ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Toxic Movie: ಬುಕಿಂಗ್ ಓಪನ್ ಬೆನ್ನಲ್ಲೇ 'ಟಾಕ್ಸಿಕ್' ಟಿಕೆಟ್ ಸೋಲ್ಡ್ ಔಟ್

Toxic Movie: ಯಶ್ (Yash) ಮತ್ತೆ ಬೆಳ್ಳಿಪರದೆಗೆ ಮರಳುತ್ತಿದ್ದು, ಈ ಚಿತ್ರವು ಈಗಾಗಲೇ ದೇಶ, ವಿದೇಶಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಗಸ್ಟ್ 26 ರಂದು ಬಿಡುಗಡೆಯಾಗಲಿರುವ, ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಬೆಂಗಳೂರಿನಲ್ಲಿ ಬಹುತೇಕ ಕಡೆ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ. ಬೆಂಗಳೂರಿನಲ್ಲಿರುವ ಮಲ್ಟಿಪ್ಲೆಕ್ಸ್​​ಗಳ ಮೊದಲ ದಿನದ ಬಹುತೇಕ ಪ್ರದರ್ಶನಗಳ ಎಲ್ಲಾ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಖಾಲಿಯಾಗಿವೆ.

ಟಾಕ್ಸಿಕ್‌ ಸಿನಿಮಾ

'Toxic: A Fairy Tale for Grown-Ups'ಚಿತ್ರದ ಮೂಲಕ ಯಶ್ (Yash) ಮತ್ತೆ ಬೆಳ್ಳಿಪರದೆಗೆ ಮರಳುತ್ತಿದ್ದು, ಈ ಚಿತ್ರವು ಈಗಾಗಲೇ ದೇಶ, ವಿದೇಶಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಗಸ್ಟ್ 26 ರಂದು ಬಿಡುಗಡೆಯಾಗಲಿರುವ, ಗೀತು ಮೋಹನ್‌ದಾಸ್ ನಿರ್ದೇಶನದ (Direction) ಈ ಚಿತ್ರ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ (Pre Booking) ಆರಂಭವಾಗಿದೆ.

ಬೆಂಗಳೂರಿನಲ್ಲಿ ಬಹುತೇಕ ಕಡೆ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ. ಬೆಂಗಳೂರಿನಲ್ಲಿರುವ ಮಲ್ಟಿಪ್ಲೆಕ್ಸ್​​ಗಳ ಮೊದಲ ದಿನದ ಬಹುತೇಕ ಪ್ರದರ್ಶನಗಳ ಎಲ್ಲಾ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಖಾಲಿಯಾಗಿವೆ.

ಬುಕ್‌ ಮೈ ಶೋನಲ್ಲಿ ಗಂಟೆಗೆ 25 ಸಾವಿರಕ್ಕೂ ಅಧಿಕ ಟಿಕೆಟ್‌ ಸೇಲ್‌ ಆಗವಿ. ಚೆನ್ನೈ, ಹೈದರಾಬಾದ್‌, ಕೊಚ್ಚಿಯಲ್ಲಿ ಇನ್ನೂ ಬುಕಿಂಗ್‌ ಆರಂಭವಾಗಿಲ್ಲ.

ಇದನ್ನೂ ಓದಿ: Bigg Boss Kannada 13: ʻಅಗ್ನಿಪರೀಕ್ಷೆʼಗೆ ಹೆದರಿ ಹೇಮಲತಾ ಹೊರಗೆ ಹೋಗ್ಬಿಡ್ತಾರಾ?

ಮುಂಜಾನೆ 6 ಗಂಟೆಯಿಂದಲೇ ಶೋಗಳು ಆರಂಭ

ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್‌ನ ಗೋಲ್ಡ್‌ ಕ್ಲಾಸ್‌ ಟಿಕೆಟ್‌ ದರ 1500 ರಿಂದ 1700 ವರೆಗೂ ಟಿಕೆಟ್‌ ದರವಿದೆ. ಬಹುತೇಕ ಮಲ್ಟಿಪ್ಲೆಕ್ಸ್‌ಗಳ ಸಾಮಾನ್ಯ ದರ 800 ರಿಂದ 1000 ರೂ. ವರೆಗೂ ಇದೆ. ಬೆಂಗಳೂರಿನ ಸಿಂಗಲ್‌ ಸ್ಕೃೀನ್‌ಗಳಲ್ಲಿ 400-500 ರೂ. ದರವಿದೆ. ಮುಂಜಾನೆ 6 ಗಂಟೆಯಿಂದಲೇ ಶೋಗಳು ಆರಂಭವಾಗಲಿವೆ

