Varalaxmi Sarathkumar: ಬಾಲ್ಯದಲ್ಲಿ 5-6 ಮಂದಿಯಿಂದ ಕಿರುಕುಳ; ಕಿಚ್ಚ ಸುದೀಪ್ ನಾಯಕಿ ವರಲಕ್ಷ್ಮೀಯ ಕಣ್ಣೀರ ಕಥೆ ಇದು
ಕಳೆದ ವರ್ಷ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ಕಾಲಿವುಡ್ ನಟಿ ವರಲಕ್ಷ್ಮೀ ಶರತ್‌ಕುಮಾರ್ ಟಿವಿ ಶೋ ಒಂದರಲ್ಲಿ ಬಾಲ್ಯದಲ್ಲಿ ತಮ್ಮ ಮೇಲೆ ನಡೆದ ಲೌಂಗಿಕ ದೌರ್ಜನ್ಯದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ವರಲಕ್ಷ್ಮೀ ಶರತ್‌ಕುಮಾರ್.

ಬೆಂಗಳೂರು: ಕಳೆದ ವರ್ಷ ತೆರೆಕಂಡ ಕಿಚ್ಚ ಸುದೀಪ್ (Kiccha Sudeep) ಅಭಿನಯದ 'ಮ್ಯಾಕ್ಸ್' (Max) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ಕಾಲಿವುಡ್ ನಟಿ ವರಲಕ್ಷ್ಮೀ ಶರತ್‌ಕುಮಾರ್ (Varalaxmi Sarathkumar) ಇತ್ತೀಚೆಗೆ ಟಿವಿ ಶೋ ಒಂದರಲ್ಲಿ ಬಾಲ್ಯದಲ್ಲಿ ತಮ್ಮ ಮೇಲೆ ನಡೆದ ಲೌಂಗಿಕ ದೌರ್ಜನ್ಯದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಭಾವುಕರಾಗಿ ಅತ್ತಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋದ ಜಡ್ಜ್ ಆಗಿರುವ ಅವರು ಲೈಂಗಿಕ ದೌರ್ಜನ್ಯದಿಂದಾಗುವ ಪರಿಣಾಮದ ಬಗ್ಗೆ ಪ್ರಸ್ತುತಪಡಿಸಿದ ನೃತ್ಯವನ್ನು ನೋಡಿ ತಮಗಾದ ಅನುಭವವನ್ನು ತೆರೆದಿಟ್ಟಿದ್ದಾರೆ. ಬಾಲ್ಯದಲ್ಲಿ ತಾವೂ ಇಂತಹ ಘಟನೆಯೊಂದನ್ನು ಅನುಭವಿಸಿದ್ದಾಗಿ ತಿಳಿಸಿದ್ದಾರೆ.
ಝೀ ತಮಿಳು ಚಾನಲ್‌ನ ಡ್ಯಾನ್ಸ್ ರಿಯಾಲಿಟಿ ಶೋ ವೇಳೆ ವರಲಕ್ಷ್ಮೀ ಈ ಹೇಳಿಕೆಯನ್ನು ನೀಡಿದ್ದಾರೆ. ಸದ್ಯ ವಾಹಿನಿ ಹೊರ ಬಿಟ್ಟಿರುವ ಪ್ರೋಮೊದಲ್ಲಿ ಈ ಕುರಿತಾದ ವಿವರವಿದೆ.
ಪ್ರೋಮೊ ನೋಡಿ:
ಈ ಸುದ್ದಿಯನ್ನೂ ಓದಿ: Ajay Rao: ಕೋಟಿ ಗಟ್ಟಲೆ ಸಾಲ ಮಾಡಿಕೊಂಡ ಅಜಯ್ ರಾವ್: ಶಾಕಿಂಗ್ ವಿಚಾರ ಬಹಿರಂಗ
ವರಲಕ್ಷ್ಮೀ ಹೇಳಿದ್ದೇನು?
