ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Toxic movie : ‘ಟಾಕ್ಸಿಕ್’ ನೋಡಿ ಉಪೇಂದ್ರ ಹೇಳಿದ್ದೇನು?

Toxic movie : ‘ಟಾಕ್ಸಿಕ್ ಒಂದು ಕಾಲ್ಪನಿಕ ಕಥೆ. ಆದರೆ ದೊಡ್ಡವರಿಗಾಗಿ? ಟಾಕ್ಸಿಕ್ ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ! ಒಂದು ಹೊಸ ಲೋಕ. ಒಂದು ಸಂಪೂರ್ಣ ಹೊಸ ಅನುಭವ! ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ! ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್!’ ಎಂದು ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.

Toxic movie : ‘ಟಾಕ್ಸಿಕ್’ ನೋಡಿ ಉಪೇಂದ್ರ ಹೇಳಿದ್ದೇನು?

ಟಾಕ್ಸಿಕ್‌ ಸಿನಿಮಾ -

Yashaswi Devadiga
Yashaswi Devadiga Aug 28, 2026 7:35 PM

ಮೊದಲ ದಿನವೇ ಟಾಕ್ಸಿಕ್ (Toxic Movie) ಭರ್ಜರಿ ಆರಂಭ ಪಡೆದುಕೊಂಡಿತ್ತು. ವಿಶ್ವದಾದ್ಯಂತ ಮೊದಲ ದಿನ 140.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಸಿನಿಮಾ ಭಾರತದಲ್ಲಿ ಮಾತ್ರ 101.10 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿತ್ತು. ಈ ಮೂಲಕ ಮೊದಲ ದಿನವೇ ನೂರು ಕೋಟಿ ಕ್ಲಬ್ ಸೇರಿತ್ತು. ಬಿಡುಗಡೆ ಆದ ನಂತರ ವಿಮರ್ಶಕರಿಂದ, ಪ್ರೇಕ್ಷಕರಿಂದ ಮಿಶ್ರ ಪ್ರತ್ರಿಕ್ರಿಯೆಗಳನ್ನು ಪಡೆದುಕೊಂಡಿದೆ. ‘ರಿಯಲ್ ಸ್ಟಾರ್’ ಉಪೇಂದ್ರ (Upendra) ಅವರು ಈ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಾಲ್ಪನಿಕ ಕಥೆ

‘ಟಾಕ್ಸಿಕ್ ಒಂದು ಕಾಲ್ಪನಿಕ ಕಥೆ. ಆದರೆ ದೊಡ್ಡವರಿಗಾಗಿ? ಟಾಕ್ಸಿಕ್ ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ! ಒಂದು ಹೊಸ ಲೋಕ. ಒಂದು ಸಂಪೂರ್ಣ ಹೊಸ ಅನುಭವ! ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ! ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್!’ ಎಂದು ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Toxic box office collection day 2: ಟಾಕ್ಸಿಕ್ ಎರಡನೇ ದಿನದ ಕಲೆಕ್ಷನ್ ಎಷ್ಟು

ಉಪೇಂದ್ರ ಅವರ ಈ ಮೆಚ್ಚುಗೆಯ ಮಾತುಗಳು ‘ಟಾಕ್ಸಿಕ್’ ತಂಡಕ್ಕೆ ಸಿಕ್ಕಿರುವ ಪ್ರಮುಖ ಬೆಂಬಲವಾಗಿ ಕಾಣಿಸಿಕೊಂಡಿವೆ. ಇತ್ತೀಚೆಗೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸಿನಿಮಾಕ್ಕೆ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ನೀಡುತ್ತಿಲ್ಲ ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿತ್ತು. ಇದೇ ಸಂದರ್ಭದಲ್ಲಿ ಉಪೇಂದ್ರ ಅವರು ಬಹಿರಂಗವಾಗಿ ಚಿತ್ರದ ಪರ ನಿಂತಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

‘ಸಾಧಾರಣ ಸಿನಿಮಾಗಳನ್ನು ಮೆರೆಸುವುದನ್ನು ನಿಲ್ಲಿಸಿ. ಹೀಗೆ ಮಾಡಿದರೆ ಕನ್ನಡ ಚಿತ್ರರಂಗ ಅಭಿವೃದ್ಧಿಯಾಗುವುದಿಲ್ಲ’ ಎಂದು ಒಬ್ಬ ನೆಟ್ಟಿಗರು ಟೀಕಿಸಿದ್ದಾರೆ. ಕಬ್ಜ, ಮಾರ್ಟಿನ್ ಮತ್ತು ಕೆಡಿ ಸಿನಿಮಾಗಳೇ ಇದಕ್ಕಿಂತ ಎಷ್ಟೋ ಪಟ್ಟು ಉತ್ತಮ’ ಎಂದು ಅಭಿಪ್ರಾಯಪಟ್ಟಿದ್ದಾರೆ.



ಗುರುವಾರ ವಾರದ ದಿನವಾಗಿದ್ದರೂ ಟಾಕ್ಸಿಕ್ ಹವಾ ಕಡಿಮೆಯಾಗಿಲ್ಲ. ಎರಡನೇ ದಿನ ದೇಶೀಯ ಮಾರುಕಟ್ಟೆಯಲ್ಲಿ ಸಿನಿಮಾ 36.40 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಎರಡು ದಿನದ ಒಟ್ಟು ನೆಟ್ ಕಲೆಕ್ಷನ್ 137.50 ಕೋಟಿ ರೂಪಾಯಿಗೆ ಏರಿದೆ. ಜಾಗತಿಕವಾಗಿ ಎರಡು ದಿನಕ್ಕೆ 190 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ.

ಎರಡನೇ ದಿನದ ಭಾಷಾವಾರು ಗಳಿಕೆಯ ಪ್ರಕಾರ ಹಿಂದಿ ಆವೃತ್ತಿಯಿಂದ 23 ಕೋಟಿ ರೂಪಾಯಿ, ಕನ್ನಡ ಆವೃತ್ತಿಯಿಂದ 8.50 ಕೋಟಿ ರೂಪಾಯಿ, ತೆಲುಗಿನಿಂದ 3 ಕೋಟಿ ರೂಪಾಯಿ, ತಮಿಳಿಂದ 1.50 ಕೋಟಿ ರೂಪಾಯಿ ಹಾಗೂ ಮಲಯಾಳಂನಿಂದ 40 ಲಕ್ಷ ರೂಪಾಯಿ ಸಂಗ್ರಹವಾಗಿದೆ.

ಇದನ್ನೂ ಓದಿ: Rishab Shetty: ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ರಿಷಬ್‌ ಶೆಟ್ಟಿ!

ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ ಸೇರಿದಂತೆ ಪ್ರಮುಖ ನಗರಗಳ ಮಲ್ಟಿಪ್ಲೆಕ್ಸ್ ಗಳಲ್ಲಿ ಬಹುತೇಕ ಶೋಗಳು ಹೌಸ್ ಫುಲ್ ಆಗುತ್ತಿವೆ.