‘ಬಿಗ್ ಬಾಸ್ ಕನ್ನಡ 13’ (Bigg Boss Kannada 13) ಕಾರ್ಯಕ್ರಮದ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಗ್ನಿಪರೀಕ್ಷೆ ಗೆದ್ದ 3 ಮಂದಿ ಮಾತ್ರ ದೊಡ್ಮನೆ ಸೇರುವ ಅವಕಾಶ ಇದೆ. ಆ ಸುವರ್ಣಾವಕಾಶ ಪಡೆಯಲು ಪ್ರಸ್ತುತ 18 ಮಂದಿ ಸೆಣಸಾಡುತ್ತಿದ್ದಾರೆ. ‘ನಾನು ಹಳ್ಳಿ ಹುಡುಗಿ ಕುಮಾರಿ’ ಅಂತ ಹೇಳಿಕೊಂಡು ಅಗ್ನಿಪರೀಕ್ಷೆಗೆ ಒಳಗಾದವರು ಲಾವಣ್ಯ ಕುಮಾರಿ (Lavanya Kumari). ಏಕಾಏಕಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದಲ್ಲಿ ಕುಮಾರಿ ಕಾಣ್ತಿಲ್ಲ ಅಂತ ವೀಕ್ಷಕರು ಕಮೆಂಟ್ ಕೂಡ ಮಾಡಿದ್ದರು. ಇದೀಗ ಉತ್ತರ ಸಿಕ್ಕಿದೆ.
ತಂಡಗಳ ನಡುವೆ ಹಣಾಹಣಿ
ಅಗ್ನಿ ಪರೀಕ್ಷೆ'ಯಲ್ಲಿ ತಂಡಗಳ ನಡುವೆ ಹಣಾಹಣಿಯಲ್ಲಿ ನಡೆಯುತ್ತಿದೆ. ತನ್ನ ಸಾಮರ್ಥ್ಯದಿಂದ ಯಾರು 'ಬಿಗ್ ಬಾಸ್'ಗೆ ಹೋಗುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.'ಅಗ್ನಿ ಪರೀಕ್ಷೆ ನಡೆಯುತ್ತಿರುವ ಹೊತ್ತಿನಲ್ಲೇ ವೀಕ್ಷಕರ ಮನಗೆದ್ದಿದ್ದ ಹಳ್ಳಿ ಪ್ರತಿಭೆ ಕುಮಾರಿ ಅವರು ಶೋನಿಂದ ಹೊರಬಿದ್ದಿರುವುದು ವೀಕ್ಷಕರಿಗೆ ಶಾಕ್ ಗಿದೆ.
ಇದನ್ನೂ ಓದಿ: Actor Vinayakan: ಪತ್ನಿಯಿಂದ ಬೇರ್ಪಟ್ಟ ನೋವಿನಲ್ಲಿ 'ಜೈಲರ್ʼ ನಟ ವಿನಾಯಕನ್; ಡಿವೋರ್ಸ್ಗೆ ನಾನೇ ಕಾರಣ ಎಂದಿದ್ದೇಕೆ?
ನಂಜನಗೂಡು ಮೂಲದ ಕುಮಾರಿ ಅಡಿಷನ್‌ನಲ್ಲಿ ತನ್ನ ಮಾತಿನ ಕೌಶಲ್ಯ, ಮುಗ್ಧತೆಯಿಂದ ನಾಲ್ವರು ಜ್ಯೂರಿಗಳ ಮನಗೆದ್ದಿದ್ದರು. ಕುಮಾರಿ ಪೂರ್ಣಿಮಾ ಅವರಿಂದ ಸೋತು ತಂಡಕ್ಕೆ ಸೇರಿಕೊಂಡಿದ್ದರು.
ತಂಡಗಳಾಗಿ ರಚನೆಗೊಂಡ ಬಳಿಕ ಕುಮಾರಿ ಕಳೆದ ನಾಲೈದು ದಿನಗಳಿಂದ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ.
'ಅಗ್ನಿ ಪರೀಕ್ಷೆ'ಯಲ್ಲಿ ಕಾಣಿಸಿಕೊಳ್ಳದಿದ್ದ ಕುಮಾರಿ 'ಬಿಗ್ ಬಾಸ್' ಮನೆಯಲ್ಲಿ ಆಡಲು ಸಾಧ್ಯವಿಲ್ಲವೆನ್ನುವ ವಿಚಾರವನ್ನು ವಾಹಿನಿಯವರು ಪ್ರೋಮೊ ಮೂಲಕ ತಿಳಿಸಿದ್ದಾರೆ.
ಆರೋಗ್ಯ ಸಮಸ್ಯೆಯಿಂದಾಗಿ ವೈದ್ಯರು ಕುಮಾರಿ ಅವರು ಆಟ ಆಡಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಹಾಗಾಗಿ ಕುಮಾರಿ 'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಿಂದ ಕುಮಾರಿ ಹೊರಬಿದ್ದಿದ್ದಾರೆ.
ಕಾರಣ ಇದು!
ನಾನು ಹುಟ್ಟಿದಾಗಿನಿಂದ ಒಂದು ದಿನನೂ ಬೆಂಗಳೂರು ನೋಡೇ ಇರಲಿಲ್ಲ. ಹಾಗಾಗಿ ನಾನು ಊರಿಂದ ಬರುವಾಗ ಎಲ್ಲನೂ ಎಂಜಾಯ್ ಮಾಡಿಕೊಂಡು ಬಂದೆ. ನಾನು ವಾಪಸ್ ಹೋದ್ರೆ ಯಾವಾಗ ಬರುತ್ತೇನೆ ಗೊತ್ತಿಲ್ಲ. ಇದು ಲಾಸ್ಟ್ ಆಗುತ್ತದೆ ಅನ್ನೋದು ನನಗೆ ಬೇಜಾರ್ ಆಗುತ್ತಿದೆ ಎಂದು ಕುಮಾರಿ ಕಣ್ಣೀರಿಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದ ಕುಮಾರಿ ಇದೀಗ ಇನ್ಸ್ಟಾಗ್ರಾಮ್‌ನಲ್ಲಿ ಫೇಮಸ್ ಆಗಿದ್ದಾರೆ.
ಇದನ್ನೂ ಓದಿ: Actor Yash: ಯಶ್ ಅದ್ಭುತ ಕಲಾವಿದ; 'ಟಾಕ್ಸಿಕ್' ಆ್ಯಕ್ಷನ್ ಕೊರಿಯೋಗ್ರಾಫರ್ ಜೆ.ಜೆ. ಪೆರ್ರಿ ಮೆಚ್ಚುಗೆ
‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮಕ್ಕೆ ಬಂದ್ಮೇಲೆ ಕುಮಾರಿ ಇನ್ಸ್ಟಾಗ್ರಾಮ್ ಅಕೌಂಟ್‌ಗೆ 247K ಕ್ಕೂ ಹೆಚ್ಚಿನ ಫಾಲೋವರ್ಸ್ ಬಂದಿದ್ದಾರೆ. ಆದ್ರೀಗ ವೈಲ್ಡ್ ಕಾರ್ಡ್ ಎಂಟ್ರಿ ಆದ್ರೂ ಕೊಡಿ ಅಂತ ಕಮೆಂಟ್ ಮಾಡ್ತಿದ್ದಾರೆ ನೆಟ್ಟಿಗರು.