Big Boss Kannada TRP: ಭರ್ಜರಿ ಟಿಆರ್‌ಪಿ ಪಡೆದು ಹೊಸ ದಾಖಲೆ ಬರೆದ ಬಿಗ್ ಬಾಸ್ ಕನ್ನಡ! ಸೀರಿಯಲ್‌ಗಳ ಕಥೆ ಏನು?
Kannada Serial TRP: ಬಿಗ್ ಬಾಸ್ ಸೀಸನ್ 12 ಮುಗಿದು ಕೆಲವೇ ದಿನಗಳು ಆಗಿವೆ. ಆದ್ರೂ ಅದರ ಹವಾ ಮಾತ್ರ ನಿಂತಿಲ್ಲ. ಇನ್ನೂ ಸ್ಪರ್ಧಿಗಳ ಸಂದರ್ಶನಗಳು ಸೇರಿದಂತೆ ಚರ್ಚೆಗಳು ಆಗುತ್ತಲೇ ಇವೆ. TRP ಹೊರ ಬಿದ್ದಿದೆ. ಬಿಗ್ ಬಾಸ್ ಫಿನಾಲೆ ಎಪಿಸೋಡ್ಗೆ 16.8 ಟಿವಿಆರ್ ಸಿಕ್ಕಿದೆ. ಬಿಗ್ ಬಾಸ್ ಎಪಿಸೋಡ್ಗೆ 10-12 ಟಿವಿಆರ್ ಸಿಗುತ್ತಿತ್ತು. ಹಾಗಾದ್ರೆ ಧಾರಾವಾಹಿಗಳ ಕಥೆ ಏನು?
ಕನ್ನಡ ಕಿರುತೆರೆ ಧಾರಾವಾಹಿಗಳು -
ಬಿಗ್ ಬಾಸ್ ಸೀಸನ್ 12 (Bigg Boss Kannada 12) ಮುಗಿದು ಕೆಲವೇ ದಿನಗಳು ಆಗಿವೆ. ಆದ್ರೂ ಅದರ ಹವಾ ಮಾತ್ರ ನಿಂತಿಲ್ಲ. ಇನ್ನೂ ಸ್ಪರ್ಧಿಗಳ ಸಂದರ್ಶನಗಳು ಸೇರಿದಂತೆ ಚರ್ಚೆಗಳು ಆಗುತ್ತಲೇ ಇವೆ. TRP ಹೊರ ಬಿದ್ದಿದೆ. ಬಿಗ್ ಬಾಸ್ ಫಿನಾಲೆ ಎಪಿಸೋಡ್ಗೆ (Bigg Boss Kannada Finale) 16.8 ಟಿವಿಆರ್ ಸಿಕ್ಕಿದೆ. ಬಿಗ್ ಬಾಸ್ ಎಪಿಸೋಡ್ಗೆ 10-12 ಟಿವಿಆರ್ ಸಿಗುತ್ತಿತ್ತು. ಹಾಗಾದ್ರೆ ಧಾರಾವಾಹಿಗಳ ಕಥೆ ಏನು?
ಫಿನಾಲೆ ಎಪಿಸೋಡ್ಗೆ 16.8 ಟಿವಿಆರ್
‘’ಇಲ್ಲಿಯವರೆಗೂ ಒಂದು ಲೆಕ್ಕ.. ಇನ್ಮೇಲೆ ಬೇರೆಯದ್ದೇ ಲೆಕ್ಕ’’ ಅಂತ ‘ಬಿಗ್ ಬಾಸ್ ಕನ್ನಡ 12’ ಆರಂಭಕ್ಕೂ ಮುನ್ನವೇ ಕಿಚ್ಚ ಸುದೀಪ್ ಹೇಳಿದ್ದರು. ಕಿಚ್ಚ ಸುದೀಪ್ ಮಾತು ಅಕ್ಷರಶಃ ನಿಜವಾಗಿತ್ತು. ಇಲ್ಲಿಯವರೆಗಿನ 11 ಸೀಸನ್‌ಗಳದ್ದೇ ಒಂದು ತೂಕ ಆಗಿದ್ದರೆ, 12ನೇ ಸೀಸನ್‌ನ ಟಿಆರ್‌ಪಿ ಅಂಕಿ-ಅಂಶಗಳದ್ದೇ ಮತ್ತೊಂದು ತೂಕ! ಟಿಆರ್‌ಪಿ ಲೆಕ್ಕಾಚಾರದಲ್ಲಿ ಹಳೆಯ ದಾಖಲೆಗಳನ್ನೆಲ್ಲಾ ‘ಬಿಗ್ ಬಾಸ್ ಕನ್ನಡ 12’ ಪುಡಿ ಪುಡಿ ಮಾಡಿತ್ತು.
ಇದನ್ನೂ ಓದಿ: Arijit Singh: ರಾಜಕೀಯಕ್ಕೆ ಅರಿಜಿತ್ ಸಿಂಗ್ ಎಂಟ್ರಿ? ಗಾಯನ ನಿವೃತ್ತಿ ಬೆನ್ನಲ್ಲೇ ದೊಡ್ಡ ನಿರ್ಧಾರ!
‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ವೀಕ್ಲಿ ರಿಯಾಲಿಟಿ ಸಂಚಿಕೆಗಳಿಗೆ 9.8 ಟಿವಿಆರ್, ವಾರಾಂತ್ಯಗಳಲ್ಲಿ ಬಿಗ್ ಬಾಸ್ ಎಪಿಸೋಡ್ಗೆ 10-12 ಟಿವಿಆರ್ ಸಿಗುತ್ತಿತ್ತು.
