‘ಟಾಕ್ಸಿಕ್’ ಸಿನಿಮಾಗೆ (Toxic Movie) ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಬೆಂಬಲ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇಂಥ ಸಂದರ್ಭದಲ್ಲಿ ಉಪೇಂದ್ರ (Upendra) ಅವರು ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಕಿಚ್ಚ ಸುದೀಪ್ (Sudeep) ಕೂಡ ಮನಸಾರೆ ವಿಶ್ ಮಾಡಿದ್ದಾರೆ.
'ರಾಕಿ ಭಾಯ್' ಯಶ್ ಅಭಿನಯದ 'ಟಾಕ್ಸಿಕ್' ಚಿತ್ರಕ್ಕೆ ಬಲ ತುಂಬಿದ್ದಾರೆ 'ಅಭಿನಯ ಚಕ್ರವರ್ತಿ'. ಹಿಂದಿನ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ರೆಗ್ಯುಲರ್, ಸಿದ್ಧಸೂತ್ರದ ಸಿನಿಮಾ ಮಾಡುವ ಸುಲಭ ಹಾದಿ ಹಿಡಿಯದೆ, ಭಿನ್ನವಾಗಿ ('ಔಟ್ ಆಫ್ ದಿ ಬಾಕ್ಸ್') ಯೋಚಿಸಿ ಹೊಸ ಪ್ರಯತ್ನ ಮಾಡಿದ್ದೀರಿ.
ಇಂತಹ ವಿಭಿನ್ನ ಹಾಗೂ ವಿನೂತನ ಕಥಾಹಂದರವನ್ನು ಕೈಗೆತ್ತಿಕೊಳ್ಳಲು ವಿಶೇಷ ಮನಸ್ಥಿತಿ, ಬದ್ಧತೆ ಮತ್ತು ಅಪಾರ ಧೈರ್ಯ ಬೇಕು. 'ಟಾಕ್ಸಿಕ್' ಒಂದು ಶ್ಲಾಘನೀಯ ಪ್ರಯತ್ನವಾಗಿದ್ದು, ಇದರಲ್ಲಿ ಕುತೂಹಲ ಕೆರಳಿಸುವ, ಆರೋಗ್ಯಕರ ಚರ್ಚೆಗೆ ಮತ್ತು ಕಲಿಕೆಗೆ ದಾರಿ ಮಾಡಿಕೊಡುವ ಹಲವು ಅಂಶಗಳಿವೆ.
ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಹೊಸ ಪ್ರಯೋಗ ಮಾಡಲು ಧೈರ್ಯ ತೋರಿದ್ದಕ್ಕೆ ಅಭಿನಂದನೆಗಳು. ಸ್ನೇಹಿತ, ನಿಮ್ಮ ಮುಂದಿನ ಹಾದಿಗೆ ಪ್ರೀತಿ ತುಂಬಿದ ಶುಭ ಹಾರೈಕೆಗಳು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ: Rishab Shetty: ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ರಿಷಬ್ ಶೆಟ್ಟಿ!
ಇದಕ್ಕೂ ಮುಂಚೆ ಉಪೇಂದ್ರ ಅವರು ‘ಟಾಕ್ಸಿಕ್ ಒಂದು ಕಾಲ್ಪನಿಕ ಕಥೆ. ಆದರೆ ದೊಡ್ಡವರಿಗಾಗಿ? ಟಾಕ್ಸಿಕ್ ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ! ಒಂದು ಹೊಸ ಲೋಕ. ಒಂದು ಸಂಪೂರ್ಣ ಹೊಸ ಅನುಭವ! ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ! ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್!’ ಎಂದು ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Toxic movie : ‘ಟಾಕ್ಸಿಕ್’ ನೋಡಿ ಉಪೇಂದ್ರ ಹೇಳಿದ್ದೇನು?
‘ಟಾಕ್ಸಿಕ್’ ಸಿನಿಮಾಗೆ ಉತ್ತರ ಭಾರತದಲ್ಲಿ ಹೆಚ್ಚು ನೆಗೆಟಿವ್ ವಿಮರ್ಶೆ ಬಂದಿದೆ. ಅಲ್ಲದೇ, ತೆಲುಗು-ತಮಿಳು ಮಂದಿ ಕೂಡ ಟ್ರೋಲ್ ಮಾಡಿದ್ದಾರೆ. ಇಂಥ ಸಮಯದಲ್ಲಿ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ‘ಟಾಕ್ಸಿಕ್’ ಚಿತ್ರಕ್ಕೆ ಬೆಂಬಲ ನೀಡುತ್ತಿಲ್ಲ ಎಂಬ ಮಾತು ಕೇಳಿಬಂದಿತ್ತು. ಹೀಗಿರುವಾಗ ಉಪೇಂದ್ರ, ಸುದೀಪ್ ಅವರು ‘ಟಾಕ್ಸಿಕ್’ ಚಿತ್ರದ ಪರವಾಗಿ ಟ್ವೀಟ್ ಮಾಡಿರುವುದು ಗಮನ ಸೆಳೆದಿದೆ.