ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಿಲೀಸ್‌ ಆಗಿ 7 ವಾರವಾದರೂ‌ ಒಟಿಟಿಗೆ ಬಂದಿಲ್ಲ ʻದಿ ಡೆವಿಲ್ʼ ಸಿನಿಮಾ; ಈ ದಿನದಂದು ದರ್ಶನ್‌ ಫ್ಯಾನ್ಸ್‌ಗೆ ಸಿಗಬಹುದೇ ಸಿಹಿ ಸುದ್ದಿ?

ದಿ ಡೆವಿಲ್ ಸಿನಿಮಾ ಬಿಡುಗಡೆಯಾಗಿ 7 ವಾರಗಳು ಕಳೆದಿದ್ದರೂ ಇನ್ನೂ ಒಟಿಟಿಗೆ ಬಾರದಿರುವುದು ದರ್ಶನ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಡಿಸೆಂಬರ್ 11ರಂದು ಅದ್ದೂರಿಯಾಗಿ ತೆರೆಕಂಡಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಪಡೆದಿತ್ತು. ಡಿಸೆಂಬರ್‌ 25ರಂದು ತೆರೆಕಂಡಿದ್ದ ಮಾರ್ಕ್ ಮತ್ತು 45 ಚಿತ್ರಗಳು ಈಗಾಗಲೇ ಒಟಿಟಿಗೆ ಬಂದಿದ್ದರೂ, ಡೆವಿಲ್ ಅಪ್ಡೇಟ್ ವೀಕ್ಷಕರಲ್ಲಿ ಕಾತರ ಹೆಚ್ಚಿಸಿದೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ದಿ ಡೆವಿಲ್‌ ಸಿನಿಮಾವು ಡಿಸೆಂಬರ್‌ 11ರಂದು ತೆರೆಗೆ ಬಂದಿತ್ತು. ಇಂದಿಗೆ ಆ ಸಿನಿಮಾ ತೆರೆಕಂಡು ಭರ್ತಿ 48 ದಿನಗಳಾಗಿವೆ. ಅರ್ಥಾತ್‌, 7 ವಾರ ಕಳೆದಿವೆ. ಮೊದಲ ದಿನವೇ 10 ರಿಂದ 12 ಕೋಟಿ ರೂಪಾಯಿ ಗಳಿಸಿ, 2025ರಲ್ಲಿ ತೆರೆಕಂಡ ಕನ್ನಡ ಸಿನಿಮಾಗಳಲ್ಲೇ ಅತಿದೊಡ್ಡ ಓಪನಿಂಗ್‌ ಪಡೆದ ಚಿತ್ರಗಳಲ್ಲಿ ಡೆವಿಲ್‌ ಕೂಡ ಒಂದಾಗಿದೆ. ಆದರೆ ಇಷ್ಟು ದಿವಸವಾದರೂ ಈ ಚಿತ್ರವಿನ್ನೂ ಓಟಿಟಿಗೆ ಬಂದಿಲ್ಲ ಅನ್ನೋದು ದರ್ಶನ್‌ ಅಭಿಮಾನಿಗಳ ಬೇಸರ.

ಒಟಿಟಿ ಅಂಗಳದಲ್ಲಿ ಮಾರ್ಕ್‌, 45!

ದಿ ಡೆವಿಲ್‌ ನಂತರ ಮಾರ್ಕ್‌ ಮತ್ತು 45 ಸಿನಿಮಾಗಳು ತೆರೆಕಂಡಿದ್ದವು. ಸುದೀಪ್‌ ಅಭಿನಯದ ಮಾರ್ಕ್‌ ಮತ್ತು ಶಿವರಾಜ್‌ಕುಮಾರ್‌, ರಾಜ್‌ ಬಿ ಶೆಟಿ ಉಪೇಂದ್ರ ಅಭಿನಯದ ʻ45ʼ ಸಿನಿಮಾಗಳು ಡಿಸಂಬರ್‌ 25ರಂದು ತೆರೆಕಂಡಿದ್ದವು. ಆದರೆ ಈಗಾಗಲೇ ಈ ಎರಡೂ ಸಿನಿಮಾಗಳು ಜನವರಿ 23ರಂದೇ ಒಟಿಟಿಗೆ ಲಗ್ಗೆ ಇಟ್ಟಿವೆ. 45 ಚಿತ್ರವು ಜೀ5ರಲ್ಲಿ ಸ್ಟ್ರೀಮಿಂಗ್‌ ಆಗುತ್ತಿದ್ದರೆ, ಮಾರ್ಕ್‌ ಸಿನಿಮಾವು ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಆದರೆ ಇವೆರಡೂ ಸಿನಿಮಾಗಳಿಗಿಂತ ಮುಂಚೆ ರಿಲೀಸ್‌ ಆದ ದಿ ಡೆವಿಲ್‌ ಒಟಿಟಿ ರಿಲೀಸ್‌ ಬಗ್ಗೆ ಯಾವುದೇ ಅಪ್ಡೇಟ್‌ ಇಲ್ಲ ಅನ್ನೋದು ದರ್ಶನ್‌ ಫ್ಯಾನ್ಸ್‌ಗೆ ಬೇಸರದ ವಿಚಾರ.