ಜನವರಿ 18ರಂದು ಫಿನಾಲೆ ನಡೆದಿದೆ. ಈ ಎಪಿಸೋಡ್ನ ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಿದ್ದಾರೆ. ಫಿನಾಲೆ ಎಪಿಸೋಡ್ಗೆ 16.8 ಟಿವಿಆರ್ ಸಿಕ್ಕಿದೆ. ಗಿಲ್ಲಿ ನಟ ಕಪ್ ಎತ್ತೋದನ್ನು ನೋಡಲು ಎಲ್ಲರೂ ಕಾದು ಕುಳಿತಿದ್ದರು. ಹೀಗಾಗಿ, ಒಳ್ಳೆಯ ಟಿಆರ್‌ಪಿ ಸಿಕ್ಕಿದೆ. ಧಾರಾವಾಹಿಗಳ ಟಿಆರ್‌ಪಿ ವಿಚಾರಕ್ಕೆ ಬಂದರೆ,
ʻಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನ
ಜೀ ಕನ್ನಡ ವಾಹಿನಿಯಲ್ಲಿ ‘ಲಕ್ಷ್ಮೀ ನಿವಾಸ’ ಸೀರಿಯಲ್ ಪ್ರಸಾರವಾಗುತ್ತಿದೆ. ಟಿಆರ್‌ಪಿಯಲ್ಲಿ ‘ಲಕ್ಷ್ಮೀ ನಿವಾಸ’ ಸೀರಿಯಲ್ ಮುಂದಿದೆ. ಹಲವು ವಾರಗಳ ಕಾಲ ‘ಲಕ್ಷ್ಮೀ ನಿವಾಸ’ ಸೀರಿಯಲ್ ಟಿಆರ್‌ಪಿ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿತ್ತು.ಕಥೆ ವಿಚಾರಕ್ಕೆ ಬಂದರೆ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ವಿಶ್ವನ ತಾಯಿ ಲಲಿತಾ ಪಾತ್ರವನ್ನು ಹಠಾತ್ತನೆ ಅಂತ್ಯಗೊಳಿಸಲಾಗಿದೆ. ಜಯಂತ್‌ನಿಂದ ತಳ್ಳಲ್ಪಟ್ಟು ಸಾವನ್ನಪ್ಪುವ ದೃಶ್ಯದ ಮೂಲಕ ನಟಿ ವಿಜಯಲಕ್ಷ್ಮಿ ಸುಬ್ರಮಣಿ ಅವರ ಪಾತ್ರಕ್ಕೆ ಮುಕ್ತಾಯ ಹಾಡಲಾಗಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
‘ಕರ್ಣ’ ಧಾರಾವಾಹಿ ಎರಡನೇ ಸ್ಥಾನ
ಕರ್ಣ ಸೀರಿಯಲ್‌ನಲ್ಲಿ ಕಥೆ ರೋಚಕ ತಿರುವು ಪಡೆದಿದೆ. ತನ್ನ ವಿರೋಧಿಗಳಾದ ರಮೇಶ್ ಮತ್ತು ಅತ್ತೆಗೆ ಕರ್ಣ ಸರಿಯಾಗಿಯೇ ತಿರುಗೇಟು ನೀಡುತ್ತಿದ್ದಾನೆ. ತನ್ನ ಪತ್ನಿ ನಿತ್ಯಾಳನ್ನು ಆಸ್ಪತ್ರೆಯ ಬೋರ್ಡ್ ಆಫ್ ಡೈರೆಕ್ಟರ್ ಆಗಿ ನೇಮಿಸಿ, ತನ್ನ ಅಧಿಕಾರವನ್ನು ಚಲಾಯಿಸಿ ಅತ್ತೆಗೆ ಶಾಕ್ ನೀಡಿದ್ದಾನೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
‘ಅಣ್ಣಯ್ಯ’ ಧಾರಾವಾಹಿಗೆ ಮೂರನೇ ಸ್ಥಾನ
ಅಣ್ಣಯ್ಯ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇಲ್ಲಿವರೆಗೆ ವೀಕ್ಷಕರು ಅಮ್ಮ -ಮಗ ಯಾವಾಗ ಒಂದಾಗೋದು ಎಂದು ಕಾಯುತ್ತಿದ್ದರು. ಇದೀಗ ಸಮಯ ಬಂದೇ ಬಿಟ್ಟಿದೆ. ಮಾಕಾಳವ್ವನ ಪವಾಡದಿಂದ ಮಗನೇ ಅಮ್ಮನನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
ಇದನ್ನೂ ಓದಿ: Gatha Vaibhava OTT: ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಒಟಿಟಿಗೆ ಬಂದಾಯ್ತು! ಸ್ಟ್ರೀಮಿಂಗ್ ಎಲ್ಲಿ?
ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ‘ನಂದ ಗೋಕುಲ’ ಧಾರಾವಾಹಿಗೆ ಐದನೇ ಸ್ಥಾನ ಸಿಕ್ಕಿದೆ. ಆರನೇ ಸ್ಥಾನದಲ್ಲಿ ‘ಮುದ್ದು ಸೊಸೆ’ ಧಾರಾವಾಹಿ, ಏಳನೇ ಸ್ಥಾನದಲ್ಲಿ ‘ಆದಿ ಲಕ್ಷ್ಮೀ ಪುರಾಣ’ ಧಾರಾವಾಹಿ ಇದೆ. 8ನೇ ಸ್ಥಾನದಲ್ಲಿ ‘ಭಾರ್ಗವಿ ಎಲ್ಎಲ್ಬಿʼಇದೆ.