Bigg Boss Kannada 12: ವಿಲನ್ ಟಾಸ್ಕ್‌ಗಳಿಗೆ ಸ್ಪರ್ಧಿಗಳು ತತ್ತರ! ವೇಸ್ಟ್ ಅಂತ ಅಂದಿದ್ದ ಗಿಲ್ಲಿಗೆ ಕಾವು ಕೊಟ್ಟೇ ಬಿಟ್ರಾ ಉತ್ತರ?
Kavya Shaiva: ಈ ವಾರ ಬಿಗ್ ಬಾಸ್ ಮನೆಯಲ್ಲಿ ವಿಲನ್‌ದೇ ರೂಲ್ಸ್. ವಿಲನ್ ಹೇಳಿದಂತೆ ಕೇಳೋದು ಸ್ಪರ್ಧಿಗಳ ಟಾಸ್ಕ್ ಆಗಿದೆ. ಇದೀಗ ಬಿಗ್ಬಾಸ್, ಮನೆ ಮಂದಿಗೆ ಮತ್ತೊಂದು ಕಠಿಣ ಟಾಸ್ಕ್ ನೀಡಿದ್ದಾರೆ. ಮನೆ ಮಂದಿಯಲ್ಲಿ ಒಬ್ಬರು ಹಚ್ಚೆ ಹಾಕಿಸಿಕೊಳ್ಳಬೇಕು, ಒಬ್ಬ ಮಹಿಳಾ ಸ್ಪರ್ಧಿ ತಲೆಗೆ ಬಣ್ಣ ಹಾಕಿಕೊಳ್ಳಬೇಕು ಎಂಬ ಟಾಸ್ಕ್ ಕೊಟ್ಟಿದ್ದಾರೆ. ಯಾರದರೂ ಒಬ್ಬರು ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ. ಹೇರ್ ಕಲರ್‌ನ ಒಬ್ಬರು ಹಾಕಿಕೊಳ್ಳಬೇಕು ಅಂತ ಹೇಳಿದೆ ವಿಲನ್.
ಬಿಗ್ ಬಾಸ್ ಕನ್ನಡ -
ಈ ವಾರ ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ವಿಲನ್‌ದೇ ರೂಲ್ಸ್. ವಿಲನ್ ಹೇಳಿದಂತೆ ಕೇಳೋದು ಸ್ಪರ್ಧಿಗಳ ಟಾಸ್ಕ್ ಆಗಿದೆ. ಇದೀಗ ಬಿಗ್ಬಾಸ್, ಮನೆ ಮಂದಿಗೆ ಮತ್ತೊಂದು ಕಠಿಣ ಟಾಸ್ಕ್ ನೀಡಿದ್ದಾರೆ. ಮನೆ ಮಂದಿಯಲ್ಲಿ ಒಬ್ಬರು ಹಚ್ಚೆ ಹಾಕಿಸಿಕೊಳ್ಳಬೇಕು, ಒಬ್ಬ ಮಹಿಳಾ ಸ್ಪರ್ಧಿ ತಲೆಗೆ ಬಣ್ಣ ಹಾಕಿಕೊಳ್ಳಬೇಕು ಎಂಬ ಟಾಸ್ಕ್ ಕೊಟ್ಟಿದ್ದಾರೆ. ಅಶ್ವಿನಿ (Ashwini) ಅವರು ಕಾವ್ಯಾ ತಲೆಗೆ ಬಣ್ಣ ಬಳಿದಿದ್ದಾರೆ. ಈ ವೇಳೆ ರಜತ್ (Rajath) ಸ್ವಲ್ಪ ಸ್ಪಂದನಾ ಅವರಿಗೆ ಗರಂ ಆಗಿ ಮಾತನಾಡಿದ್ದಾರೆ.
ರಜತ್ ಗರಂ
ಯಾರದರೂ ಒಬ್ಬರು ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ. ಹೇರ್ ಕಲರ್‌ನ ಒಬ್ಬರು ಹಾಕಿಕೊಳ್ಳಬೇಕು ಅಂತ ಹೇಳಿದೆ ವಿಲನ್.
