರಲಿಲ್ಲವೋ ಅವರು ಹೊರಗೆ ಹೋಗಿದ್ದಾರೆ.

ಇದನ್ನೂ ಓದಿ: BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

ಕಿರಣ್ ಶಾಸ್ತ್ರಿ, ಸೌಂಧರ್ಯ ಹೆಸರು ತೆಗೆದುಕೊಂಡ, ಕಾವ್ಯಾ ಅವರು ಜಗ್ಗಿ ಹೆಸರು ತೆಗೆದುಕೊಂಡರು. ಆಸಿಯಾ, ಲಿಖಿತ್ ಮನೆಯಿಂದ ಹೊರಗೆ ಹೋಗಬೇಕೆಂದು ಅವರ ಹೆಸರು ತೆಗೆದುಕೊಂಡರು. ಆಸಿಯಾ ಬಿಟ್ಟು ಇನ್ನೆಲ್ಲರೂ, ಹೆಚ್ಚು ಮತ ಬಂದಿರಬಹುದು ಎಂಬ ಕಾರಣಕ್ಕಾಗಿಯೇ ಹೆಸರುಗಳನ್ನು ತೆಗೆದುಕೊಂಡರು. ಆದರೆ ಆಗಿದ್ದು ಉಲ್ಟಾ ಆಗಿದೆ.

Yashaswi Devadiga

View all posts by this author