ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Toxic movie: ‘ಟಾಕ್ಸಿಕ್’ ಬಾಕ್ಸ್ ಆಫೀಸ್​​ನಲ್ಲಿ ಎದುರಾಗುತ್ತಿರುವ ಸಿನಿಮಾಗಳು ಇವು

Toxic movie: ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಮುಂದಿನ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಪ್ರಕಟವಾಗಿದೆ. ಹೊಸ ಪೋಸ್ಟರ್‌ನಲ್ಲಿ ಯಶ್ ಅವರ ಎರಡು ವಿಭಿನ್ನ ಅವತಾರಗಳಾದ 'ರಾಯ' ಮತ್ತು 'ಟಿಕೆಟ್' (Ticket) ಪಾತ್ರಗಳನ್ನು ಪರಿಚಯಿಸಲಾಗಿದೆ. ಇದು ಸಾಮಾನ್ಯ ತಂದೆ-ಮಗನ ಸೆಂಟಿಮೆಂಟ್ ಕಥೆಯಲ್ಲ, ಬದಲಿಗೆ ಇಬ್ಬರ ನಡುವಿನ ತೀವ್ರ ಪೈಪೋಟಿಯ ಕಥೆ ಎಂಬುದನ್ನು ಪೋಸ್ಟರ್ ಸೂಚಿಸುತ್ತಿದೆ.

ಯಶ್‌ ಸಿನಿಮಾ

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಮುಂದಿನ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic: A Fairy Tale for Grown-Ups) ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಪ್ರಕಟವಾಗಿದೆ. ಹೊಸ ಪೋಸ್ಟರ್‌ನಲ್ಲಿ ಯಶ್ ಅವರ ಎರಡು ವಿಭಿನ್ನ ಅವತಾರಗಳಾದ 'ರಾಯ' (Raya) ಮತ್ತು 'ಟಿಕೆಟ್' (Ticket) ಪಾತ್ರಗಳನ್ನು ಪರಿಚಯಿಸಲಾಗಿದೆ. ಇದು ಸಾಮಾನ್ಯ ತಂದೆ-ಮಗನ ಸೆಂಟಿಮೆಂಟ್ ಕಥೆಯಲ್ಲ, ಬದಲಿಗೆ ಇಬ್ಬರ ನಡುವಿನ ತೀವ್ರ ಪೈಪೋಟಿಯ ಕಥೆ ಎಂಬುದನ್ನು ಪೋಸ್ಟರ್ ಸೂಚಿಸುತ್ತಿದೆ. ಅಂದಹಾಗೆ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗುತ್ತಿದ್ದಂತೆ ಅದೇ ಸಮಯಕ್ಕೆ ಕೆಲ ಸಿನಿಮಾಗಳು ರಿಲೀಸ್‌ ಆಗುತ್ತಿವೆ.

ನಾನಿ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಪ್ಯಾರಡೈಸ್’ ಅದೇ ಸಮಯಕ್ಕೆ ಬಿಡುಗಡೆ ಆಗಲಿದೆ. ಆಗಸ್ಟ್ 21 ರಂದು ಅಂದರೆ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಕೇವಲ ಐದು ದಿನ ಮುಂಚಿತವಾಗಿ ರಿಲೀಸ್ ಆಗಲಿದೆ.

ಇದನ್ನೂ ಓದಿ: Gilli Nata Movie: ಗಿಲ್ಲಿ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್‌; ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ನಟ

ಕಾಸರ್ಲ ಶ್ಯಾಮ್ ಈ ಹಾಡಿಗೆ ಸಾಹಿತ್ಯ

ಕಾಸರ್ಲ ಶ್ಯಾಮ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅದ್ದುಲ ಜಂಗಿರೆಡ್ಡಿ, ಅಕ್ನೂರಿ ದೇವಯ್ಯ ಮತ್ತು ಅನಿರುದ್ಧ್ ರವಿಚಂದರ್ ಜೊತೆಗೂಡಿ ಹಾಡಿದ್ದಾರೆ. ಅನಿರುದ್ಧ್ ಅವರೇ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. 'ಜೆರ್ಸಿ' ಮತ್ತು 'ಗ್ಯಾಂಗ್ ಲೀಡರ್' ಚಿತ್ರಗಳ ನಂತರ ನಾನಿ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತೆ ಒಂದಾಗಿರುವ ಸಿನಿಮಾ 'ದಿ ಪ್ಯಾರಡೈಸ್'.