ತನ್ನ ಕುಟುಂಬದಿಂದ ಕಿರುಕುಳಕ್ಕೊಳಗಾದ ಕಥೆಯನ್ನು ಹಂಚಿಕೊಂಡ ಸ್ಪರ್ಧಿ ಕೆಮಿಗೆ ಬೆಂಬಲವಾಗಿ ನಿಂತ ವರಲಕ್ಷ್ಮೀ ತಮ್ಮ ಅನುಭವವನ್ನು ವಿವರಿಸಿದ್ದಾರೆ. ಕೆಮಿಯ ಕಥೆಯನ್ನು ಕೇಳಿದ ವರಲಕ್ಷ್ಮೀ ಭಾವುಕರಾಗಿ ಕಣ್ಣೀರಿಟಿದ್ದಾರೆ ಜತಗೆ ತಮಗೂ ಅಂತಹದ್ದೇ ಅನುಭವವಾಗಿದೆ ಎಂದಿರುವುದು ಪ್ರೋಮೊದಲ್ಲಿ ಕಂಡು ಬಂದಿದೆ. "ನನ್ನ ಪರಿಸ್ಥಿತಿಯೂ ನಿಮ್ಮಂತೆಯೇ ಇದೆ. ನನ್ನ ಪೋಷಕರು (ನಟ ಶರತ್ ಕುಮಾರ್ ಮತ್ತು ಛಾಯಾ) ಆಗ ಕೆಲಸ ಮಾಡುತ್ತಿದ್ದರು. ಆದ್ದರಿಂದ ಅವರು ನನ್ನನ್ನು ಇತರರ ಆರೈಕೆಯಲ್ಲಿ ಬಿಡುತ್ತಿದ್ದರು. ಹೀಗೆ ಬಾಲ್ಯದಲ್ಲಿ ಬೇರೆಯವರ ಮನೆಯಲ್ಲಿ ಇರುತ್ತಿದ್ದ ನನಗೆ 5-6 ಮಂದಿ ಕಿರುಕುಳ ನೀಡಿದ್ದಾರೆʼʼ ಎಂದು ತಿಳಿಸಿದ್ದಾರೆ.
"ನಿಮ್ಮ ಕಥೆಯೇ ನನ್ನದೂ ಕೂಡ. ನನಗೆ ಮಕ್ಕಳಿಲ್ಲ. ಆದರೆ ಮಕ್ಕಳಿಗೆ 'ಒಳ್ಳೆಯ ಸ್ಪರ್ಶ' ಮತ್ತು 'ಕೆಟ್ಟ ಸ್ಪರ್ಶ' ಕಲಿಸುವಂತೆ ನಾನು ಪೋಷಕರಿಗೆ ಮನವಿ ಮಾಡುತ್ತೇನೆʼʼ ಎಂದು ವರಲಕ್ಷ್ಮೀ ಹೇಳಿದ್ದಾರೆ. ಬಳಿಕ ಅವರು ಕೆಮಿ ಅವರನ್ನು ಬಾಚಿ ತಬ್ಬಿ ಸಾಂತ್ವನ ಹೇಳಿದ್ದಾರೆ. ಜತೆಗಿದ್ದ ನಟಿ ಸ್ನೇಹಾ ತಕ್ಷಣ ಇಬ್ಬರಿಗೂ ಧೈರ್ಯ ತುಂಬಿದ್ದಾರೆ. ಇಂತಹ ಕಥೆಯನ್ನು ಹಂಚಿಕೊಳ್ಳಲು ಸಾಕಷ್ಟು ಧೈರ್ಯ ಬೇಕು ಎಂದು ಹೇಳಿದ್ದಾರೆ. ಸದ್ಯ ವರಲಕ್ಷ್ಮೀ ಅವರ ಬೋಲ್ಡ್ ಹೇಳಿಕೆ ಸಾಕಷ್ಟು ವೈರಲ್ ಆಗುತ್ತಿದೆ. ಮನಬಿಚ್ಚಿ ಮಾತನಾಡಿದ್ದಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಅವರಿಗೆ ಸಾಂತ್ವನ ಹೇಳಿದ್ದಾರೆ.
ತಮಿಳಿನ ಹಿರಿಯ ನಟ ಶರತ್‌ಕುಮಾರ್ ಅವರ ಮಗಳಾಗಿರುವ ವರಲಕ್ಷ್ಮೀ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಚಿತ್ರರಂಗದಲ್ಲಿ ಅಭಿನಯಿಸಿದ್ದಾರೆ. 2014ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ʼಮಾಣಿಕ್ಸʼ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅವರು ಇತ್ತೀಚೆಗೆ ರಿಲೀಸ್ ಆದ ʼಮ್ಯಾಕ್ಸ್ʼ ಚಿತ್ರದಲ್ಲಿಯೂ ನಟಿಸಿದ್ದಾರೆ.
ಕಳೆದ ವರ್ಷ ನಿಕೋಲಯೈ ಸಚ್‌ದೇವ್ ಅವರನ್ನು ವರಿಸಿರುವ ವರಲಕ್ಷ್ಮೀ ಸದ್ಯ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜತೆಗೆ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸುತ್ತಿದ್ದಾರೆ.