ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ʻಅಗ್ನಿಪರೀಕ್ಷೆʼಗೆ ಹೆದರಿ ಹೇಮಲತಾ ಹೊರಗೆ ಹೋಗ್ಬಿಡ್ತಾರಾ?

Bigg Boss Kannada 13: ʻಹೇಮಲತಾ ಅವರ ಪೂರ್ಣ ಹೆಸರು ಹೇಮಲತಾ ಜಯಣ್ಣ. ಅಪ್ಪಟ ಹಳ್ಳಿ ಪ್ರತಿಭೆ. ಇವರ ಮೂಲ ಆದಯ ವ್ಯವಸಾಯ. ಹೇಮಲತಾ ಅವರಿಗೆ ಇಬ್ಬರೂ ಮಕ್ಕಳು. ವ್ಯವಸಾಯ, ಮನೆ ಕೆಲಸ ಮಾಡುತ್ತಾ ಹಾಡು ಹೇಳುವ ಅಭ್ಯಾಸ ಇವರದ್ದು. ಹೇಮಲತಾಗೆ ಈ ಟಾಸ್ಕ್‌ ನಿಭಾಯಿಸಲು ಕಷ್ಟವಾಯ್ತು. ಪ್ರತಿ ಸ್ಪರ್ಧಿಗಳು ಕೊಟ್ಟ ಕಾರಣಕ್ಕೆ ಹೇಮಲತಾ ಸಖತ್‌ ಸೈಲೆಂಟ್‌ ಆದ್ರು. ಇಷ್ಟು ಅರ್ಥ ಮಾಡಿಕೊಂಡು ಇಲ್ಲಿ ತನಕ ಆಟ ಆಡಿದೆ. ಬಿಗ್‌ ಬಾಸ್‌ ಇಷ್ಟು ಕಷ್ಟ ಅಂತ ಗೊತ್ತಿರಲಿಲ್ಲ ಎಂದು ಭಾವುಕರಾದರು.

ʻಅಗ್ನಿಪರೀಕ್ಷೆʼಗೆ ಹೆದರಿ ಹೇಮಲತಾ ಹೊರಗೆ ಹೋಗ್ಬಿಡ್ತಾರಾ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Aug 21, 2026 8:42 AM

ಬಿಗ್​ಬಾಸ್​ 13ನೇ (Bigg Boss Kannada 13) ಕನ್ನಡ ಸೀಸನ್​ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸೀಸನ್​ ಆರಂಭ ಆಗಲಿದೆ. ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗಿದ್ದು, ಅದರ ಸ್ಪರ್ಧೆ ಇದಾಗಲೇ ನಡೆದಿದೆ. ಇದೀಗ ಹೇಮಲತಾ (Hemalatha) ಭಾವುಕರಾಗಿದ್ದಾರೆ. ಬಿಗ್‌ ಬಾಸ್‌ ಇಷ್ಟೊಂದು ಕಷ್ಟ ಅಂತ ಗೊತ್ತಿರಲಿಲ್ಲ ಎಂದು ಭಾವುಕರಾಗಿದ್ದಾರೆ.

ಹೇಮಲತಾ ಸಖತ್‌ ಸೈಲೆಂಟ್‌

ವೀಕ್‌ ಕಂಟೆಸ್ಟಂಟ್‌ ಯಾರು ಅವರ ಹೆಸರು ತೆಗೆದುಕೊಳ್ಳಿ ಎಂದಿದ್ದರು. ಹೇಮಲತಾಗೆ ಈ ಟಾಸ್ಕ್‌ ನಿಭಾಯಿಸಲು ಕಷ್ಟವಾಯ್ತು. ಪ್ರತಿ ಸ್ಪರ್ಧಿಗಳು ಕೊಟ್ಟ ಕಾರಣಕ್ಕೆ ಹೇಮಲತಾ ಸಖತ್‌ ಸೈಲೆಂಟ್‌ ಆದ್ರು. ಇಷ್ಟು ಅರ್ಥ ಮಾಡಿಕೊಂಡು ಇಲ್ಲಿ ತನಕ ಆಟ ಆಡಿದೆ. ಬಿಗ್‌ ಬಾಸ್‌ ಇಷ್ಟು ಕಷ್ಟ ಅಂತ ಗೊತ್ತಿರಲಿಲ್ಲ ಎಂದು ಭಾವುಕರಾದರು. ಹೇಮಲಾತಾ ಶೋ ಇಂದ ಹೊರಗೆ ಹೋಗ್ತಾರಾ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Kannada New Movie: ʻಪ್ರೇಮದ ಊರಲಿ' ಚಿತ್ರದ ಸಾಂಗ್‌ ಔಟ್‌; ಕಣ್ಮನ ಸೆಳೆದ ತಪಸ್ವಿನಿ ಪೂಣಚ್ಚ–ಶ್ರೀರಾಮ್ !

