ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಬಿಗ್‌ ಬಾಸ್‌ ಶೋಗಾಗಿ ಈ ಧಾರಾವಾಹಿಗಳು ಅಂತ್ಯ? ಯಾವುದೆಲ್ಲ?

Kannada Serial: ಪ್ರತಿ ವರ್ಷ ಬಿಗ್ ಬಾಸ್ ಶೋನಲ್ಲಿ ಒಂದಲ್ಲಾ ಒಂದು ಹೊಸತನ ಇರುತ್ತದೆ. ಈ ಬಾರಿ ಕೂಡ ಹೊಸತನವನ್ನು ಪರಿಚಯಿಸಲಾಗಿದೆ. ಆಡಿಷನ್ ಮೂಲಕ ಅವಕಾಶ ನೀಡಲಾಗುತ್ತಿದೆ. ಪ್ರೋಮೋ ಮೂಲಕ ಜನಸಾಮಾನ್ಯರಿಗೆ ಕರೆ ನೀಡಲಾಗಿದೆ. ಬಿಗ್‌ ಬಾಸ್‌ ಶೋ (Bigg Boss Show) ಒಂದೂವರೆ ಗಂಟೆಗಳ ಕಾಲ ಪ್ರಸಾರ ಆಗುವುದು.ಹಾಗಾಗಿ ಯಾವ ಸೀರಿಯಲ್‌ ಅಂತ್ಯ ಕಾಣಲಿದೆ ಎಂಬ ಚರ್ಚೆಗಳು ಶುರುವಾಗಿವೆ.

ಕನ್ನಡ ಕಿರುತೆರೆ ಧಾರಾವಾಹಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 13 (Bigg Boss Kannada 13) ಶೋ ಆದಷ್ಟು ಬೇಗ ಶುರು ಆಗಲಿದೆ. ಕಲರ್ಸ್‌ ಕನ್ನಡ ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ (Social Media) ಮಾಹಿತಿ ಹಂಚಿಕೊಂಡಿದೆ. ಪ್ರತಿ ವರ್ಷ ಬಿಗ್ ಬಾಸ್ ಶೋನಲ್ಲಿ ಒಂದಲ್ಲಾ ಒಂದು ಹೊಸತನ ಇರುತ್ತದೆ. ಈ ಬಾರಿ ಕೂಡ ಹೊಸತನವನ್ನು ಪರಿಚಯಿಸಲಾಗಿದೆ. ಆಡಿಷನ್ ಮೂಲಕ ಅವಕಾಶ ನೀಡಲಾಗುತ್ತಿದೆ. ಪ್ರೋಮೋ ಮೂಲಕ ಜನಸಾಮಾನ್ಯರಿಗೆ ಕರೆ ನೀಡಲಾಗಿದೆ. ಬಿಗ್‌ ಬಾಸ್‌ ಶೋ (Bigg Boss Show) ಒಂದೂವರೆ ಗಂಟೆಗಳ ಕಾಲ ಪ್ರಸಾರ ಆಗುವುದು.ಹಾಗಾಗಿ ಯಾವ ಸೀರಿಯಲ್‌ (Kannada serial) ಅಂತ್ಯ ಕಾಣಲಿದೆ ಎಂಬ ಚರ್ಚೆಗಳು ಶುರುವಾಗಿವೆ.

ಯಾವೆಲ್ಲ ಸೀರಿಯಲ್‌ ಅಂತ್ಯ?

