ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Toxic movie teaser OUT: ಟಾಕ್ಸಿಕ್‌ ಟೀಸರ್ ಔಟ್‌! ಯಶ್ ಕ್ಲೀನ್ ಶೇವ್ ಲುಕ್‌, ಸ್ಟೈಲ್‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

Yash Toxic: `ರಾಕಿಂಗ್ ಸ್ಟಾರ್' ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' ಟೀಸರ್ ಈಗ ಬಿಡುಗಡೆಯಾಗಿದೆ. ಟಾಕ್ಸಿಕ್ ಒಂದು ಕ್ರೂರ ಆಕ್ಷನ್-ಥ್ರಿಲ್ಲರ್ ಕಥೆ ಅನ್ನೋದರಲ್ಲಿ ಡೌಟೇ ಇಲ್ಲ. ಟಾಕ್ಸಿಕ್‌ ಟೀಸರ್‌ ರಕ್ತಸಿಕ್ತವಾಗಿದೆ. ಯಶ್‌ ಅವರ ಇನ್ನೊಂದು ಲುಕ್‌ ಅನಾವರಣಗೊಂಡಿದೆ. ಯಶ್‌ ಅವರ ಎರಡು ಶೇಡ್‌ನಲ್ಲಿ ಕಂಡ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ರಕ್ತ, ಭಯ ಮತ್ತು ದ್ರೋಹದ ಮೂಲಕ ತನ್ನ ಸಾಮ್ರಾಜ್ಯವನ್ನು ರೂಪಿಸಿಕೊಳ್ಳುವ ನಾಯಕನ ಕಥೆ ಅಂತ ಕಮೆಂಟ್‌ ಮಾಡ್ತಿದ್ದಾರೆ ಫ್ಯಾನ್ಸ್‌.

ಯಶ್‌ ಟಾಕ್ಸಿಕ್‌ ಸಿನಿಮಾ

`ರಾಕಿಂಗ್ ಸ್ಟಾರ್' ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' ಟೀಸರ್ ಈಗ ಬಿಡುಗಡೆಯಾಗಿದೆ. ಟಾಕ್ಸಿಕ್ (Toxic) ಒಂದು ಕ್ರೂರ ಆಕ್ಷನ್-ಥ್ರಿಲ್ಲರ್ ಕಥೆ ಅನ್ನೋದರಲ್ಲಿ ಡೌಟೇ ಇಲ್ಲ. ಟಾಕ್ಸಿಕ್‌ ಟೀಸರ್‌ ರಕ್ತಸಿಕ್ತವಾಗಿದೆ. ಯಶ್‌ ಅವರ ಇನ್ನೊಂದು ಲುಕ್‌ ಅನಾವರಣಗೊಂಡಿದೆ. ಎರಡು ಯಶ್‌ ಅವರ ಎರಡು ಶೇಡ್‌ನಲ್ಲಿ (Two Shade) ಕಂಡ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ರಕ್ತ, ಭಯ ಮತ್ತು ದ್ರೋಹದ ಮೂಲಕ ತನ್ನ ಸಾಮ್ರಾಜ್ಯವನ್ನು ರೂಪಿಸಿಕೊಳ್ಳುವ ನಾಯಕನ ಕಥೆ ಅಂತ ಕಮೆಂಟ್‌ ಮಾಡ್ತಿದ್ದಾರೆ ಫ್ಯಾನ್ಸ್‌.

ಹಠ ಬಿಡೋ ಮಾತೇ ಇಲ್ಲ

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳೋದು ಫಿಕ್ಸ್‌ ಆದಂತಿದೆ. ರಾಯನ (ಯಶ್) ಮಗ ಇರಬಹುದೇ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಇದೆ. ಟೀಸರ್​​ನಲ್ಲಿ ಸಾಕಷ್ಟು ರಕ್ತ ಕೂಡ ಹರಿದಿದೆ.‘ಈ ಸಲ ಯುದ್ಧನೇ ಬೇರೆ’ ‘ಹಠ ಬಿಡೋ ಮಾತೇ ಇಲ್ಲ’ ಎಂಬ ಡೈಲಾಗ್‌ ಬೇರೆ ಹೇಳಿದ್ದಾರೆ ಯಶ್‌.