Gilli Nata: ʻಬಿಗ್‌ ಬಾಸ್‌ ಮನೆಯಲ್ಲಿ ದಿ ಡೆವಿಲ್‌ ಸಿನಿಮಾ ಟ್ರೇಲರ್‌ ಪ್ರಸಾರ ಮಾಡಿಲ್ಲವೇಕೆʼ; ಗಿಲ್ಲಿ ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ!

ದರ್ಶನ್‌ ಹುಟ್ಟುಹಬ್ಬಕ್ಕೆ ರಿಲೀಸ್?‌

ಅಂದಹಾಗೆ, ಫೆಬ್ರವರಿ 16ರಂದು ದರ್ಶನ್‌ ಹುಟ್ಟುಹಬ್ಬ. ಅಂದು ದಿ ಡೆವಿಲ್‌ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್‌ ಮಾಡಬಹುದಾ? ಗೊತ್ತಿಲ್ಲ. ಸದ್ಯದ ಮಾಹಿತಿ ಪ್ರಕಾರ, ಫೆಬ್ರವರಿ 16ರಂದೇ ದಿ ಡೆವಿಲ್‌ ಒಟಿಟಿಗೆ ಎಂಟ್ರಿ ನೀಡಲಿದೆಯಂತೆ. ಅಭಿಮಾನಿಗಳಿಗೆ ದರ್ಶನ್ ಅವರ ದ್ವಿಪಾತ್ರ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಹಬ್ಬದೂಟವಾಗಿತ್ತು. ವಿಶೇಷವಾಗಿ 'ಡೆವಿಲ್' ಪಾತ್ರದ ಮ್ಯಾನರಿಸಂ ಮತ್ತು ಡೈಲಾಗ್ ಡೆಲಿವರಿ ಮೆಚ್ಚುಗೆ ಗಳಿಸಿತ್ತು. ಇದೀಗ ಒಟಿಟಿಯಲ್ಲೂ ನೋಡಿ ಫ್ಯಾನ್ಸ್‌ ಇದನ್ನು ಖುಷಿಯಾಗಲು ಕಾಯುತ್ತಿದ್ದಾರೆ. ಇನ್ನು, 'ದಿ ಡೆವಿಲ್' ಸಿನಿಮಾದ ಒಟಿಟಿ ಬಿಡುಗಡೆಯ ದಿನಾಂಕ ಅಥವಾ ಪ್ಲಾಟ್‌ಫಾರ್ಮ್ ಬಗ್ಗೆ ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.

Actor Darshan: ದರ್ಶನ್‌ಗೆ ಜಾಮೀನು ರದ್ದು; ದಿ ಡೆವಿಲ್‌ ಸಿನಿಮಾಗಿದ್ಯಾ ಕಂಟಕ? ಬಿಡುಗಡೆ ಯಾವಾಗ?

ಪ್ರಕಾಶ್ ವೀರ್ ನಿರ್ದೇಶನದ ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡರೆ, ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್‌, ಗಿಲ್ಲಿ ನಟ‌, ಶೋಭರಾಜ್, ವಿನಯ್‌ ಗೌಡ, ಚಂದು ಗೌಡ, ರೋಜರ್‌ ನಾರಾಯಣ್‌, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದರು. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ ಮಾಡಿದ್ದರು.