ಹೇಮಲತಾ ಅವರ ಪೂರ್ಣ ಹೆಸರು ಹೇಮಲತಾ ಜಯಣ್ಣ. ಅಪ್ಪಟ ಹಳ್ಳಿ ಪ್ರತಿಭೆ. ಇವರ ಮೂಲ ಆದಯ ವ್ಯವಸಾಯ. ಹೇಮಲತಾ ಅವರಿಗೆ ಇಬ್ಬರೂ ಮಕ್ಕಳು. ವ್ಯವಸಾಯ, ಮನೆ ಕೆಲಸ ಮಾಡುತ್ತಾ ಹಾಡು ಹೇಳುವ ಅಭ್ಯಾಸ ಇವರದ್ದು. ಮಕ್ಕಳು ಮತ್ತು ಪತಿ ಪ್ರೋತ್ಸಾಹದಿಂದ ಸೋಷಿಯಲ್‌ ಮೀಡಿಯಾದಲ್ಲಿ ಅಕೌಂಟ್‌ ಹೊಂದಿ, ತಮ್ಮಲ್ಲಿ ಅಡಗಿದ ಸಂಗೀತದ ಪ್ರತಿಭೆ ಬಿತ್ತರಿಸಿದರು. ಲಕ್ಷಾಂತರ ಜನ ಫಾಲೋವರ್ಸ್‌ನ ಹೊಂದಿದ್ದಾರೆ. ಇವರು ಹೆಚ್ಚು ಜನರಿಗೆ ತಲುಪಿದ್ದು ಇಂಗ್ಲಿಷ್‌ನ ಬಿಲಿವರ್‌(Believer song) ಹಾಡಿನ ಮೂಲಕ. ಸಖತ್‌ ಟ್ರೆಂಡ್‌ ಆಗಿರುವ ಈ ಹಾಡನ್ನ ಅದೇ ದಾಟಿಯಲ್ಲಿ ಹಾಡಿ, ಸೋಷಿಯಲ್‌ ಮೀಡಿಯಾ ವೀಕ್ಷಕರ ಮನ ಗೆದ್ದಿದ್ದರು.

ಇದು ಅಗ್ನಿಪರೀಕ್ಷೆ ಸುತ್ತಾದರೆ, ಇನ್ನು ಬಿಗ್​ಬಾಸ್​ ಸೆಟ್​ ನೋಡಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ವಾಹಿನಿ ಪ್ರೊಮೋ ಒಂದನ್ನು ಶೇರ್​ ಮಾಡಿಕೊಂಡಿದೆ. ಬಿಗ್​ಬಾಸ್​​ನ ಸೆಟ್​ ಹೇಗೆ ಇರುತ್ತದೆ ಎನ್ನುವುದನ್ನು ನೋಡುವುದಕ್ಕಾಗಿ ಲಕ್ಷಾಂತರ ಮಂದಿ ಬಯಸುತ್ತಾರೆ. ಆದರೆ ಕೆಲವು ಷರತ್ತುಗಳು ಇರುವ ಹಿನ್ನೆಲೆಯಲ್ಲಿ, ಎಲ್ಲರಿಗೂ ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇದಕ್ಕೂ ಒಂದು ಸ್ಪರ್ಧೆ ಏರ್ಪಡಿಸಲಾಗಿದೆ. ಅರ್ಹರಿಗೆ ಬಿಗ್​ಬಾಸ್​ ಸೆಟ್​ ನೋಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Yash: ‘ರಾಮಾಯಣ’ದಲ್ಲಿ ಯಶ್‌ ಅಬ್ಬರ; ಫಿದಾ ಆದ ಹನಿ ಸಿಂಗ್

ಅದಕ್ಕೆ ಮೂರು ಹೆಜ್ಜೆಗಳು ಎಂದು ಪ್ರೊಮೋ ಶೇರ್​ ಮಾಡಲಾಗಿದೆ. ಬಿಗ್​ಬಾಸ್​ ಅಗ್ನಿಪರೀಕ್ಷೆಯ ಪ್ರತಿ ಎಪಿಸೋಡ್​ ನೋಡಿ, ಸಿಂಪಲ್​ ಪ್ರಶ್ನೆಗಳಿಗೆ ಉತ್ತರ ಕೊಡಿ, ಜಿಯೋಹಾಸ್ಟ್​ ಸ್ಟಾರ್​ ಆರ್ಮಿ ಬೋರ್ಡ್​ನಲ್ಲಿ ಮೇಲೇರಿ, ಅವಕಾಶ ಪಡೆಯಿರಿ ಎಂದು ಹೇಳಲಾಗಿದೆ. ಆದ್ದರಿಂದ ಬಿಗ್​ಬಾಸ್ ಸೆಟ್​ಗೆ ಹೋಗಲು ಬಯಸುವವರು ಈ ಸ್ಪರ್ಧೆಯಲ್ಲಿ ವಿನ್​ ಆಗಬೇಕಿದೆ.