"ಇಟ್ಸ್ ಗೋನ್ನಾ ಗೆಟ್ ಕ್ರೇಜಿ !!!" ಎಂಬ ಕ್ಯಾಪ್ಷನ್​ನೊಂದಿಗೆ ಆಕ್ಷನ್-ಥ್ರಿಲ್ಲರ್ ಚಿತ್ರದ ಟೀಸರ್ ಅನ್ನು ತಯಾರಕರು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. 1 ನಿಮಿಷ 55 ಸೆಕೆಂಡುಗಳ ಟೀಸರ್‌ನಲ್ಲಿ, ಯಶ್ ಅವರನ್ನು ಹೈ-ಆಕ್ಟೇನ್ ಆಕ್ಷನ್ ಸನ್ನಿವೇಶಗಳಲ್ಲಿ ಕಾಣಬಹುದು.

ಇದನ್ನೂ ಓದಿ: Karna Kannada Serial: ಮಾಡದ ತಪ್ಪಿಗೆ ಜೈಲು ಪಾಲಾಗ್ತಾನಾ ಕರ್ಣ? ನಿತ್ಯಾ ಶಾಕ್‌!

ʻಹಾಲಿವುಡ್ ವೈಬ್‌ಗಳಿಂದ ತುಂಬಿದೆ" ಎಂದು ಫ್ಯಾನ್ಸ್‌ ಬರೆದಿದ್ದಾರೆ. ಇದಕ್ಕೂ ಮುಂಚೆ ಪೋಸ್ಟರ್‌ ಔಟ್‌ ಆಗಿತ್ತು. ಯಶ್ ಅವರು ಟಾಕ್ಸಿಕ್‌ನಲ್ಲಿ 'ರಾಯ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಕ್ತಸಿಕ್ತ ಹಿಮಪಾತದ ನಡುವೆ ನಿಂತಿರುವ ಅವರ ಅವತಾರ ನಡುಕ ಹುಟ್ಟಿಸುವಂತಿತ್ತು. ಮದ್ಯದ ಬಾಟಲಿ ಹಿಡಿದು ನಿಂತಿರುವ ಯಶ್ ಸುತ್ತಲೂ ಭೀಕರ ಹಿಂಸಾಚಾರದ ಕುರುಹುಗಳು ಎದ್ದು ಕಾಣುತ್ತಿದ್ದು, ಚಿತ್ರವು ಕರಾಳ ಹಿಂಸೆ ಮತ್ತು ನೈತಿಕ ಸಂಘರ್ಷದ ಕಥೆಯನ್ನು ಒಳಗೊಂಡಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು. ಅದೇ ರೀತಿ ಇದೆ ಟೀಸರ್‌. ಹಾಲಿವುಡ್‌ ರೇಂಜ್‌ಗೆ ರಕ್ತಸಿಕ್ತವಾಗಿ ಭಯ ಹುಟ್ಟಿಸುವಂತಿದೆ.

ಟಾಕ್ಸಿಕ್‌ ಟೀಸರ್‌



‘ಟಾಕ್ಸಿಕ್’ ಚಿತ್ರವನ್ನು ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕೆವಿಎನ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ಯಶ್ ಕೂಡ ನಿರ್ಮಾಪಕ. ನಟ ಯಶ್ ಅವರು ರಾಯ ಎಂಬ ಪಾತ್ರ ಮಾಡಿದರೆ, 'ನಾಡಿಯಾ' ಪಾತ್ರದಲ್ಲಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. 'ಎಲಿಜಬೆತ್' ಆಗಿ ಹುಮಾ ಖುರೇಷಿ ಇದ್ದರೆ, 'ಗಂಗಾ' ಪಾತ್ರದಲ್ಲಿ ನಯನತಾರಾ ನಟಿಸಿದ್ದಾರೆ. ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ಕ್ರಮವಾಗಿ 'ರೆಬೆಕಾ' ಮತ್ತು 'ಮೆಲಿಸಾ' ಎಂಬ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.

'ಟಾಕ್ಸಿಕ್' ಚಿತ್ರವು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದ್ದು, ಈ ಚಿತ್ರಕ್ಕೆ ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ ಸಾಹಸ ನಿರ್ದೇಶನ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರು ಅವರ ಸಂಗೀತ ಹಾಗೂ ಉಜ್ವಲ್ ಕುಲಕರ್ಣಿ ಅವರ ಸಂಕಲನ ಈ ಚಿತ್ರಕ್ಕಿದೆ.

ಇದನ್ನೂ ಓದಿ: Amruthadhaare Serial: ಗೌತಮ್‌ ದಿವಾನ್‌- ಸುನಿ ಮುಖಾಮುಖಿ; ಸಖತ್‌ ಗಾಬರಿ ಆದ ಜೇಡಿಯ ಪೈಲ್ವಾನ್!

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಮಾರ್ಚ್ 19ರಂದು ವಿಶ್ವಾದ್ಯಂತ ತೆರೆಕಾಣಲಿದೆ.

Yashaswi Devadiga

View all posts by this author