Ajay Rao: ಕೋಟಿ ಗಟ್ಟಲೆ ಸಾಲ ಮಾಡಿಕೊಂಡ ಅಜಯ್ ರಾವ್: ಶಾಕಿಂಗ್ ವಿಚಾರ ಬಹಿರಂಗ
ಅಜಯ್ ರಾವ್ ಅವರಿಗೆ ಸಾಲು ಸಾಲು ಸಿನಿಮಾ ಆಫರ್ಗಳು ಬಂದವು, ಅದೆಲ್ಲ ಹಿಟ್ ಕೂಡ ಆಯಿತು. ಮುಖ್ಯವಾಗಿ ಕೃಷ್ಣ ಎಂಬ ಹೆಸರಿರುವ ಇವರ ಸಿನಿಮಾ ಧೂಳಬ್ಬಿಸಿತು, ಅದೊಂದು ಬ್ರ್ಯಾಂಡ್ ಆಗಿ ಇವರ ಹೆಸರಿಗೆ ಇಂದು ಸೇರಿಸಲಾಗಿದೆ. ಆದರೆ, ಇಷ್ಟೆಲ್ಲ ಸಕ್ಸರ್ ಕಂಡಿರುವ ಅಜಯ್ ರಾವ್ಗೆ ಇಂದು ಕೋಟಿ ಕೋಟಿ ಸಾಲ ಇದೆ ಎಂದರೆ ನಂಬಲೇ ಬೇಕು.

Ajay Rao

ಅಜಯ್ ರಾವ್ (Ajay Rao) ಸಿನಿ ಜೀವನ ಎಲ್ಲರಿಗೂ ಒಂದು ಸ್ಪೂರ್ತಿದಾಯಕ. ಬಳ್ಳಾರಿಯಿಂದ ಬೆಂಗಳೂರಿಗೆ ಬಂದು ಹೀರೋ ಆಗೋದು ಅದು ಕೂಡ ಸಕ್ಸಸ್‌ಫುಲ್ ಹೀರೋ ಆಗೋದು ಸುಲಭದ ಮಾತಲ್ಲ. ಒಂದು ಕಾಲದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ ಅಜಯ್ ರಾವ್, ಸುದೀಪ್ ನಟನೆಯ ಕಿಚ್ಚ ಸಿನಿಮಾ ಮೂಲಕ ಗುರುತಿಸಿಕೊಂಡರು. ಆದರೆ, ಅವರಿಗೆ ದೊಡ್ಡ ಮಟ್ಟದ ಬ್ರೇಕ್ ಕೊಟ್ಟಿದ್ದು ಎಕ್ಸ್ಕ್ಯೂಸ್ ಮಿ ಸಿನಿಮಾ. ಇದನ್ನು ಜೋಗಿ ಪ್ರೇಮ್ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಮ್ಯೂಸಿಕಲ್ ಹಿಟ್ ಆಯಿತು.
ಆ ಬಳಿಕ ಅಜಯ್ ರಾವ್ ಅವರಿಗೆ ಸಾಲು ಸಾಲು ಸಿನಿಮಾ ಆಫರ್ಗಳು ಬಂದವು, ಅದೆಲ್ಲ ಹಿಟ್ ಕೂಡ ಆಯಿತು. ಮುಖ್ಯವಾಗಿ ಕೃಷ್ಣ ಎಂಬ ಹೆಸರಿರುವ ಇವರ ಸಿನಿಮಾ ಧೂಳಬ್ಬಿಸಿತು, ಅದೊಂದು ಬ್ರ್ಯಾಂಡ್ ಆಗಿ ಇವರ ಹೆಸರಿಗೆ ಇಂದು ಸೇರಿಸಲಾಗಿದೆ. ಆದರೆ, ಇಷ್ಟೆಲ್ಲ ಸಕ್ಸರ್ ಕಂಡಿರುವ ಅಜಯ್ ರಾವ್ಗೆ ಇಂದು ಕೋಟಿ ಕೋಟಿ ಸಾಲ ಇದೆ ಎಂದರೆ ನಂಬಲೇ ಬೇಕು.
