ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Devil Box Office Collection: 2ನೇ ದಿನ 'ಡೆವಿಲ್' ಕಲೆಕ್ಷನ್ ಎಷ್ಟು? ದರ್ಶನ್ ಅಬ್ಬರ ಹೇಗಿದೆ?

Darshan: ದರ್ಶನ್ ಅಭಿಮಾನಿಗಳು 'ಡೆವಿಲ್' ಸಿನಿಮಾವನ್ನು ಗೆಲ್ಲಿಸುವುದಕ್ಕೆ ಪಣ ತೊಟ್ಟು ನಿಂತಿದ್ದಾರೆ. ಅವರೇ ಮುಂದೆ ನಿಂತು ಥಿಯೇಟರ್‌ಗಳ ಮುಂದೆ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ಚಿತ್ರತಂಡ ಕೊಟ್ಟ ಅಂಕಿ-ಅಂಶಗಳಂತೆ ಈ ಸಿನಿಮಾ ₹13.8 ಕೋಟಿ ಆಗಿದೆ. ಎರಡನೇ ದಿನ ಸಿನಿಮಾ ಅಷ್ಟಾಗಿ ಕಲೆಕ್ಷನ್‌ ಮಾಡಿಲ್ಲ. ಎರಡನೇ ದಿನ ವೀಕ್‌ಡೇಸ್ ಆಗಿದ್ದರಿಂದ ಜನರು ಥಿಯೇಟರ್‌ ಕಡೆಗೆ ಮುಖ ಮಾಡಿದಂತೆ ಕಾಣುತ್ತಿಲ್ಲ.

ನಟ ದರ್ಶನ್‌

ದರ್ಶನ್ ಅಭಿಮಾನಿಗಳು 'ಡೆವಿಲ್' (The Devil Movie) ಸಿನಿಮಾವನ್ನು ಗೆಲ್ಲಿಸುವುದಕ್ಕೆ ಪಣ ತೊಟ್ಟು ನಿಂತಿದ್ದಾರೆ. ಅವರೇ ಮುಂದೆ ನಿಂತು ಥಿಯೇಟರ್‌ಗಳ ಮುಂದೆ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ಚಿತ್ರತಂಡ ಕೊಟ್ಟ ಅಂಕಿ-ಅಂಶಗಳಂತೆ ಈ ಸಿನಿಮಾ ₹13.8 ಕೋಟಿ ಆಗಿದೆ. ಎರಡನೇ ದಿನ ಸಿನಿಮಾ ಅಷ್ಟಾಗಿ ಕಲೆಕ್ಷನ್‌ ( Box Office Collection) ಮಾಡಿಲ್ಲ. ಎರಡನೇ ದಿನ ವೀಕ್‌ಡೇಸ್ ಆಗಿದ್ದರಿಂದ ಜನರು ಥಿಯೇಟರ್‌ ಕಡೆಗೆ ಮುಖ ಮಾಡಿದಂತೆ ಕಾಣುತ್ತಿಲ್ಲ. ಆದರೆ, ವೀಕೆಂಡ್‌ನಲ್ಲಿ 'ಡೆವಿಲ್' ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ವರದಿಯ ಪ್ರಕಾರ ಎರಡನೇ ದಿನ ಸಿನಿಮಾ sacnilk ವರದಿ ಮೂರುವರೆ ಕೋಟಿ ರೂಪಾಯಿ ಗಳಿಸಿದೆ. ಒಟ್ಟೂ ಕಲೆಕ್ಷನ್ 17 ಕೋಟಿ ರೂಪಾಯಿ ಆಗಿದೆ. ಕರ್ನಾಟಕದ ವಿತರಕರ ಪ್ರಕಾರ 2ನೇ ದಿನಕ್ಕೆ 'ಡೆವಿಲ್' ಸಿನಿಮಾ ₹5 ರಿಂದ ₹5.5 ಕೋಟಿ ಕೋಟಿ ಕಲೆಕ್ಷನ್ ಆಗಿದೆ. ‘ಕಾಟೇರ’ ಸಿನಿಮಾ ಈ ಮೊದಲು ರಿಲೀಸ್ ಆಗಿ ಸಂಚಲನ ಮೂಡಿಸಿತ್ತು. ಈ ದಾಖಲೆಯನ್ನು ‘ಡೆವಿಲ್’ ಬಳಿ ಮುರಿಯೋಕೆ ಆಗೋದು ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ: Bigg Boss Kannada 12: ವಿಲನ್ ಟಾಸ್ಕ್‌ಗಳಿಗೆ ಸ್ಪರ್ಧಿಗಳು ತತ್ತರ! ವೇಸ್ಟ್‌ ಅಂತ ಅಂದಿದ್ದ ಗಿಲ್ಲಿಗೆ ಕಾವು ಕೊಟ್ಟೇ ಬಿಟ್ರಾ ಉತ್ತರ?