ಇದನ್ನೂ ಓದಿ: Bigg Boss Kannada 12: ಬೆನ್ನಿಗೆ ಚೂರಿ ಹಾಕ್ಬಿಟ್ರಲ್ರಿ, ನೀನು ಫ್ರೀ ಪ್ರಾಡಕ್ಟ್! ಗಿಲ್ಲಿ ಮಾತಿಗೆ ಕಾವ್ಯ ಕಣ್ಣೀರು
ಕಾವ್ಯಾಗೆ ಸಹಜವಾಗಿಯೇ ಅದು ಇಷ್ಟವಾಗಿಲ್ಲ, ಆದರೂ ಟಾಸ್ಕ್ಗಾಗಿ ಸಹಿಸಿಕೊಂಡಿದ್ದಾರೆ. ಬಣ್ಣ ಬಳಿದ ಅಶ್ವಿನಿ ಮೇಲೆ ರಜತ್ ಕೋಪ ವ್ಯಕ್ತಪಡಿಸಿದ್ದಾರೆ. ವಿಲನ್ ಹೇಳಿದಂತೆ ಈ ಟೀಂ ಕೇಳಬೇಕು. ಯಾರು ಮಾತು ಕೇಳಿ ಟಾಸ್ಕ್ ಕಂಪ್ಲೀಟ್ ಮಾಡುತ್ತಾರೋ ಅವರಿಗೆ ಪಾಯಿಂಟ್ಸ್ ಸಿಗುವುದು. ಈಗ ಎರಡು ಟೀಂ ಭರ್ಜರಿಯಾಗಿ ಆಟ ಆಡಿದೆ.
ಈ ಹಿಂದಿನ ಸೀಸನ್‌ಗಳಲ್ಲಿ ತಲೆ ಕೂದಲು ತೆಗೆಸಿಕೊಳ್ಳುವ ಸಂದರ್ಭ ಬಂದಿತ್ತು. ಕಾರ್ತಿಕ್ ಮಹೇಶ್ ಅವರು ಗುಂಡು ಹೊಡೆಸಿಕೊಂಡಿದ್ದರು.ಅಂದಹಾಗೆ ಒಬ್ಬರು ಹಚ್ಚೆ ಹಾಕಿಸಿಕೊಂಡಿದ್ದಾರೆ. ಮಹಿಳಾ ಸ್ಪರ್ಧಿಗಳಲ್ಲಿ ರಾಶಿಕಾ ಶೆಟ್ಟಿ ಅವರು ಕೂದಲಿಗೆ ಕಲರಿಂಗ್ ಮಾಡಿಸಿಕೊಳ್ಳಲು ನಿರಾಕರಣೆ ಮಾಡಿದ್ದಾರೆ.
ಕಲರ್ಸ್ ಕನ್ನಡ ಪ್ರೋಮೋ
ಸ್ಪಂದನಾ ಜೊತೆ ಜಗಳ
ಆದರೆ ಕಾವ್ಯ ಶೈವ ಅವರು ಕೂದಲಿಗೆ ಕಲರಿಂಗ್ ಮಾಡಿಸಿದ್ದಾರೆ. ಇದನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಕಾವ್ಯ ಶೈವ ಅವರಿಗೆ ಗಿಲ್ಲಿ, “ನೀನು ವೇಸ್ಟ್, ಪ್ರಿ ಪ್ರೊಡಕ್ಟ್, ಏನೂ ಮಾಡಿಲ್ಲ, ಲಕ್ಕಿ” ಎಂದೆಲ್ಲ ಹೇಳಿದ್ದರು. ಇದೀಗ ಕಾವ್ಯ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದಾರೆ.
ಸ್ಪಂದನಾ ಸೋಮಣ್ಣ ಅವರು ಕಾವ್ಯ ಶೈವಗೆ ಬಣ್ಣ ಹಚ್ಚಿದ್ದಾರೆ. ಆ ವೇಳೆ ರಜತ್ “ಹೇಳಿದ್ದು ಅರ್ಥ ಆಗಲ್ಲ, ಟಾಸ್ಕ್ ಮಾಡಲ್ಲ, ಸುಮ್ಮನೆ ಪುಕ್ಸಟ್ಟೆ ಮಾತುಗಳು” ಎಂದು ಹೇಳಿದ್ದಾರೆ. ಸ್ಪಂದನಾ ಸೋಮಣ್ಣ ಅವರು, “ನಿಮಗೆ ಕೊಟ್ಟಿದ್ದರೂ ಹೀಗೆ ಮಾಡ್ತಿದ್ರಿ” ಎಂದಿದ್ದಾರೆ.
