ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Toxic Movie: ನಿಮ್ಮ ಬೆಳವಣಿಗೆಯನ್ನು ಕಂಡು ಅರಗಿಸಿಕೊಳ್ಳಲಾಗದವರು ತಪ್ಪಾಗಿ ಅರ್ಥೈಸಿಕೊಂಡಿರಬಹುದು! ಯಶ್‌ ಬಗ್ಗೆ ಸುಮಲತಾ ಪೋಸ್ಟ್‌

Actor yash: ಸಿನಿಮಾರಂಗದ ತಾರೆಯರು ಈಗ ಒಬ್ಬೊಬ್ಬರಾಗಿ ಈ ಸಿನಿಮಾ ನೋಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ , ಕಿಚ್ಚ ಸುದೀಪ್, ಮಾಸ್ಟರ್ ಆನಂದ್, ರಕ್ಷಿತಾ ಪ್ರೇಮ್ ಬಳಿಕ ಇದೀಗ ಮಾಜಿ ಸಚಿವೆ ಸುಮಲತಾ ಅಂಬರೀಷ್ ಅವರು 'ಟಾಕ್ಸಿಕ್' ಸಿನಿಮಾ (Toxic Movie) ನೋಡಿ, ಯಶ್ ಅಭಿನಯ ಹಾಗೂ ಸಿನಿಮಾವನ್ನು ಮೆಚ್ಚಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

'ಟಾಕ್ಸಿಕ್' ಬಗ್ಗೆ ಯಶ್‌ಗೆ ಪತ್ರ ಬರೆದ ಸುಮಲತಾ ಅಂಬರೀಷ್

ಸುಮಲತಾ ಅಂಬರೀಶ್‌ -

Yashaswi Devadiga
Yashaswi Devadiga Aug 31, 2026 6:20 PM

ನಟ ಯಶ್ (Actor yash) ಅವರ ‘ಟಾಕ್ಸಿಕ್’ ಸಿನಿಮಾ (Toxic Movie) ಮೊದಲ ರವಿವಾರದಂದು ಭಾರತದಲ್ಲಿ 200 ಕೋಟಿ ರೂ.ಗಳ ಗಡಿ ದಾಟಿದೆ. ಬಿಡುಗಡೆಯಾದ ಎರಡನೇ ದಿನದಿಂದಲೇ ಗಳಿಕೆಯಲ್ಲಿ ಕುಸಿತ ಕಂಡಿದ್ದ ಸಿನಿಮಾವು ರವಿವಾರದಂದು 23 ಕೋಟಿ ರೂ.ಗಳನ್ನು ಗಳಿಸಿದೆ. ಸಿನಿಮಾರಂಗದ ತಾರೆಯರು ಈಗ ಒಬ್ಬೊಬ್ಬರಾಗಿ ಈ ಸಿನಿಮಾ ನೋಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ (upendra), ಕಿಚ್ಚ ಸುದೀಪ್, ಮಾಸ್ಟರ್ ಆನಂದ್, ರಕ್ಷಿತಾ ಪ್ರೇಮ್ ಬಳಿಕ ಇದೀಗ ಮಾಜಿ ಸಚಿವೆ ಸುಮಲತಾ ಅಂಬರೀಷ್ ಅವರು 'ಟಾಕ್ಸಿಕ್' ಸಿನಿಮಾ (Toxic Movie) ನೋಡಿ, ಯಶ್ ಅಭಿನಯ ಹಾಗೂ ಸಿನಿಮಾವನ್ನು ಮೆಚ್ಚಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ನಿನ್ನ ಅಭಿನಯ ಅದ್ಭುತ

ನನ್ನ ಪ್ರಿಯ ಯಶ್,ನಾನು ಟಾಕ್ಸಿಕ್ ಸಿನಿಮಾ ನೋಡಿದೆ. ಅದನ್ನು ನಿನಗೆ ಹೇಳಬೇಕೆಂದು ಅನಿಸಿತು.ನೀನು ಯಾವಾಗಲೂ ಧೈರ್ಯಶಾಲಿ ಎಂದು ನನಗೆ ಗೊತ್ತಿತ್ತು. ಇನ್ನೊಬ್ಬರ ಹಾದಿಯನ್ನು ಹಿಂಬಾಲಿಸದೆ ನಿನ್ನದೇ ದಾರಿ ಹಿಡಿಯುತ್ತೀಯ ಎಂದು. ಆದರೆ ಈ ಸಿನಿಮಾದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಗಮನ ಸೆಳೆದದ್ದು ನೀನೇ. ನಿನ್ನ ಅಭಿನಯ ಅದ್ಭುತವಾಗಿತ್ತು — ನಿಜಕ್ಕೂ ಮನಸ್ಸನ್ನು ಬೆರಗುಗೊಳಿಸುವಂತಿತ್ತು.ಇಡೀ ಸಿನಿಮಾ ಬಣ್ಣಬಣ್ಣದ ದೃಶ್ಯಗಳಿಂದ ಕೂಡಿದ ಸುಂದರ ಅನುಭವ. ನಿನಗೂ ಮತ್ತು ನಿರ್ದೇಶಕರಿಗೂ ಇದು ದೊಡ್ಡ ಮೈಲುಗಲ್ಲು. ಆದರೆ ಪ್ರತಿ ಫ್ರೇಮ್‌ನಲ್ಲೂ ನೀನು ನಿನ್ನನ್ನೇ ಮೀರಿ ಅಭಿನಯಿಸುತ್ತಿರುವುದನ್ನು ನೋಡಿ ನನಗೆ ಎಷ್ಟು ಹೆಮ್ಮೆಯಾಯಿತು ಎಂದು ಹೇಳಲಾರೆ. ನೀನು ನಟನಾಗಿ ಬಹಳ ಬೆಳೆದಿದ್ದೀಯ. ಆ ಬೆಳವಣಿಗೆಯನ್ನು ನೋಡಿದರೆ ನನ್ನ ಹೃದಯ ತುಂಬಿ ಹೋಗುತ್ತದೆ.

