ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Trisha: ಬಿಗ್‌ ಅಪ್ಡೇಟ್‌! ಖ್ಯಾತ ಉದ್ಯಮಿ ನಟಿ ತ್ರಿಷಾ ಕೃಷ್ಣನ್ ಮದುವೆ?

Trisha krishnan: ತಮ್ಮಅದ್ಭುತ ಅಭಿನಯದಿಂದ ಬಹುಭಾಷೆಯಲ್ಲಿ ನಟಿಸಿ ಖ್ಯಾತಿ ಗಳಿಸಿರುವ ತ್ರಿಷಾ ಕೃಷ್ಣನ್ ಅವರು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇದೀಗ ಅವರು ಶೀಘ್ರವೇ ವಿವಾಹವಾಗ್ತಿದ್ದಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಚೆನ್ನೈ: ಭಾರತೀಯ ಸಿನಿಮಾ ರಂಗದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಬಹುಭಾಷೆಯಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ತ್ರಿಷಾ ಕೃಷ್ಣನ್ (Trisha krishnan) ಅವರು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದಾರೆ. ತಮಿಳು ಮತ್ತು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯವಾಗಿರುವ ಇವರು ಕನ್ನಡದಲ್ಲಿ ಪವರ್ (Power) ಚಿತ್ರದಲ್ಲಿ ಕೂಡ ನಟಿಸಿ ಪ್ರಸಿದ್ಧಿ ಪಡೆದಿದ್ದಾರೆ. ಸಿನಿಮಾ ಇಂಡಸ್ಟ್ರಿಯ ಹೊರತಾಗಿ ಅವರು ತಮ್ಮ ವೈಯಕ್ತಿಕ ಜೀವನದ ವಿಚಾರದಿಂದಲೂ ಆಗಾಗ ಮುನ್ನಲೆಗೆ ಬರುತ್ತಿರುತ್ತಾರೆ.

ನಟಿ ತ್ರಿಷಾ ಅವರು ಉದ್ಯಮಿ ವರುಣ್ ಮಣಿಯನ್ (Varun manian) ಜೊತೆ 2015ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ ಅವರು ಶೀಘ್ರದಲ್ಲೇ ವಿವಾಹವಾಗುತ್ತಾರೆ ಎಂದು ಸಹ ಹೇಳಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಈ ನಿಶ್ಚಿತಾರ್ಥ ಸಂಬಂಧ ರದ್ದಾಗಿದೆ. ಬಳಿಕ ತ್ರಿಷಾ ಮದುವೆ ವಿಚಾರದಿಂದ ದೂರವೇ ಉಳಿದಿದ್ದರು. ಅವರ ಅಭಿಮಾನಿಗಳು ಮದುವೆ ಬಗ್ಗೆ ಕೇಳಿದಾಗೆಲ್ಲ ತ್ರಿಷಾ ಮೌನವಹಿಸಿದ್ದರು. ಇದೀಗ ಅವರು ಶೀಘ್ರವೇ ವಿವಾಹ ವಾಗ್ತಿದ್ದಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟಿ ತ್ರಿಷಾ ಅವರ ಪೋಷಕರು ತಮ್ಮ ಮಗಳಿಗೆ ವರನನ್ನು ನೋಡಿದ್ದಾರೆ. ಚಂಡೀಗಢದ ಉದ್ಯಮಿಯೊಂದಿಗೆ ತ್ರಿಷಾ ಅವರ ಮದುವೆ ಮಾಡಿಸಲು ಕುಟುಂಬದವರು ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದು ಹೇಳ ಲಾಗುತ್ತಿದೆ. ಇನ್ನೊಂದು ವರದಿಯ ಪ್ರಕಾರ ಈ ಎರಡೂ ಕುಟುಂಬಗಳು ವರ್ಷಗಳಿಂದ ಪರಸ್ಪರ ಆಪ್ತವಾಗಿದ್ದು ಈ ಸಂಬಂಧ ಈಗ ಮದುವೆ ತನಕ ಹೋಗಿದೆ ಎಂದು ಹೇಳಲಾಗುತ್ತಿದೆ.