ದರ್ಶನ್ ಮಿಂಚಿಂಗ್‌!

ಬಹಳ ವರ್ಷಗಳ ನಂತರ ಪೊಲಿಟಿಕಲ್ ಕಂಟೆಟ್ ಇರುವ ಸಿನಿಮಾದಲ್ಲಿ ದರ್ಶನ್ ಮಿಂಚಿದ್ದಾರೆ. ಇದ್ರೆ ನೆಮ್ಮದಿಯಾಗಿರಬೇಕು ಸಾಂಗ್‌ ನೋಡಲು ಚೆಂದ. ರಚನಾ ರೈ ತೆರೆ ಮೇಲೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಫ್ಯಾನ್ಸ್‌ಗೆ ಹಬ್ಬದಂತಿದೆ.ಕೃಷ್ಣ – ರುಕ್ಮಿಣಿಯಾಗಿ ದರ್ಶನ್ ಮತ್ತು ರಚನಾ ರೈ ಅಭಿನಯಿಸಿದ್ದಾರೆ.



ಪೊಲಿಟಿಕಲ್ ಕಹಾನಿ ನಡುವೆ ಲವ್ ಸ್ಟೋರಿ ಕೂಡ ಈ ಚಿತ್ರದಲ್ಲಿ ಇದೆ.ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ದರ್ಶನ್‌. ಒಬ್ಬ ಸಿಂಪಲ್ ಮ್ಯಾನ್. ಇನ್ನೊಬ್ಬ ಮನುಷ್ಯ ರೂಪದ ರಾಕ್ಷಸ. ದ್ವಿಪಾತ್ರದ ಕಾರಣದಿಂದ ಕಥೆಗೆ ಟ್ವಿಸ್ಟ್ ಇದೆ ಅಂತ ಹಂಚಿಕೊಂಡಿದ್ದಾರೆ ಫ್ಯಾನ್ಸ್‌.

ಇದನ್ನೂ ಓದಿ: Actor Darshan: ತಂದೆ -ತಾಯಿ ಕಳೆದುಕೊಂಡ್ರು ದುಃಖ ಇಲ್ಲ, ಆದ್ರೆ ದರ್ಶನ್‌ ಇಲ್ಲ ಅನ್ನೋದೇ ತುಂಬಾ ನೋವು! ಅಭಿಮಾನಿಯ ಹೇಳಿಕೆ

ಈ ಚಿತ್ರವನ್ನು ಪ್ರಕಾಶ್‌ ವೀರ್‌ ನಿರ್ದೇಶಿಸಿದ್ದು, ಚಿತ್ರಕಥೆಯಲ್ಲಿ ಇನ್ನಷ್ಟು ಹೊಸತನ ಮತ್ತು ಶಾರ್ಪ್‌ನೆಸ್‌ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಅಚ್ಯುತ್‌ ಕುಮಾರ್‌, ಮಹೇಶ್‌ ಮಂಜ್ರೇಕರ್‌, ರಚನಾ ರೈ, ಶರ್ಮಿಳಾ ಮಾಂಡ್ರೆ, ಹುಲಿ ಕಾರ್ತಿಕ್‌, ಗಿಲ್ಲಿ ನಟ, ವಿನಯ್‌ ಗೌಡ, ರೋಜರ್‌ ನಾರಾಯಣ್‌ ಮುಂತಾದವರು ನಟಿಸಿದ್ದಾರೆ.

Yashaswi Devadiga

View all posts by this author