ಇತ್ತೀಚೆಗಷ್ಟೇ ಪ್ರೇಮಕಾವ್ಯ ಧಾರಾವಾಹಿ ಆರಂಭ ಆಗಿತ್ತು. ಎರಡು ಜೋಡಿಗಳ ಪ್ರೇಮಕಥೆಯೇ 'ಪ್ರೇಮ ಕಾವ್ಯ'. ಪ್ರೇಮ ಪಾತ್ರದಲ್ಲಿ ಪ್ರಿಯ ಜೆ.ಆಚಾರ್, ಕಾವ್ಯ ಪಾತ್ರದಲ್ಲಿ ವೈಷ್ಣವಿ ನಟಿಸುತ್ತಿದ್ದಾರೆ. ನಮ್ಮನೆ ಯುವರಾಣಿ ಖ್ಯಾತಿಯ ರಾಘವೇಂದ್ರ ಹಾಗೂ ವಿಕಾಸ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ರವೀನ್ ಕುಮಾರ್ ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಸೀರಿಯಲ್‌ ಅಂತ್ಯ ಹಾಡಲಿದೆ ಎನ್ನಲಾಗಿದೆ. ವಾಹಿನಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಇದನ್ನೂ ಓದಿ: Duniya Vijay: ದುನಿಯಾ ವಿಜಯ್ ಹೊಸ ತೆಲುಗು ಸಿನಿಮಾದಿಂದ ಹೊರ ಬಿತ್ತು ಬಿಗ್ ಅಪ್​​ಡೇಟ್!

ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ ಕೂಡ ಟಿಆರ್ಪಿಯಲ್ಲಿ ಕುಸಿತ ಕಂಡಿದೆ. ತನ್ನ ತಂದೆಯ ಘನತೆಯನ್ನು ಮರಳಿ ಗಳಿಸಲು ಕಾನೂನಿನ ಪ್ರಪಂಚದಲ್ಲಿ ಎಲ್ಲಾ ಅಡೆತಡೆಗಳನ್ನು ಮೀರಿ ಬಲಿಷ್ಠ ಪ್ರಭಾವಶಾಲಿಗಳ ವಿರುದ್ಧ ಹೋರಾಡುವ ಧೀರ ಯುವತಿ ಭಾರ್ಗವಿಯ ಸ್ಪೂರ್ತಿದಾಯಕ ಕಥೆಯೇ 'ಭಾರ್ಗವಿ ಎಲ್‌ಎಲ್‌ಬಿ'.

ರಾಣಿ ಧಾರಾವಾಹಿ ಕೂಡ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಭಾಗ್ಯಲಕ್ಷ್ಮೀ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್‌ ಆಗಿದೆ. ಕಲಾವಿದರು ಈ ಸೀರಿಯಲ್‌ನ ಕೊನೇ ದಿನದ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವೆಲ್ಲವೂ ಊಹಾಪೋಹ ಹೊರತು ವಾಹಿನಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಬಿಗ್‌ ಬಾಸ್‌ ಆಡಿಷನ್‌ ಹೇಗೆ?

ಜನರಲ್ಲಿ ಪ್ರತಿಭೆ ಇದ್ದರೆ ಮೂರು ನಿಮಿಷದ ವಿಡಿಯೋವನ್ನು ‘Colorskannada.jiostar.com’ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಬೇಕು. ಆಯ್ಕೆ ಆದವರಿಗೆ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಚಾನ್ಸ್ ಸಿಗಲಿದೆ.

ಇದನ್ನೂ ಓದಿ: Ashika Ranganath: ನಾಯಕಿ ಪಾತ್ರಕ್ಕೆ ಟೀಕೆ; ನಟಿ ಜಾನ್ವಿ ಕಪೂರ್ ಬೆಂಬಲಕ್ಕೆ ನಿಂತ ಆಶಿಕಾ ರಂಗನಾಥ್

ಈ ಬಾರಿ ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ. ಆ ಕಾರಣದಿಂದ ಈ ಸಲದ ಬಿಗ್ ಬಾಸ್ ಶೋ ವಿಶೇಷ ಎನಿಸಿಕೊಳ್ಳುತ್ತಿದೆ. ಈ ಬಾರಿ ಕೂಡ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲಿದ್ದಾರೆ.

Yashaswi Devadiga

View all posts by this author