ಅಷ್ಟಕ್ಕೂ ತ್ರಿಷಾ ಅವರ ಮದುವೆ ನಿಶ್ಚಯವಾಗಿದೆ ಎನ್ನಲು ಇನ್ನೊಂದು ಕಾರಣ ಕೂಡ ಇದೆ. ನಟಿ ತ್ರಿಷಾ ಅವರು ಎಲ್ಲಿ ಹೋದರು ಮದುವೆ ಹಾಗೂ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳು ಹಾಗೂ ಮಾಧ್ಯಮದವರು ಪ್ರಶ್ನೆ ಮಾಡುತ್ತಲೆ ಇರುತ್ತಾರೆ. ಆದರೆ ಇದಕ್ಕೆ ಅವರು ಬಹುತೇಕ ಸಂದರ್ಭದಲ್ಲಿ ಮೌನವಹಿಸಿದ್ದರು. ಆದರೆ ಇತ್ತೀಚೆಗೆ ನಟಿ ತ್ರಿಷಾ ಅವರು ಸರಿಯಾದ ವ್ಯಕ್ತಿ ಸಿಕ್ಕರೆ ಮದುವೆಯಾಗಲು ಸಿದ್ಧ ಸರಿಯಾದ ಸಮಯ ಇನ್ನೂ ಕೂಡಿ ಬಂದಿಲ್ಲ ಎಂದು ಮಾಧ್ಯಮ ಒಂದರ ಮುಂದೆ ಹೇಳಿಕೆ ನೀಡಿದ್ದರು. ಹೀಗಾಗಿ ಅವರ ಮದುವೆ ವದಂತಿ ಯಾವುದು ಸುಳ್ಳಲ್ಲ ನಿಜ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ:Mahalaya Movie: ಮೋಹನ್ ಮಾಯಣ್ಣ ನಿರ್ದೇಶನದ ʼಮಹಾಲಯʼ ಚಿತ್ರಕ್ಕೆ ನಟ ಶ್ರೀಮುರಳಿ ಚಾಲನೆ

ನಟಿ ತ್ರಿಷಾ ಕೃಷ್ಣನ್ ಅವರು 2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಈ ಸಂಬಂಧ ಮದುವೆ ತನಕ ಹೋಗಲೇ ಇಲ್ಲ. ವರುಣ್ ಹಾಗೂ ತ್ರಿಷಾ ನಡುವೆ ವೈಮನಸ್ಸು ಬಂದಿದ್ದ ಕಾರಣಕ್ಕೆ ತ್ರಿಶಾ ಈ ಮದುವೆಯಿಂದ ದೂರ ಸರಿಸಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಇನ್ನು ಕೆಲವು ವರದಿಯಲ್ಲಿ ತ್ರಿಷಾ ತಮ್ಮ ಸಿನಿಮಾ ಕೆರಿಯರ್ ಮುಂದುವರಿಸಲು ಬಯಸಿದ್ದರು ಅದಕ್ಕೆ ವರುಣ್ ನಿರಾಕರಿಸಿದ್ದು ಹೀಗಾಗಿ ಇಬ್ಬರ ಸಂಬಂಧ ಹಾಳಾಗಿ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂದು ಹೇಳಲಾಗುತ್ತದೆ.

ನಟಿ ತ್ರಿಷಾ ಅವರ ಹೆಸರು ನಟ ವಿಜಯ್ (Thalapathy Vijay) ಜೊತೆಗೆ ಕೇಳಿ ಬಂದಿತ್ತು. ತಮಿಳು ಚಿತ್ರರಂಗದ ಖ್ಯಾತ ಜೋಡಿಯಾದ ಇವರಿಬ್ಬರು ಈ ಹಿಂದೆ ಗಿಲ್ಲಿ (Ghilli), ತಿರುಪಾಚಿ ಆತಿ, ಕುರುವಿಯಂತಹ ಹಿಟ್‌ ಸಿನಿಮಾದಲ್ಲಿ ನಟಿಸಿ ಫೇಮಸ್ ಆಗಿದ್ದರು. ಅದಾದ ಬಳಿಕ ಅವರಿಬ್ಬರ ನಡುವೆ ಅನೇಕ ಗಾಸಿಪ್ ಕೂಡ ಹರಿದಾಡಿದೆ. ಹೀಗಾಗಿ ನಟ ವಿಜಯ್ ಅವರ ಕುಟುಂಬವು ತ್ರಿಷಾ ಅವರಿಂದ ದೂರವಿರಲು ಕೇಳಿಕೊಂಡಿದೆ ಎಂಬ ವದಂತಿಗಳು ಸಹ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಅವರಿಬ್ಬರು ನಾವು ಸ್ನೇಹಿತರಷ್ಟೇ ಎಂದು ಹೇಳಿಕೆ ನೀಡಿ ವದಂತಿಗಳನ್ನು ತಳ್ಳಿ ಹಾಕಿದ್ದರು. 15ವರ್ಷದ ಬಳಿಕ 2023ರಲ್ಲಿ ತೆರೆಕಂಡ ಲಿಯೋ (Leo) ಸಿನಿಮಾದಲ್ಲಿ ಇಬ್ಬರು ಒಟ್ಟಾಗಿ ನಟಿಸಿದ್ದಾರೆ.