ಇದನ್ನೂ ಓದಿ: Rashmika Mandanna: ಶೂಟಿಂಗ್‌ಗೆ ಮರಳುವ ಸಂತಸ ಹಂಚಿಕೊಂಡ ರಶ್ಮಿಕಾ

ನೀನು ನಾನು ನೋಡಿದ ಅತ್ಯಂತ ಬುದ್ಧಿವಂತ ಮತ್ತು ಸಮಾಧಾನವಾದ ವ್ಯಕ್ತಿಗಳಲ್ಲಿ ಒಬ್ಬನು. ಸುತ್ತಲಿನ ನಕಾರಾತ್ಮಕ ಮಾತುಗಳನ್ನು ನೀನು ಲಘುವಾಗಿ ತೆಗೆದುಕೊಳ್ಳುತ್ತಿರುವೆ ಎಂದು ನನಗೆ ಖಚಿತ. ಬಹುಶಃ ಟಾಕ್ಸಿಕ್ ಸಮಯಕ್ಕಿಂತ ಮುಂದಿದೆ. ಅಥವಾ ಅದರ ಕೆಲವು ಭಾಗಗಳನ್ನು ಅರ್ಥಮಾಡಿಕೊಳ್ಳದೆ ಅಥವಾ ನೀನು ಆಗಿರುವುದನ್ನು (ಅಥವಾ ಆಗುವುದನ್ನು) ಒಪ್ಪದವರು ಅನ್ಯಾಯವಾಗಿ ತೀರ್ಪು ಮಾಡುತ್ತಿದ್ದಾರೆ.

View this post on Instagram A post shared by Sumalatha Ambareesh (@sumalathaamarnath)

ಯಾವುದೇ ಸಂದೇಹವಿಲ್ಲ

ನಿನ್ನಂತಹ ಯಶಸ್ಸು ಹುಟ್ಟಿಸುವ ಅಸೂಯೆಯೂ ಇರುತ್ತದೆ. ಆದರೆ ನೀನು ಅದನ್ನು ಲೆಕ್ಕಿಸುವವನಲ್ಲ ಎಂದು ನನಗೆ ಗೊತ್ತು.ಏನೇ ಇರಲಿ, ನೀನು ಎಲ್ಲವನ್ನೂ ದಾಟಿ ಇನ್ನಷ್ಟು ದೊಡ್ಡವನಾಗಿ, ಬಲಶಾಲಿಯಾಗಿ ಹೊರಬರುತ್ತೀಯ ಎಂದು ನನಗೆ ಯಾವುದೇ ಸಂದೇಹವಿಲ್ಲ. ಮತ್ತೆ ದೊಡ್ಡ ಯಶಸ್ಸು ಸಾಧಿಸುತ್ತೀಯ — ಅದರಲ್ಲಿ ನನಗೆ ಸಂಪೂರ್ಣ ನಂಬಿಕೆ.

ಸದ್ಯಕ್ಕೆ, ನಿಮಗೊಂದು ದೊಡ್ಡ ಸಲ್ಯೂಟ್!. ಈ ಸಿನಿಮಾಗೆ ನೀನು ಹಾಕಿದ ಶ್ರಮ, ನಂಬಿಕೆ ಮತ್ತು ಕಷ್ಟಕ್ಕೆ ಅಭಿನಂದನೆಗಳು. ಈಗ ನಿಲ್ಲಬೇಡ. ಎಂದಿಗೂ ನಿಲ್ಲಬೇಡ. ಹೀಗೆಯೇ ಮುಂದುವರೆಸು.

ಇದನ್ನೂ ಓದಿ: Bigg Boss Kannada 13: ಶೋನಿಂದ ಆಚೆ ಬಿದ್ರೂ 5 ಲಕ್ಷ ನಗದು ಬಹುಮಾನ, ಉದ್ಯೋಗ ಗಿಟ್ಟಿಸಿಕೊಂಡ ಕುಮಾರಿ!

ನಾನು ಯಾವಾಗಲೂ ಪ್ರೀತಿ ಮತ್ತು ಹೆಮ್ಮೆಯಿಂದ ನಿನ್ನನ್ನು ನೋಡುತ್ತಿರುತ್ತೇನೆ. ನಿನಗೆ ಬಹಳ ಅಪ್ಪುಗೆಗಳು. ಎಂದು ನಟಿ, ಮಾಜಿ ಸಚಿವೆ ಸುಮಲತಾ ಅಂಬರೀಷ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.