ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kamal Haasan: ಬರೋಬ್ಬರಿ ಏಳು ಬಾರಿ ಆಸ್ಕರ್‌ಗೆ ನಾಮಿನೇಟ್‌ ಆಗಿದ್ದ ಆ ನಟ ಯಾರು ಗೊತ್ತಾ?

Kamal Haasan Birthday: ಭಾರತದ ನಟರೊಬ್ಬರು ಬರೋಬ್ಬರಿ 7 ಸಲ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶಕ ರಾಗಿದ್ದಾರೆ‌. ಸೂಪರ್ ಸ್ಟಾರ್ ಗಳ ಜೊತೆಗೂ ಇವರು ಅಭಿನಯಿಸಿದ್ದು ಬಹುಭಾಷೆಯಲ್ಲಿ ಸಿನಿಮಾ ಮಾಡಿ ಪ್ರಸಿದ್ಧರಾಗಿದ್ದಾರೆ. ಹೀಗೆಂದಾಗ ಬಹುತೇಕರಿಗೆ ರಜನೀಕಾಂತ್, ಮೋಹನ್ ಲಾಲ್, ಶಾರುಖ್ ಖಾನ್, ಚಿರಂಜೀವಿ ಸೇರಿದಂತೆ ಅನೇಕರ ಹೆಸರು ನಮಗೆ ನೆನಪಾಗುತ್ತದೆ. ಆದರೆ ನಟ ಕಮಲ್ ಹಾಸನ್ ಅವರು ಇಂತಹ ಮೇರು ನಟರನ್ನು ಕೂಡ ಮೀರಿಸಿ ಸಿನಿಮಾ ಕ್ಷೇತ್ರದಲ್ಲಿ ದಾಖಲೆಯ ಸಾಧನೆ ಮಾಡಿದ್ದಾರೆ‌.

ಇಂದು ನಟ ಕಮಲ್ ಹಾಸನ್ ಹುಟ್ಟುಹಬ್ಬ(ಸಂಗ್ರಹ ಚಿತ್ರ)

ನವದೆಹಲಿ: ಚಲನಚಿತ್ರ ರಂಗದಲ್ಲಿ ಸಾಧನೆ ಮಾಡಿದ್ದ ಕಲಾವಿದರನ್ನು ಸ್ಮರಿಸಿ ಗೌರವಾರ್ಥವಾಗಿ ಅವರಿಗೆ ಪ್ರಶಸ್ತಿ , ಪುರಸ್ಕಾರ ನೀಡಲಾಗುತ್ತದೆ. ಫಿಲ್ಮ್ ಫೇರ್, ಭಾರತ ರತ್ನ ಪ್ರಶಸ್ತಿಗಳು ದೇಶಿಯ ಮಟ್ಟದಲ್ಲಿ ಲಭಿಸಿದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಸ್ಕರ್ ಪ್ರಶಸ್ತಿ ಪ್ರಾತಿನಿಧ್ಯತೆ ಪಡೆದಿದೆ. ಆದರೆ ಈ ಪ್ರಶಸ್ತಿ ಎಲ್ಲರಿಗೂ ಲಭಿಸಲಾರದು. ಅನೇಕ ಚಲನಚಿತ್ರ ಹಾಗೂ ಅದರಲ್ಲಿ ಅಭಿನಯಿಸಿದ್ದ ನಟರು ಆಸ್ಕರ್ ನಾಮನಿರ್ದೇಶಿತರಾಗಿ ವಾಪಾಸಾಗುವುದು ಇದೆ. ಅಂತೆಯೇ ಭಾರತದ ನಟ ರೊಬ್ಬರು ಬರೋಬ್ಬರಿ 7 ಸಲ ಆಸ್ಕರ್ ಪ್ರಶಸ್ತಿಗೆ (Oscar nominations) ನಾಮನಿರ್ದೇಶಕರಾಗಿದ್ದಾರೆ‌. ಸೂಪರ್ ಸ್ಟಾರ್ ಗಳ ಜೊತೆಗೂ ಇವರು ಅಭಿನಯಿಸಿದ್ದು ಬಹುಭಾಷೆಯಲ್ಲಿ ಸಿನಿಮಾ ಮಾಡಿ ಪ್ರಸಿದ್ಧರಾಗಿದ್ದಾರೆ. ಹೀಗೆಂದಾಗ ಬಹುತೇಕರಿಗೆ ರಜನೀಕಾಂತ್ , ಮೋಹನ್ ಲಾಲ್, ಶಾರುಖ್ ಖಾನ್, ಚಿರಂಜೀವಿ ಸೇರಿದಂತೆ ಅನೇಕರ ಹೆಸರು ನಮಗೆ ನೆನಪಾಗುತ್ತದೆ. ಆದರೆ ನಟ ಕಮಲ್ ಹಾಸನ್ (Kamal Haasan) ಅವರು ಇಂತಹ ಮೇರು ನಟರನ್ನು ಕೂಡ ಮೀರಿಸಿ ಸಿನಿಮಾ ಕ್ಷೇತ್ರದಲ್ಲಿ ದಾಖ ಲೆಯ ಸಾಧನೆ ಮಾಡಿದ್ದಾರೆ‌.