ಬೆಳಗ್ಗೆ 6 ಗಂಟೆಯ ಸ್ಪೆಷಲ್‌ ಶೋಗಳಿಗೆ ಮಾತ್ರ ಟಿಕೆಟ್‌ ದರ ಕೊಂಚ ಜಾಸ್ತಿಯೇ ಇದೆ. ಮುಂಬೈ, ದೆಹಲಿಯಲ್ಲಿ 800-900 ವರೆಗೂ ಟಿಕೆಟ್‌ ದರವಿದೆ.

ಬುಕಿಂಗ್ ಬಿಡುಗಡೆಯಾಗುತ್ತಿದ್ದಂತೆಯೇ ಟಿಕೆಟ್‌ಗಳು ಈ ರೀತಿಯಲ್ಲಿ ಬಿಕರಿಯಾಗಿರುವುದು ‘ಟಾಕ್ಸಿಕ್’ ಚಿತ್ರದ ಮೇಲಿರುವ ಅಪಾರ ಜನಪ್ರಿಯತೆ ಮತ್ತು ನಿರೀಕ್ಷೆಯನ್ನು ಎತ್ತಿ ತೋರಿಸುತ್ತದೆ. ಈ ಚಿತ್ರಕ್ಕೆ ಅಮೆರಿಕದಲ್ಲಿ ಭರ್ಜರಿ ಅಡ್ವಾನ್ಸ್ ಬುಕಿಂಗ್ ಆಗಿದ್ದು, ಇಲ್ಲಿಯವರೆಗೆ 5,500 ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.

ವರದಿಯ ಪ್ರಕಾರ, 'Toxic' ಅಮೆರಿಕದಲ್ಲಿ ಮುಂಗಡ ಬುಕಿಂಗ್ ಮೂಲಕ $121,258 ಗಳಿಸಿದೆ. ಈ ಚಿತ್ರವು 204 ಸ್ಥಳಗಳು ಮತ್ತು 589 ಪ್ರದರ್ಶನ ಕಾಣುತ್ತಿದ್ದು, 5,550 ಕ್ಕೂ ಹೆಚ್ಚು ಟಿಕೆಟ್‌ಗಳ ಮಾರಾಟ ಆಗಿದೆ. ಇದರ ಮುಂಗಡ ಮಾರಾಟದಲ್ಲಿ ಈಗಾಗಲೇ 1 ಕೋಟಿ ರೂ.ಗಳ ಗಡಿಯನ್ನು ದಾಟಿದೆ.

'ಟಾಕ್ಸಿಕ್' ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಇದನ್ನು ಇತರ ಭಾರತೀಯ ಭಾಷೆಗಳಿಗೂ ಡಬ್ ಮಾಡಲಾಗುತ್ತದೆ. ಯಶ್ ಅವರ ಜನಪ್ರಿಯತೆಯ ಕಾರಣದಿಂದಾಗಿ, ಕೆಲವು ಪ್ರದೇಶಗಳಲ್ಲಿ ವಿಶೇಷ ಪ್ರದರ್ಶನಗಳ ಟಿಕೆಟ್ ದರಗಳು ಹೆಚ್ಚಿರಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Amruthadhaare Serial: ಭೂಮಿ ಬೇಹುಗಾರಿಕೆಯ ವಿಷಯ ಶಕುಂತಲಾನ ತಲುಪಲಿದ್ಯಾ ? ಇದು ʻಆಪರೇಷನ್​ ಮಧುರ ವ್ಯೂಹʼ!

ಆಗಸ್ಟ್ 26 ರಂದು ಚಿತ್ರ ಬಿಡುಗಡೆಯಾಗಲಿರುವುದರಿಂದ ಈಗ ಎಲ್ಲರ ಗಮನವು ಭಾರತದಲ್ಲಿನ ಅದರ ಮುಂಗಡ ಬುಕಿಂಗ್ ಮತ್ತು ಬಿಡುಗಡೆಯ ದಿನದ ಪ್ರದರ್ಶನದ ಮೇಲಿದೆ.

Yashaswi Devadiga

View all posts by this author