ಎಸ್.ಎಸ್. ರಾಜಮೌಳಿ (SS Rajamouli) ನಿರ್ದೇಶನದ ಮುಂಬರುವ ಚಿತ್ರ ವಾರಣಾಸಿ (Varanasi ) ತನ್ನ ಶೀರ್ಷಿಕೆಯ ಬಗ್ಗೆ ವಿವಾದವನ್ನು ಎದುರಿಸುತ್ತಿದೆ. ಹೈದರಾಬಾದ್‌ನಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ತಯಾರಕರು ಈ ಆಕ್ಷನ್ ಮಹಾಕಾವ್ಯ ಚಿತ್ರದ ಫಸ್ಟ್ ಲುಕ್ ಟೀಸರ್ (First Look Teaser) ಮತ್ತು ಶೀರ್ಷಿಕೆಯನ್ನು ಅನಾವರಣಗೊಳಿಸಿದರು. ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿಯ ದಾಖಲೆಗಳ ಪ್ರಕಾರ, 'ವಾರಣಾಸಿ' ಎಂಬ ಹೆಸರನ್ನು 2023 ರಲ್ಲಿ ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್ ನೋಂದಾಯಿಸಿದೆ. ಈಗ ಸಿನಿಮಾದ ಟೈಟಲ್ ವಿಚಾರದಲ್ಲಿ ವಿವಾದ ಭುಗಿಲೆದ್ದಿದೆ. ಈ ಟೈಟಲ್ (Title) ನಮ್ಮದು ಎಂದು ಸಿಎಚ್ ಸುಬ್ಬಾ ರೆಡ್ಡಿ ಹೇಳಿದ್ದಾರೆ.
ವಾರಣಾಸಿ ಶೀರ್ಷಿಕೆ ವಿವಾದ
ನವೆಂಬರ್ 15, 2025 ರ ಶನಿವಾರ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಗ್ಲೋಬ್‌ಟ್ರೋಟರ್ ಫಸ್ಟ್ ಲುಕ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್‌ಎಸ್ ರಾಜಮೌಳಿ ತಂಡವು 'ವಾರಣಾಸಿ' ಎಂಬ ಶೀರ್ಷಿಕೆ ಬಳಸಿದ್ದು ವಿವಾದಕ್ಕೆ ಕಾರಣವಾಯಿತು.
ಇದನ್ನೂ ಓದಿ: SS Rajamouli: ʻನನಗೆ ದೇವರಲ್ಲಿ ನಂಬಿಕೆ ಇಲ್ಲʼ; ಎಸ್.ಎಸ್. ರಾಜಮೌಳಿ ಹೇಳಿಕೆ ವಿರುದ್ಧ ಭಾರಿ ಟೀಕೆ
ದೊಡ್ಡ ಮೊತ್ತದ ಹಣ ವ್ಯರ್ಥ
ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್ ಎಂಬ ನಿರ್ಮಾಣ ಸಂಸ್ಥೆಯು ಸಿಎಚ್ ಸುಬ್ಬಾ ರೆಡ್ಡಿ ಅವರ ಒಡೆತನದಲ್ಲಿದೆ. ನಿರ್ಮಾಣ ಸಂಸ್ಥೆ ಇತ್ತೀಚೆಗೆ ಜೂನ್ 24, 2025 ರಿಂದ ಜುಲೈ 23, 2026 ರವರೆಗೆ ಶೀರ್ಷಿಕೆಯನ್ನು ನವೀಕರಿಸಿದೆ. ಆದಾಗ್ಯೂ, ಸುಬ್ಬಾ ರೆಡ್ಡಿ ಔಪಚಾರಿಕ ದೂರು ದಾಖಲಿಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ವಾರಣಾಸಿ ಉಚ್ಚಾರಣೆ ಒಂದೇ ರೀತಿಯಲ್ಲಿ ಇದೆ. ಸುಬ್ಬಾ ರೆಡ್ಡಿ ಅವರು ನೋಂದಣಿ ಮಾಡಿಸಿದ್ದು ‘Vaaranasi’ ಎಂದು. ರಾಜಮೌಳಿ ನೋಂದಣಿ ಮಾಡಿಸಿದ್ದು ‘Varanasi’ ಎಂದು. ಒಂದೊಮ್ಮೆ ರಾಜಮೌಳಿ ಅವರು ಸಿನಿಮಾದ ಟೈಟಲ್ ಬದಲಿಸಬೇಕಾದ ಪರಿಸ್ಥಿತಿ ಬಂದರೆ ಸಾಕಷ್ಟು ದೊಡ್ಡ ಮೊತ್ತದ ಹಣ ವ್ಯರ್ಥವಾಗಲಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ದೊಡ್ಡದಾದ ಈವೆಂಟ್ ಮಾಡಲಾಗಿತ್ತು. ಇದಕ್ಕೆ 27 ಕೋಟಿ ರೂಪಾಯಿ ಖರ್ಚಾಗಿದೆ ಎನ್ನಲಾಗಿದೆ.
ಹನುಮಂತನ ಬಗ್ಗೆ ಹೇಳಿಕೆ
ಶೀರ್ಷಿಕೆ ವಿವಾದದ ಜೊತೆಗೆ, ಬಿಡುಗಡೆ ಸಮಾರಂಭದಲ್ಲಿ ರಾಜಮೌಳಿ ಮಾಡಿದ ಹೇಳಿಕೆಗಳಿಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಹನುಮಂತನನ್ನು ಅವಮಾನಿಸುವ ಕಾಮೆಂಟ್‌ಗಳಿಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಏನಿದು ವಿವಾದ?
ಈಚೆಗೆ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ʻವಾರಣಾಸಿʼ ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡಲಾಗಿತ್ತು. ಅದಕ್ಕಾಗಿ ಗ್ರ್ಯಾಂಡ್ ಇವೆಂಟ್ ಮಾಡಲಾಗಿತ್ತು. ಈ ವೇಳೆ ಒಂದಷ್ಟು ಟೆಕ್ನಿಕಲ್ ಸಮಸ್ಯೆಗಳು ನಡೆದವು.
ಆ ಬಗ್ಗೆ ಮಾತನಾಡಿದ್ದ ರಾಜಮೌಳಿ, "ನನಗೆ ದೇವರ ಮೇಲೆ ದೊಡ್ಡ ನಂಬಿಕೆ ಏನೂ ಇಲ್ಲ. ಆದರೆ ನನ್ನ ತಂದೆ ಹನುಮಂತ ಇದ್ದಾನೆ, ಅವನು ಯಾವುದೇ ತೊಂದರೆ ಇಲ್ಲದೇ ಎಲ್ಲವನ್ನು ನಡೆಸಿಕೊಡುತ್ತಾನೆ ಎಂದಿದ್ದರು. ಆಗ ನನಗೆ ತಕ್ಷಣವೇ ಕೋಪ ಬಂದಿತ್ತು. ಈ ರೀತಿಯೇ ನಡೆಸಿಕೊಡುವುದು" ಎಂದು ಹೇಳಿದ್ದರು.
ಇನ್ನು, ʻವಾರಣಾಸಿʼ ಸಿನಿಮಾದ ಬಗ್ಗೆ ಹೇಳಬೇಕೆಂದರೆ, ಈ ಚಿತ್ರವು 2027ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಅವರು ನಟಿಸುತ್ತಿದ್ದಾರೆ. ಮಿಕ್ಕಂತೆ ಈ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.