60 ವರ್ಷಗಳಿಗೂ ಹೆಚ್ಚು ಕಾಲ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿ ಗುರುತಿಸಿಕೊಂಡ ನಟ ಕಮಲ್ ಹಾಸನ್ ಅವರು ನಟನೆ, ನಿರ್ದೇಶನ, ಚಿತ್ರಕಥೆ, ಸಂಗೀತ ಮತ್ತು ನೃತ್ಯ ಸಾಕಷ್ಟು ಪ್ರಸಿದ್ಧ ರಾಗಿದ್ದಾರೆ. ಬಹುಮುಖ ಪ್ರತಿಭೆಯಾಗಿದ್ದ ಇವರು ಇದುವರೆಗೆ ತಮ್ಮ ಸಿನಿಮಾ ಕ್ಷೇತ್ರಕ್ಕೆ ನೀಡಿದ್ದ ಕೊಡುಗೆಗೆ ಇದುವರೆಗೆ ಏಳು ಬಾರಿ ಆಸ್ಕರ್ ನಾಮನಿರ್ದೇಶನಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಬೇರೆ ಯಾವ ಕಲಾವಿದರು ಈ ಮಟ್ಟಿಗೆ ಸಾಧನೆ ಮಾಡಿಲ್ಲ ಎನ್ನಬಹುದು.

ಅವರು ನವೆಂಬರ್ 7, 1954 ರಂದು ತಮಿಳುನಾಡಿನಲ್ಲಿ ಜನಿಸಿದ ಕಮಲ್ ಹಾಸನ್ ಬಹಳ ಚಿಕ್ಕವಯಸ್ಸಿಗೆ ಅವರು ಚಿತ್ರರಂಗಕ್ಕೆ ಪ್ರವೇಶಿಸಿದವರು. ಕಲತ್ತೂರ್ ಕಣ್ಣಮ್ಮದಲ್ಲಿ ಬಾಲನಟನಾಗಿ ಮೊದಲ ಬಾರಿಗೆ ಅಭಿನಯಿಸಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಇದೇ ಚಿತ್ರದ ಅವರ ಅಭಿನಯಕ್ಕೆ ರಾಷ್ಟ್ರಪತಿಗಳಿಂದ ಚಿನ್ನದ ಪದಕವನ್ನು ಪಡೆದರು. ಬಳಿಕ ತಮಿಳು ಚಿತ್ರರಂಗದ ದಂತಕಥೆಗಳಾದ ಎಂಜಿಆರ್, ಶಿವಾಜಿ ಗಣೇಶನ್ ಮತ್ತು ಜೆಮಿನಿ ಗಣೇಶನ್ ಅವರೊಂದಿಗೆ ತೆರೆ ಹಂಚಿಕೊಂಡರು.

ಇದನ್ನು ಓದಿ:Gathavibhava Movie: ಸಿಂಪಲ್ ಸುನಿ ʼಗತವೈಭವʼ ದಲ್ಲಿ ದುಷ್ಯಂತ್ ಸಿನಿವೈಭವ

ಮಲಯಾಳಂ, ತೆಲುಗು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಅನೇಕ ಸಿನಿಮಾಗಳಲ್ಲಿ ಅಭಿ ನಯಿಸುವ ಮೂಲಕ ಬಹುಭಾಷಾ ಕಲಾವಿದರಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ. ಅದರ ಜೊತೆಗೆ ನಿರ್ದೇಶನ, ಚಿತ್ರಕಥೆ, ಹಾಡುಗಾರಿಕೆ, ಸಂಗೀತ ನಿರ್ದೇಶನದ ಲ್ಲಿಯೂ ಕೆಲಸ ಮಾಡಿ ಖ್ಯಾತಿ ಪಡೆ ದಿದ್ದಾರೆ. ಸ್ವಾತಿ ಮುತ್ಯಂ, ಸಾಗರ್, ಕುರುಥಿಪುನಾಲ್, ನಾಯಗನ್, ತೇವರ್ ಮಗನ್, ಇಂಡಿಯನ್ ಮತ್ತು ಹೇ ರಾಮ್‌ನಂತಹ ಚಲನಚಿತ್ರಗಳು ಅವರಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ನಟ ಕಮಲ್ ಹಾಸನ್ ಅವರು ಈ ಸಿನಿಮಾ ಮೂಲಕ ಏಳು ಸಲ ಆಸ್ಕರ್ ನಾಮ ನಿರ್ದೇಶನಕ್ಕೆ ಆಯ್ಕೆಯಾಗುವಂತಾಯಿತು‌.

ಅವರ ನಟನೆಯ ಆಸ್ಕರ್ ನಾಮನಿರ್ದೇಶನಗಳನ್ನು ಪಡೆದ ಈ ಚಲನಚಿತ್ರಗಳು ಸಾಮಾಜಿಕ ಸಮಸ್ಯೆಗಳು, ಪ್ರೀತಿ, ಭ್ರಷ್ಟಾಚಾರ ಮತ್ತು ಮಾನವ ಭಾವನೆಗಳಂತಹ ವಿಷಯಗಳಿಂದ ಕೇಂದ್ರಿ ಕರಿಸಲಾಗಿದ್ದು ಆಸ್ಕರ್ ಅಂಗಳದಲ್ಲಿಯೂ ಅನೇಕರ ಗಮನ ಸೆಳೆದಿತ್ತು. ಕಮಲ್ ಹಾಸನ್ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿ, ಪದ್ಮಶ್ರೀ , ಪದ್ಮಭೂಷಣ ದಂತಹ ಸರ್ಕಾರಿ ಗೌರವಗಳನ್ನು ಪಡೆದಿದ್ದಾರೆ. ಈ ಮೂಲಕ ಇಂದು ಅವರ ಜನ್ಮ ದಿನವಾಗಿದ್ದು ಇವರ ಸಿನಿಮಾ ಸಾಧನೆ ಬಗ್ಗೆ ಅಭಿಮಾನಿಗಳು ಪೋಸ್ಟ್ ಹಂಚಿಕೊಂಡು ಶುಭ ಕೋರಿದ್ದಾರೆ.