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದರೂ ಕೂಡ ಈಗಲೂ ಅವರು ಕೋಟಿಗಟ್ಟಲೆ ಸಾಲ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅಜಯ್ ರಾವ್ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಾನು ಯಾವುದೇ ಮುಜುಗರ ಇಲ್ಲದೇ ಹೇಳುತ್ತೇನೆ. ಈಗ ನನಗೆ ಕೋಟಿ ಕೋಟಿಗಟ್ಟಲೆ ಸಾಲ ಇದೆ. ಆದರೆ ನನಗೆ ಖುಷಿ ಇದೆ. ನಾನು ಕೋಟಿ ಸಾಲ ಪಡೆಯಲು ಅರ್ಹನಾಗಿದ್ದೇನೆ ಎನ್ನುವ ಖುಷಿ ಇದೆ. ಬೆಂಗಳೂರಿಗೆ ಬಂದಾಗ ನನ್ನ ಪರಿಸ್ಥಿತಿ ಹೇಗಿತ್ತು ಅಂದರೆ ನಮ್ಮ ಅಣ್ಣ ನೂರು ರೂಪಾಯಿ ಕೊಟ್ಟರೆ ಅವತ್ತಿನ ದಿನದ ಜೀವನ ನಡೆಯುತ್ತಿತ್ತು. ಒಂದು ಕಾಲದಲ್ಲಿ ನಾನು ಪ್ರತಿ ದಿನ ಮೆಜೆಸ್ಟಿಕ್‌ನಿಂದ ಬಸವೇಶ್ವರ ನಗರಕ್ಕೆ ನಡೆದುಕೊಂಡು ಹೋಗುತ್ತಿದ್ದೆ. ಯಾಕೆಂದರೆ ನನ್ನ ಜೇಬಿನಲ್ಲಿ ಹಣ ಇರುತ್ತಿರಲಿಲ್ಲ' ಎಂದು ತಮ್ಮ ಕಷ್ಟದ ದಿನವನ್ನು ನೆನೆದಿದ್ದಾರೆ.
‘ಮ್ಯಾನೇಜರ್, ಡೈರೆಕ್ಟರ್ ಸಿಕ್ಕಿದರೆ ನಾನೇ ಹೋಟೆಲ್ಗೆ ಕರೆದುಕೊಂಡು ಹೋಗಿ ಟೀ ಕೊಡಿಸಬೇಕಿತ್ತು. ಚಿಕ್ಕಪೇಟೆಲಿ ಇಡ್ಲಿ ಮಾಡುತ್ತಾರೆ. ಅಲ್ಲಿ ರಾತ್ರಿ ಹೋಗಿ 2 ಇಡ್ಲಿ ತಿನ್ನುತ್ತಿದ್ದೆ. ಅದು ನನ್ನ ರಾತ್ರಿಯ ಊಟ. ಒಂದು ವರ್ಷ ಹೀಗೆ ಮಾಡಿದ್ದೇನೆ. ಮಧ್ಯಾಹ್ನ ಹಸಿವಾದರೆ ಎಷ್ಟು ದುಡ್ಡಿದೆ ಎಂದು ಎಣಿಸುತ್ತಿದೆ. ಬೀದಿ ಬದಿಯಲ್ಲಿ ಮಾರೋ ಹುರಿಗಡ್ಲೆ ತಿಂದು ಮಧ್ಯಾಹ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ’ ಎಂದಿದ್ದಾರೆ.
‘ಈಗ ಹಣ ಮಾಡುವುದು ಹೇಗೆ ಅಂತ ಕಲಿಯುತ್ತಿದ್ದೀನಿ.. ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಮಾಡಿದ್ದೀನಿ. ಹಣವನ್ನು ಹೇಗೆ ಡಬಲ್ ಮಾಡುವುದು ತ್ರಿಪಲ್ ಮಾಡುವುದು ಅದನ್ನು ಹೇಗೆ ಬೆಳೆಸಬೇಕು ಅಂತ ಇದುವರೆಗೂ ಯೋಚನೆ ಮಾಡಿಲ್ಲ. ಹಣಕಾಸಿನ ವಿಚಾರದಲ್ಲಿ ನಾನು ತುಂಬಾ ವೀಕ್. ನನ್ನ ತಂದೆ ಹೇಳಿಕೊಟ್ಟಿರುವ ಸಿದ್ಧಾಂತವನ್ನು ಫಾಲೋ ಮಾಡಿಕೊಂಡು ಬಂದಿದ್ದೀನಿ. ಹೀಗಾಗಿ ಯಾರೊಟ್ಟಿಗೂ ಕೈ ಚಾಚುವಂತ ಪರಿಸ್ಥಿತಿ ಬಂದಿಲ್ಲ. ಮುಂದೆ ಯಾರನ್ನೂ ಕೇಳುವುದಿಲ್ಲ ಆ ರೀತಿಯಲ್ಲಿ ಬದುಕುತ್ತೀನಿ ಅನ್ನೋ ಧೈರ್ಯ ನನಗೆ ಬಂದಿದೆ’ ಎಂಬುದು ಅಜಯ್ ರಾವ್ ಮಾತು.
Aishwarya-Shishir: ಐಶ್ವರ್ಯಾ-ಶಿಶಿರ್ ಮತ್ತೊಂದು ಫೋಟೋ ಶೂಟ್: ಸದ್ಯದಲ್ಲೇ ಮದುವೆ..?