ತಮಿಳು ನಟ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ʻಜನ ನಾಯಗನ್ʼ ಸಿನಿಮಾವು ಅಂದುಕೊಂಡಂತೆ ತೆರೆಕಾಣಲಿಲ್ಲ. ಅದಕ್ಕೆ ಸೆನ್ಸಾರ್ ಸಮಸ್ಯೆ ಆಯಿತು. ಈಗಾಗಲೇ 3 ತಿಂಗಳು ತಡವಾಗಿರುವುದು ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್‌ಗೆ ದೊಡ್ಡ ಹೊರೆ ಆಗಿದೆ. ಅದು ಒಂದು ಕಡೆಯಾದರೆ, ತೆರೆಗೆ ಬರುವುದಕ್ಕೂ ಮುನ್ನವೇ ಚಿತ್ರದ ಪೈರಸಿ ಲೀಕ್ ಕೂಡ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಮತ್ತೊಂದು ಕಡೆ.
ಬರಲಿದೆ ವಿಜಯ್ ಅವರ 70ನೇ ಸಿನಿಮಾ
ಹಾಗಾಗಿ, ಕರ್ನಾಟಕ ಮೂಲದ ಕೆವಿಎನ್ ಪ್ರೊಡಕ್ಷನ್ಸ್ ಸಹಾಯಕ್ಕೆ ದಳಪತಿ ವಿಜಯ್ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಿರ್ಮಾಪಕರಿಗೆ ವಿಜಯ್ ಕಡೆಯಿಂದ ಒಂದು ಪ್ರಾಮಿಸ್ ಕೂಡ ಸಿಕ್ಕಿದೆಯಂತೆ. ಹೌದು, ʻಜನ ನಾಯಗನ್ʼ ಸಿನಿಮಾದ ನಂತರ ವಿಜಯ್ ನಟಿಸುವುದಿಲ್ಲ ಎನ್ನಲಾಗಿತ್ತು. ವಿಜಯ್ ಅವರ ಕೊನೆಯ ಸಿನಿಮಾ ʻಜನ ನಾಯಗನ್ʼ ಎಂದೇ ಬಿಂಬಿತವಾಗಿತ್ತು. ಆದರೆ ಈಗ ನಿರ್ಮಾಪಕರಿಗೆ ಎದುರಾಗಿರುವ ಸಂಕಷ್ಟ ಕಂಡು, ಸ್ವತಃ ವಿಜಯ್ 70ನೇ ಸಿನಿಮಾವನ್ನು ಕೂಡ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿಯೇ ಮಾಡುವುದಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆ ಮೂಲಕ ನಿರ್ಮಾಪಕರಿಗೆ ಸಹಾಯ ಮಾಡುವುದು ಅವರ ಉದ್ದೇಶವಾಗಿದೆಯಂತೆ.
Jana Nayagan postponed: 'ಜನ ನಾಯಗನ್' ಸಿನಿಮಾ ರಿಲೀಸ್ ಮುಂದೂಡಿಕೆ ; ದಳಪತಿ ವಿಜಯ್ ಫ್ಯಾನ್ಸ್ ಬೇಸರ
ಅಂದಹಾಗೆ, ಈ ಸಿನಿಮಾಗೆ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ವೆಟ್ರಿಮಾರನ್ ಅವರು ಗಟ್ಟಿ ಕಥೆಗಳನ್ನು ಹೇಳುವಲ್ಲಿ ಹೆಸರುವಾಸಿಯಾಗಿದ್ದಾರೆ. ಒಂದು ವೇಳೆ ಈ ಕಾಂಬಿನೇಷನ್ ನಿಜವಾದರೆ, ಅದು ತಮಿಳು ಚಿತ್ರರಂಗದ ಪಾಲಿಗೆ ದೊಡ್ಡ ಮೈಲಿಗಲ್ಲಾಗಲಿದೆ. ವಿಜಯ್ ಅವರ ಮಾಸ್ ಅಪೀಲ್ ಮತ್ತು ವೆಟ್ರಿಮಾರನ್ ಅವರ ಅದ್ಭುತ ಕಥೆ ಹೇಳುವ ಶೈಲಿ ಒಂದಾದರೆ, ಒಂದು ಮಾಸ್ ಕಲ್ಟ್ ಸಿನಿಮಾವನ್ನು ಸಿನಿಪ್ರಿಯರು ನಿರೀಕ್ಷೆ ಮಾಡಬಹುದಾಗಿದೆ.
Jana Nayagan: 'ಜನ ನಾಯಗನ್' ದೃಶ್ಯ ಲೀಕ್; ಬೆಂಬಲಕ್ಕೆ ನಿಂತ ತಾರೆಯರು
ಆದರೆ, ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಎಲ್ಲವೂ ಸದ್ಯಕ್ಕೆ ಮಾತುಕತೆಯ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ, ಚುನಾವಣೆ ದಿನಾಂಕ ಹತ್ತಿರವಾಗುತ್ತಿರುವಂತೆಯೇ ವಿಜಯ್ ಅವರು ಪ್ರಚಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ಫಲಿತಾಂಶದ ನಂತರವೇ ಅವರ 70ನೇ ಸಿನಿಮಾದ ಕುರಿತ ಹೆಚ್ಚಿನ ಅಪ್ಡೇಟ್ ಸಿಗಬಹುದು ಎನ್ನಲಾಗುತ್ತಿದೆ.