ಆಗಸ್ಟ್ ತಿಂಗಳ 23ರಂದು ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬ. ಅದೇ ಸಮಯಕ್ಕೆ ಮೆಗಾಸ್ಟಾರ್ ಚಿರಂಜೀವಿ ಅವರ ಒಂದು ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸುದ್ದಿ ಇದೆ. ಇವುಗಳಲ್ಲಿ ‘ವಿಶ್ವಂಭರ’ ಸಿನಿಮಾ ಚಿರಂಜೀವಿ ಅವರ ಹುಟ್ಟುಹಬ್ಬಕ್ಕೆ ರಿಲೀಸ್ ಆಗಲಿದೆ ಎಂಬ ಸುದ್ದಿಗಳಿದ್ದವು. ಆದರೆ ಇದೀಗ ‘ಟಾಕ್ಸಿಕ್’ ಸಿನಿಮಾ ಘೋಷಣೆಯ ಬಳಿಕ ಚಿರು ಸಿನಿಮಾ ಬಿಡುಗಡೆ ಮುಂದೂಡಲ್ಪಡುವ ಸಾಧ್ಯತೆ ಇದೆ. ಆಗಸ್ಟ್ 27ಕ್ಕೆ ವರುಣ್ ಧವನ್ ನಟನೆಯ ‘ಬೇಡಿಯಾ 2’ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಈ ಸಿನಿಮಾ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ‘ವಿವಾನ್: ದಿ ಫೋರ್ಸ್ ಆಫ್ ಫಾರೆಸ್ಟ್’ ಹಿಂದಿ ಸಿನಿಮಾ ಆಗಸ್ಟ್ 28ಕ್ಕೆ ರಿಲೀಸ್ ಆಗಲಿದೆ.

'ಟಾಕ್ಸಿಕ್' ಚಿತ್ರವನ್ನು ಬುಧವಾರ (ಆಗಸ್ಟ್ 26) ಬಿಡುಗಡೆ ಮಾಡುತ್ತಿರುವುದರ ಹಿಂದೆ ಚಿತ್ರತಂಡದ ದೊಡ್ಡ ತಂತ್ರವಿದೆ. ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ವರಮಹಾಲಕ್ಷ್ಮಿ ಹಬ್ಬ, ಓಣಂ, ಈದ್‌ ಮತ್ತು ರಕ್ಷಾಬಂಧನ ಸಾಲು ಸಾಲಾಗಿ ಬರುವುದರಿಂದ, ಸುದೀರ್ಘ ರಜಾದಿನಗಳ ಲಾಭ ಈ ಚಿತ್ರಕ್ಕೆ ಸಿಗಲಿದೆ. ಈ ಹಬ್ಬದ ಸೀಸನ್ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆಯಲು 'ಟಾಕ್ಸಿಕ್' ಚಿತ್ರಕ್ಕೆ ಒಳ್ಳೆಯ ವೇದಿಕೆ ಹಾಕಿಕೊಡಲಿದೆ.

ಇದನ್ನೂ ಓದಿ: ʻರಾಕಿಂಗ್‌ ಸ್ಟಾರ್‌ʼ ಯಶ್‌ ನಟನೆಯ ʻಟಾಕ್ಸಿಕ್‌ʼ ಚಿತ್ರದ ರಿಲೀಸ್‌ ಡೇಟ್‌ ಕೊನೆಗೂ ಫಿಕ್ಸ್;‌ ಇನ್ನೆರಡು ತಿಂಗಳಲ್ಲಿ ಬರ್ತಾನೆ ʻರಾಯʼ!

ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್‌ನ ಮೊದಲ ಸಿನಿಮಾ ಇದಾಗಿದ್ದು, ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಬಂಡವಾಳ ಹೂಡಲಾದ ಚಿತ್ರಗಳಲ್ಲಿ ಇದು ಒಂದಾಗಿದೆ. ವಿಶೇಷವೆಂದರೆ, ಈ ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ.

Yashaswi Devadiga

View all posts by this author