ಗಿಲ್ಲಿ ನಾಮಿನೇಟ್ ಮಾಡೋದೇಕೆ?
ಪ್ರತಿ ವಾರ ಗಿಲ್ಲಿಯನ್ನ ಕೆಲವು ಸ್ಪರ್ಧಿಗಳು ನಾಮಿನೇಟ್ ಮಾಡ್ತಾನೆ ಇರ್ತಾರೆ. ಆದರೆ ಕಾರಣ ಕೊಡೋದು ಮಾತ್ರ ಒಂದೇ. ಗಿಲ್ಲಿ ಸೋಮಾರಿ, ಕಾಮಿಡಿ ಮಾಡಿ ಡೌನ್ ಮಾಡ್ತಾನೆ ಅಂತ. ಈ ಬಗ್ಗೆ ರಜತ್ ಅವರು ಟಾಂಗ್ ಕೊಟ್ಟಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ನಾವು ಈಗ ಆಟ ಆಡೋವಷ್ಟು ನೀವ್ಯಾರು ಆಡಿಲ್ಲ ಅಂತ ಪರೋಕ್ಷವಾಗಿಯೇ ಹೇಳಿದ್ದಾರೆ.
ರಜತ್ ಹೇಳಿದ್ದೇನು?
73 ದಿನ ಜರ್ನಿಯನ್ನ ನಾವಿಬ್ಬರೂ ಕೇವಲ 15 ದಿನದಲ್ಲಿ ಹೊಡೆದು ಹಾಕಿದ್ದೀವಿ ಅಂತ ಯೋಚನೆ ಮಾಡ್ತಾ ಇದ್ದೇವೆ ಅಂತ ಚೈತ್ರಾ ಹೇಳಿದರು. ಹಾಗಾದ್ರೆ ಇದ್ರಲ್ಲಿ ಏನರ್ಥ ಅಂದರೆ ನಿಮಗೆ ಯಾರಿಗೂ ತಲೆ ಇಲ್ಲ ಅಂತ. ನಮ್ಮನ್ನ ಹೈಲೆಟ್ ಮಾಡೋ ಅವಶ್ಯತೆನೇ ಇರಲಿಲ್ಲ. ಆರಂಭದಿಂದ ಇಲ್ಲಿಯವರೆಗೆ ಸಾವಿರಾರೂ ಕಾರಣ ಕೊಡಬಹುದಿತ್ತು ಎಂದರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ವಿಲನ್ ಆದ್ರೆ, ರಕ್ಷಿತಾ ಕುತಂತ್ರಿ ಎಂದ ಕಾವ್ಯ!
ಅದಕ್ಕೆ ರಾಶಿಕಾ, ನಮಗೆ ನೀವೇನೂ ಕಣ್ಣಿಗೆ ಕಾಣಿಸಿಲ್ಲ ಅಂತ ತಿರುಗೇಟು ಕೊಟ್ಟರು. ಆಗ ರಜತ್ ಮಾತನಾಡಿ, ರಘು ಸರ್‌ಗೂ ನಾನು ಇವತ್ತು ಅದನ್ನೇ ಹೇಳಿದೆ. ಗಿಲ್ಲಿ ಅಂತ ಬಂದರೆ ಜೋಕ್ ಮಾಡ್ತಾನೆ. ಮನಸ್ಸಿಗೆ ಹರ್ಟ್ ಮಾಡ್ತಾನೆ. ಮೂರು ವಾರ ಆಯ್ತು ನಾವು ಬಂದಾಗಿಂದ ಕೇಳ್ತಾ ಇರೋದು ಇದೊಂದೇ ರೀಸನ್. ಅವನನ್ನ ನಾಮಿನೇಟ್ ಮಾಡಿ ತೊಂದರೆ ಇಲ್ಲ. ಬೇರೆ ಕಾರಣಗಳನ್ನು ಕೊಡಿ. 80ಪರ್ಸೆಂಟ್ ಜನ ಬರೀ ಇದೇ ಕಾರಣ ಕೊಡ್ತಾರೆ ಎಂದಿದ್ದಾರೆ ರಜತ್.