ಯಶ್ ನಟಿಸಿ, ಸಹ ನಿರ್ಮಾಣ ಮಾಡಿರುವ ‘ಟಾಕ್ಸಿಕ್’ (Toxic Cinema) ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 08) ಬಿಡುಗಡೆ (Toxic Trailer) ಆಗುತ್ತಿದೆ. ಹಲವಾರು ಬಾಲಿವುಡ್ ತಾರೆಯರು, ಮಾಧ್ಯಮದವರು ಬೆಂಗಳೂರಿಗೆ ಬಂದಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ಕನ್ನಡದ ನಟಿ ರುಕ್ಮಿಣಿ ವಸಂತ್ ಅವರುಗಳು ಈಗಾಗಲೇ ಬೆಂಗಳೂರಿಗೆ ಬಂದಿದ್ದು, ಸಂಜೆಯ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ನಟಿಯರು ಮಾತ್ರವೇ ಅಲ್ಲದೆ, ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿರುವ ಹಲವಾರು ಖ್ಯಾತನಾಮರು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದಿನ ಟ್ರೇಲರ್ ಲಾಂಚ್ ಮುಖ್ಯ ಅತಿಥಿ (Main Guest Shivanna) ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್.
'ಟಾಕ್ಸಿಕ್' ಚಿತ್ರದ ಅಧಿಕೃತ ಟ್ರೇಲರ್
ಈ ಬಗ್ಗೆ ಕೆವಿಎನ್ ನಿರ್ಮಾಣ ಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ. ಇಂದು ಸಂಜೆ 7 ಗಂಟೆ 01 ನಿಮಿಷಕ್ಕೆ ಶಿವಣ್ಣ ಅವರ ಸಮ್ಮುಖದಲ್ಲಿ 'ಟಾಕ್ಸಿಕ್' ಚಿತ್ರದ ಅಧಿಕೃತ ಟ್ರೇಲರ್ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಈ ಈವೆಂಟ್‌ಗೆ ಕನ್ನಡದ ಹಿರಿಯ ನಟ ಶಿವಣ್ಣ ಆಗಮಿಸುವ ಮೂಲಕ ಇದು ಕನ್ನಡಿಗರ ಹಬ್ಬ ಆಗಲಿದೆ ಎನ್ನಬಹುದು ಕನ್ನಡನಾಡಿನಲ್ಲಿ, ಕನ್ನಡದ ಸ್ಟಾರ್ ನಟ ಯಶ್ ಅವರ ಹಾಲಿವುಡ್ ರೇಂಜ್‌ನ ಸಿನಿಮಾ 'ಟಾಕ್ಸಿಕ್' ಟ್ರೇಲರ್ ರಿಲೀಸ್ ಆಗುತ್ತಿರುವದೇ ಒಂದು ದೊಡ್ಡ ಹೆಮ್ಮೆ.
ಇದನ್ನೂ ಓದಿ: Ravi Mohan: ಮತ್ತೆ ಸೋಷಿಯಲ್ ಮೀಡಿಯಾಗೆ ಕಮ್ ಬ್ಯಾಕ್ ಆದ ಕೆನೀಶಾ ಫ್ರಾನ್ಸಿಸ್!
ಬಾಲಿವುಡ್ನ ತಾರೆಯರು ಮಾತ್ರವೇ ಅಲ್ಲದೆ, ದೇಶದಾದ್ಯಂತ ಮಾಧ್ಯಮದವರು, ಸಿನಿಮಾ ಪ್ರೇಮಿಗಳು ಇಂದು ಬೆಂಗಳೂರಿಗೆ ಬಂದಿದ್ದಾರೆ. ನಟ ಯಶ್ ‘ಟಾಕ್ಸಿಕ್’ ಮೂಲಕ ಎಲ್ಲರನ್ನೂ ಬೆಂಗಳೂರಿಗೆ ಬರುವಂತೆ ಮಾಡಿದ್ದಾರೆ. ಆ ಮೂಲಕ ಹಿಂದೊಮ್ಮೆ ಹೇಳಿದ್ದ ಮಾತನ್ನು ಯಶ್ ಮಾಡಿ ತೋರಿಸಿದ್ದಾರೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ (ರಾಯ್ ಮತ್ತು ಟಿಕೆಟ್ ಪಾತ್ರಗಳಲ್ಲಿ) ಜೊತೆಗೆ ಕಿಯಾರಾ ಅಡ್ವಾಣಿ (ನಾಡಿಯಾ), ನಯನತಾರಾ (ಗಂಗಾ), ಹುಮಾ ಖುರೇಷಿ (ಎಲಿಜಬೆತ್), ತಾರಾ ಸುತಾರಿಯಾ (ರೆಬೆಕ್ಕಾ) ಹಾಗೂ ರುಕ್ಮಿಣಿ ವಸಂತ್ (ಮೆಲಿಸ್ಸಾ) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಬಳಿಕ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ.
ಇದನ್ನೂ ಓದಿ: Rakesh adiga: ರಾಕೇಶ್ ಅಡಿಗ ಮದುವೆ ಫಿಕ್ಸ್! ಭಾವಿ ಪತ್ನಿ ಬಗ್ಗೆ ಹೇಳಿದ್ದೇನು?
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಹಾಗೂ ಯಶ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಹಾಗೂ ಉಜ್ವಲ್ ಕುಲಕರ್ಣಿ ಸಂಕಲನ ಒದಗಿಸಿದ್ದಾರೆ.