ಕಾಲಿವುಡ್‌ನ ಖ್ಯಾತ ನಟ ʻದಳಪತಿʼ ವಿಜಯ್ ತಮ್ಮ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮೊದಲ ಚುನಾವಣೆಯ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಚುನಾವಣಾ ರ್‍ಯಾಲಿಗಳಲ್ಲಿ ಭಾಗಿಯಾಗಿ, ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಬೇಡುತ್ತಿದ್ದಾರೆ. ಆದರೆ ಈಚೆಗೆ ರ್‍ಯಾಲಿಯೊಂದರಲ್ಲಿ ನಡೆದ ಒಂದು ಘಟನೆ ದಳಪತಿ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಹೌದು, ರ್‍ಯಾಲಿ ವೇಳೆ ಅಭಿಮಾನಿಯೊಬ್ಬರು ಅವರ ಮದುವೆಯ ಫೋಟೋ ಫ್ರೇಮ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ವಿಶೇಷವೆಂದರೆ, ವಿಜಯ್ ಮತ್ತು ಸಂಗೀತಾ ಅವರ ಮದುವೆಯ ಈ ಫೋಟೋದಲ್ಲಿ ದಿವಂಗತ ನಟ ವಿಜಯಕಾಂತ್ ಕೂಡ ಇದ್ದಾರೆ. ಇದೊಂದು ಎಡಿಟೆಡ್ ಫೋಟೋ ಆಗಿದ್ದರೂ, ವಿಜಯ್ ಅವರ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿರುವುದು ಗಮನಸೆಳೆದಿದೆ. ಅಲ್ಲದೆ, ಆ ಫೋಟೋ ಫ್ರೇಮ್ ಅನ್ನು ವಿಜಯ್ ಪಡೆದುಕೊಂಡ ಮೇಲೆ ಅವರು ನೀಡಿದ ರಿಯಾಕ್ಷನ್ ಕೂಡ ಎಲ್ಲರ ಗಮನಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಭಿಮಾನಿ ಎಸೆದ ಹೂವನ್ನು ಬಾಂಬ್ ಎಂದು ತಿಳಿದು ಸೈಕಲ್ ಬಿಟ್ಟು ಓಡಿದ ದಳಪತಿ ವಿಜಯ್; ವಿಡಿಯೋ ನೋಡಿ
ಈ ಘಟನೆ ನಡೆದಿದ್ದು ಹೇಗೆ?
ತಮ್ಮ ಭದ್ರತಾ ಸಿಬ್ಬಂದಿಯ ಮಧ್ಯೆ ವ್ಯಾನ್ ಮೇಲೆ ನಿಂತು ಅಭಿಮಾನಿಗಳತ್ತ ವಿಜಯ್ ಕೈಬೀಸುತ್ತಿದ್ದರು. ಆಗ ಅಭಿಮಾನಿ ಕೈಯಲ್ಲಿದ್ದ ಈ ಫೋಟೋ ಫ್ರೇಮ್ ವಿಜಯ್ ಗಮನ ಸೆಳೆಯಿತು. ತಕ್ಷಣ ಅದನ್ನು ತಮ್ಮ ಭದ್ರತಾ ತಂಡಕ್ಕೆ ನೀಡುವಂತೆ ಅಭಿಮಾನಿಗೆ ಸನ್ನೆ ಮಾಡಿದರು ವಿಜಯ್. ಬಳಿಕ ಆ ಫೋಟೋ ಫ್ರೇಮ್ ಅನ್ನು ಎತ್ತಿ ಹಿಡಿದ ಅವರು ಜನಸಮೂಹದತ್ತ ತೋರಿಸಿ 'ಥಮ್ಸ್ ಅಪ್' ಸನ್ನೆ ಮಾಡಿದರು. ಆ ಎಡಿಟ್ ಮಾಡಿದ ಫೋಟೋವನ್ನು ದಿಟ್ಟಿಸಿ ಕೆಲ ಕ್ಷಣಗಳ ಕಾಲ ನೋಡಿದ ಅವರು ಬಳಿಕ ಅದನ್ನು ಮತ್ತೆ ಭದ್ರತಾ ಸಿಬ್ಬಂದಿಗೆ ನೀಡಿದರು.
Thalapathy Vijay Net Worth: 'ದಳಪತಿ' ವಿಜಯ್ ಹೆಸರಲ್ಲಿದೆ ಕೋಟಿ ಕೋಟಿ ಆಸ್ತಿ; ಪತ್ನಿ ಬಳಿ ಎಷ್ಟಿದೆ?
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಪತ್ನಿ
ನಟ ವಿಜಯ್ ಅವರ ಪತ್ನಿ ಸಂಗೀತಾ ತಮ್ಮ 27 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ಕಳೆದ ಫೆಬ್ರವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 1999ರಲ್ಲಿ ವಿವಾಹವಾದ ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಸಂಗೀತಾ ತಮ್ಮ ಅರ್ಜಿಯಲ್ಲಿ ವಿಚ್ಛೇದನಕ್ಕೆ ಕಾರಣವನ್ನು ಉಲ್ಲೇಖಿಸಿದ್ದು, ಸಹ-ನಟಿಯೊಬ್ಬರ ಜೊತೆ ವಿಜಯ್ ಸಂಬಂಧ ಹೊಂದಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ. ಈ ನಡುವೆ ನಟಿ ತ್ರಿಷಾ ಅವರೊಂದಿಗೆ ವಿಜಯ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಆ ಬಗ್ಗೆ ವದಂತಿಗಳು ಹಬ್ಬಿವೆ.
ʻದಳಪತಿʼ ವಿಜಯ್ ಅವರಿಗೆ ಫೋಟೋ ಫ್ರೇಮ್ ಗಿಫ್ಟ್ ಕೊಟ್ಟ ವಿಡಿಯೋ
ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ದಳಪತಿ
ಕಳೆದ 4 ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯವಾಗಿರುವ ನಟ ವಿಜಯ್ ಅವರು, ಇದೀಗ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ತೆರೆಗೆ ಬರಬೇಕಿರುವ ಜನ ನಾಯಗನ್, ಅವರ ಕಡೆಯ ಚಿತ್ರವಾಗಿದೆ. ಟಿವಿಕೆ ಪಕ್ಷವನ್ನು ಸ್ಥಾಪಿಸಿರುವ ವಿಜಯ್, ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಏಪ್ರಿಲ್ 23 ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 233 ಕ್ಷೇತ್ರಗಳಲ್ಲಿ ಟಿವಿಕೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮೇ 4ರಂದು ಚುನಾವಣಾ ಫಲಿತಾಂಶ ಬರಲಿದ್ದು, ಅಂದು ವಿಜಯ್ ಅವರ ಮುಂದಿನ ರಾಜಕೀಯ ಹಾದಿಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ.