ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻದಳಪತಿʼ ವಿಜಯ್‌ ಸಿಎಂ ಅಗುತ್ತಿದ್ದಂತೆಯೇ ʻಜನ ನಾಯಗನ್‌ʼ ರಿಲೀಸ್‌ ಬಗ್ಗೆ ಸಿಕ್ತು ಹೊಸ ಅಪ್ಡೇಟ್;‌ ನಿರ್ಮಾಪಕರು ಹೇಳಿದ್ದೇನು?

ತಮಿಳುನಾಡಿನ ನೂತನ ಸಿಎಂ ಆಗಿ ದಳಪತಿ ವಿಜಯ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಬಿಡುಗಡೆಯ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಚಿತ್ರಕ್ಕೆ ಇನ್ನೂ ಸಿಬಿಎಫ್‌ಸಿ (CBFC) ಪ್ರಮಾಣಪತ್ರ ಸಿಗದ ಕಾರಣ ವಿಳಂಬವಾಗುತ್ತಿದೆ. ಹಾಗಾದರೆ, ಈ ಸಿನಿಮಾದ ಬಿಡುಗಡೆ ಯಾವಾಗ? ಈ ಬಗ್ಗೆ ನಿರ್ಮಾಪಕ ವೆಂಕಟ್ ಕೆ ನಾರಾಯಣ ಮಾತನಾಡಿದ್ದಾರೆ.

ನಟ ದಳಪತಿ ವಿಜಯ್‌ ಅವರು ಕೊನೆಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಟಿವಿಕೆ ಪಕ್ಷವು ಅಧಿಕಾರ ಹಿಡಿದಿದೆ. ಇದರ ಜೊತೆಗೆ ವಿಜಯ್‌ ಅಭಿಮಾನಿಗಳ ಮತ್ತೊಂದು ಆಸೆ ಏನೆಂದರೆ, ʻಜನ ನಾಯಗನ್‌ʼ ಸಿನಿಮಾವು ಯಾವಾಗ ತೆರೆಗೆ ಬರಲಿದೆ ಎಂಬುದು. ಇದೀಗ ವಿಜಯ್‌ ಅಧಿಕಾರಕ್ಕೆ ಬಂದಿರುವುದರಿಂದ ʻಜನ ನಾಯಗನ್‌ʼ ಸಿನಿಮಾವು ರಿಲೀಸ್‌ಗೆ ಇದ್ದ ಅಡೆತಡೆಗಳು ಬಗೆಹರಿಯಲಿವೆ ಎಂಬ ನಿರೀಕ್ಷೆಯಲ್ಲಿ ಫ್ಯಾನ್ಸ್‌ ಇದ್ದಾರೆ.

ಈ ನಡುವೆ ʻಜನ ನಾಯಗನ್‌ʼ ಸಿನಿಮಾಗೆ ಇನ್ನೂ ಕೂಡ ಪ್ರಮಾಣ ಪತ್ರ ಸಿಕ್ಕಿಲ್ಲ ಎಂಬುದು ಗೊತ್ತಾಗಿದೆ. ಸ್ವತಃ ನಿರ್ಮಾಪಕರೇ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಂದು ಚೆನ್ನೈನಲ್ಲಿ ನಡೆದ ವಿಜಯ್‌ ಅವರ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ್ದ ಕೆವಿಎನ್‌ ಪ್ರೊಡಕ್ಷನ್ಸ್‌ನ ಕೆ ವೆಂಕಟ್‌ ನಾರಾಯಣ್‌ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಿರ್ಮಾಪಕ ವೆಂಕಟ್‌ ಕೆ ನಾರಾಯಣ ಅವರ ಹೇಳಿಕೆ



ಕೆವಿಎನ್‌ ಹೇಳಿದ್ದೇನು?

"ನನಗೆ ತುಂಬಾ ಸಂತೋಷವಾಗುತ್ತಿದೆ.. ಎಲ್ಲರೂ 'ಜನ ನಾಯಗನ್' ಎನ್ನುವುದು ಕೇವಲ ಒಂದು ಸಿನಿಮಾ ಎಂದುಕೊಂಡಿದ್ದರು.. ಆದರೆ ಈಗ ವಿಜಯ್‌ ಅವರು ನಿಜವಾಗಿಯೂ ತಮಿಳುನಾಡಿನ 'ಜನ ನಾಯಗನ್' (ಜನನಾಯಕ) ಆಗಿದ್ದಾರೆ.. ನಾವು ಸಿಬಿಎಫ್‌ಸಿ (CBFC) ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದೇವೆ.. ಪ್ರಮಾಣಪತ್ರ ಸಿಕ್ಕ ತಕ್ಷಣ ನಾವು 'ಜನ ನಾಯಗನ್' ಚಿತ್ರವನ್ನು ಬಿಡುಗಡೆ ಮಾಡುತ್ತೇವೆ.." ಎಂದು ಕೆ ವೆಂಕಟ್‌ ನಾರಾಯಣ ತಿಳಿಸಿದ್ದಾರೆ.

ಲೋಕಭವನಕ್ಕೆ ಹೋಗಿದ್ದ ಕೆವಿಎನ್‌

ಕೆಲ ದಿನಗಳ ಹಿಂದೆ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ನಟ ವಿಜಯ್‌ ಅವರು ಲೋಕ ಭವನದಲ್ಲಿರುವ ರಾಜ್ಯಪಾಲರನ್ನು ಭೇಟಿಯಾಗಲು ಹೋಗಿದ್ದರು. ಆಗ ಅವರ ಜೊತೆಗೆ ಕೆವಿಎನ್‌ ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ಕೂಡ ಹೋಗಿದ್ದು ಅಚ್ಚರಿ ಹುಟ್ಟಿಸಿತ್ತು.

ನಟ-ರಾಜಕಾರಣಿ ವಿಜಯ್ ಅವರ ಜೊತೆಗೆ ಇವರು ಕಾಣಿಸಿಕೊಂಡ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಸುರಿಮಳೆಯೇ ಶುರುವಾಗಿತ್ತು. ಟಿವಿಕೆ (TVK) ಪಕ್ಷದಲ್ಲಿ ಯಾವುದೇ ಅಧಿಕೃತ ಸ್ಥಾನದಲ್ಲಿರದ ಇವರು, ರಾಜ್ಯಪಾಲರನ್ನು ಭೇಟಿ ಮಾಡಿದ ನಿಯೋಗದಲ್ಲಿ ಏಕೆ ಇದ್ದರು ಎಂಬ ಪ್ರಶ್ನೆ ಕೇಳಿಬಂದಿತ್ತು. "ವಿಜಯ್ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಜ್ಯಪಾಲರನ್ನು ಭೇಟಿ ಮಾಡಿದಾಗ, ಕೆವಿಎನ್ (KVN) ನಿರ್ಮಾಪಕ ಕೆ. ವೆಂಕಟ ನಾರಾಯಣ ಅಲ್ಲಿ ಏನು ಮಾಡುತ್ತಿದ್ದರು?" ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೇಳಿದ್ದರು.

Jana Nayagan postponed: 'ಜನ ನಾಯಗನ್‌' ಸಿನಿಮಾ ರಿಲೀಸ್‌ ಮುಂದೂಡಿಕೆ ; ದಳಪತಿ ವಿಜಯ್ ಫ್ಯಾನ್ಸ್‌ ಬೇಸರ

ಜನ ನಾಯಗನ್‌ಗೆ ಸೆನ್ಸಾರ್‌ ಸಮಸ್ಯೆ

ವಿಜಯ್‌ ಅವರ ಕೊನೆಯ ಸಿನಿಮಾ ಜನ ನಾಯಗನ್‌ಗೆ ಈವರೆಗೂ ಸೆನ್ಸಾರ್‌ ಪ್ರಮಾಣ ಪತ್ರ ಸಿಗದೇ ಇರುವುದರಿಂದ ತೆರೆಕಾಣಲು ಸಾಧ್ಯವಾಗಿಲ್ಲ. ಜನವರಿ 9ರಂದು ಜನ ನಾಯಗನ್‌ ಸಿನಿಮಾ ತೆರೆಕಾಣಬೇಕಿತ್ತು. ಇದೀಗ 4 ತಿಂಗಳು ಕಳೆದರೂ ಬಿಡುಗಡೆ ಬಗ್ಗೆ ಅಪ್ಡೇಟ್‌ ಸಿಕ್ಕಿಲ್ಲ.