ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rakesh adiga: ರಾಕೇಶ್‌ ಅಡಿಗ ಮದುವೆ ಫಿಕ್ಸ್‌! ಭಾವಿ ಪತ್ನಿ ಬಗ್ಗೆ ಹೇಳಿದ್ದೇನು?

Rakesh adiga: ಬಿಗ್ ಬಾಸ್’ (Bigg Boss Kannada) ಮೂಲಕವೂ ಜನಪ್ರಿಯತೆ ಗಳಿಸಿದ ನಟ ರಾಕೇಶ್ ಅಡಿಗ ಇದೀಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಬಾಳಸಂಗಾತಿಯ ಬಗ್ಗೆ ಸ್ವತಃ ರಾಕೇಶ್‌ ಅವರೇ ಮಾಹಿತಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ನನಗೆ ಅವಶ್ಯಕತೆ ಇರುವಂತಹ ಹುಡುಗಿ ಸಿಕ್ಕಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ರಾಕೇಶ್‌ ಅಡಿಗ ಮದುವೆ ಫಿಕ್ಸ್‌! ಭಾವಿ ಪತ್ನಿ ಬಗ್ಗೆ ಹೇಳಿದ್ದೇನು?

ರಾಕೇಶ್‌ ಅಡಿಗ -

Yashaswi Devadiga
Yashaswi Devadiga Aug 8, 2026 10:38 AM

‘ಜೋಶ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿ, ಬಳಿಕ ‘ಬಿಗ್ ಬಾಸ್’ (Bigg Boss Kannada) ಮೂಲಕವೂ ಜನಪ್ರಿಯತೆ ಗಳಿಸಿದ ನಟ ರಾಕೇಶ್ ಅಡಿಗ ಇದೀಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಬಾಳಸಂಗಾತಿಯ ಬಗ್ಗೆ ಸ್ವತಃ ರಾಕೇಶ್‌ (Rakesh Adiga) ಅವರೇ ಮಾಹಿತಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ನನಗೆ ಅವಶ್ಯಕತೆ ಇರುವಂತಹ ಹುಡುಗಿ ಸಿಕ್ಕಿದ್ದಾರೆ ಎಂದು ಸಂದರ್ಶನವೊಂದರಲ್ಲಿ (Interview) ಹೇಳಿಕೊಂಡಿದ್ದಾರೆ.

ನನಗೆ ಅವಶ್ಯಕತೆ ಇರುವಂತಹ ಹುಡುಗಿ

ನನಗೆ ಬೇಕಾಗಿರೋ ತರಹ ಹುಡುಗಿ ಅನ್ನೋದಕ್ಕಿಂತ, ನನಗೆ ಅವಶ್ಯಕತೆ ಇರುವಂತಹ ಹುಡುಗಿ ಸಿಕ್ಕಿದ್ದಾರೆ. ನಾನು ಒಬ್ಬ ಬೆಟರ್ ಪರ್ಸನ್ ಆಗೋದಕ್ಕೆ ಯಾವ ತರಹ ಬೇಕೋ, ಆ ತರಹ ಹುಡುಗಿ ಸಿಕ್ಕಿದ್ದಾರೆ ಮುಂದಿನ ವರ್ಷ ಮದುವೆ. ನನಗೆ ತುಂಬಾ ಸಿಂಪಲ್ ಆಗಿ ಮದುವೆ ಆಗಬೇಕು ಅಂತ ಇಷ್ಟ. ಆದರೆ ಹೆಣ್ಣುಮಕ್ಕಳಿಗೆ ಆಸೆ ಇರುತ್ತೆ ಅದು ಡಿಸ್ಕಷನ್‌ನಲ್ಲಿದೆ.

ಅವರ ಆಸೆ ಜೊತೆಗೆ ನಮ್ಮ ಆಸೆಯನ್ನ ಸೇರಿಸಿ ಕಾಮನ್ ಗ್ರ್ಯಾಂಡ್‌ನಲ್ಲಿ ಏನಾದರೂ ಮಾಡಬಹುದಾ ಅಂತ ಡಿಸ್ಕಷನ್‌ನಲ್ಲಿದೆ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 13: ಅಗ್ನಿಪರೀಕ್ಷೆ ಅನ್ನೋ ಮಹಾಯುದ್ಧದ ಜ್ಯೂರಿ ಇವರೇ! ಆದ್ರೂ ವೀಕ್ಷಕರಿಗೆ ಇದೊಂದೇ ಬೇಸರ

ರಾಕೇಶ್ ಅಡಿಗ 2009ರಲ್ಲಿ ಬಿಡುಗಡೆಯಾದ ‘ಜೋಶ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ‘ಮನಸಾಲಜಿ’, ‘ಪರಿ’, ‘ಯಾರೇ ಕೂಗಾಡಲಿ’, ‘ನಂದ ಗೋಕುಲ’, ‘ಮಂದಹಾಸ’, ‘ಕರ್ನಾಟಕ ಅಯೋಧ್ಯಪುರಂ’, ‘ಕೋಟಿಗೊಬ್ಬ ಲವ್ ಸ್ಟೋರಿ’, ‘ಪ್ರೀತಿಯಿಂದ’, ‘ಮಂಡ್ಯ ಟು ಮುಂಬೈ’, ‘ನಟೋರಿಯಸ್’, ‘ಡವ್’ ಹಾಗೂ ‘ನೈಟ್ ಔಟ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅಲೆಮಾರಿ’ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: Ramayana: ದೀಪಾವಳಿಗೂ ಎರಡು ದಿನ ಮುನ್ನ ರಾಮಾಯಣ ತೆರೆಗೆ! ನಮಿತ್ ಮಲ್ಹೋತ್ರಾ ಕೊಟ್ಟ ಕಾರಣ ಇದು

ಇತ್ತೀಚೆಗೆ ʻನಾನು ಮತ್ತು ಗುಂಡ 2ʼ ಸಿನಿಮಾದಲ್ಲೂ ನಟಿಸಿದ್ದರು.ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1ರಲ್ಲಿ ಭಾಗವಹಿಸಿದ್ದ ರಾಕೇಶ್, ಅಲ್ಲಿಂದ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಪ್ರವೇಶ ಪಡೆದಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ರನ್ನರ್ ಆಗಿ ಹೊರಹೊಮ್ಮಿದ್ದರು.