ಸಿಎಂ ವಿಜಯ್ ಹುಟ್ಟುಹಬ್ಬವನ್ನು ಆಚರಿಸಲಿಲ್ವಾ ನಟಿ ತ್ರಿಷಾ ಕೃಷ್ಣನ್? AI ಫೋಟೋ ಶೇರ್ ಮಾಡಿ ಯಾಮಾರಿಸಿದ್ರಾ? ಗಾಯಕಿಯ ಹೊಸ ಆರೋಪ!
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ 52ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟಿ ತ್ರಿಶಾ ಕೃಷ್ಣನ್ ಹಂಚಿಕೊಂಡಿದ್ದ ಫೋಟೋ ಸಂಪೂರ್ಣ ನಕಲಿ ಹಾಗೂ ಎಐ (AI) ಜನರೇಟೆಡ್ ಎಂದು ವಿವಾದಾತ್ಮಕ ಗಾಯಕಿ ಸುಚಿತ್ರಾ ಆರೋಪಿಸಿದ್ದಾರೆ. ಸುಚಿತ್ರಾ ಲೇವಡಿ ಮಾಡಿರುವ ವಿಡಿಯೋ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
-
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಜೂನ್ 22ರಂದು ತಮ್ಮ 52ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ನಟಿ ತ್ರಿಶಾ ಕೃಷ್ಣನ್ ಅವರು ಮಾತ್ರ ವಿಶ್ ಮಾಡಿರಲಿಲ್ಲ. ವಿಜಯ್ ಆಪ್ತ ಗೆಳತಿ ತ್ರಿಷಾ ವಿಶ್ ಮಾಡದೇ ಇರುವುದು ಭಾರಿ ಸುದ್ದಿಯಾಗಿತ್ತು. ಆದರೆ ಮಾರನೇ ದಿನ ವಿಜಯ್ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿದ್ದ ಫೋಟೋವನ್ನು ತ್ರಿಶಾ ಹಂಚಿಕೊಂಡದಿದರು. ಈ ಫೋಟೋ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಆದರೆ, ಈ ಫೋಟೋ ಸಂಪೂರ್ಣ ನಕಲಿ, ಇದನ್ನು ತ್ರಿಶಾ ಎಐ (ಕೃತಕ ಬುದ್ಧಿಮತ್ತೆ - AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ್ದಾರೆ ಎಂದು ಗಾಯಕಿ ಸುಚಿತ್ರಾ ಆರೋಪಿಸಿದ್ದಾರೆ. ವಿಡಿಯೋವೊಂದರ ಮೂಲಕ ಸುಚಿತ್ರಾ ಅವರು ತ್ರಿಶಾ ವಿರುದ್ಧ ಈ ಗಂಭೀರ ಆರೋಪಗಳನ್ನು ಮಾಡಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
ಗಾಯಕಿ ಸುಚಿತ್ರಾ ಹೇಳಿದ್ದೇನು?
ವಿವಾದಗಳ ಮೂಲಕವೇ ಸುದ್ದಿಯಾಗಿರುವ ಗಾಯಕಿ ಸುಚಿತ್ರಾ, "Guys... ಅಕ್ಕ (ತ್ರಿಶಾ) ಹಂಚಿಕೊಂಡಿರುವುದು ಎಐ ಜನರೇಟೆಡ್ ಫೋಟೋನಾ? ನಾನೇನು ದೊಡ್ಡ ಎಐ ಎಕ್ಸ್‌ಪರ್ಟ್ ಅಲ್ಲ. ಆದರೆ ನನ್ನ ಅಕೌಂಟ್‌ನಲ್ಲಿ ಒಬ್ಬರು ಈ ಬಗ್ಗೆ ಕಮೆಂಟ್ ಮಾಡಿದ್ದರು. ಫೋಟೋದಲ್ಲಿ ವಿಜಯ್ ಅವರ ಶರ್ಟ್‌ನ ಫ್ಯಾಬ್ರಿಕ್ ಮತ್ತು ಕಾಲರ್ ನೋಡಿದರೆ ಸ್ವಾಭಾವಿಕವಾಗಿ ಅನಿಸುತ್ತಿಲ್ಲ. ಜೂಮ್ ಮಾಡಿ ನೋಡಿದರೆ ಅದು ಅರ್ಥವಾಗುತ್ತದೆ. ಅವರ ಬೇರೆ ಯಾವುದೇ ಫೋಟೋ ಬೇಕಾದರೂ ತೆಗೆದು ನೋಡಿ, ಅವರ ಹೆಗಲ ಮೇಲೆ ಶರ್ಟ್ ಹೇಗೆ ಕೂರುತ್ತದೆ ಎಂದು ಗಮನಿಸಿ. ಏಕೆಂದರೆ ಆ ಫೋಟೋದಲ್ಲಿರುವುದು ನಿಜವಾದ ಶರ್ಟ್ ಅಲ್ಲ" ಎಂದು ಹೇಳಿದ್ದಾರೆ.
ಅಸೆಂಬ್ಲಿಯ ಫೋಟೋ ಕಾಪಿ ಮಾಡಿದ್ರಾ ತ್ರಿಶಾ?
"ವಿಜಯ್ ಅವರ ಮುಖವನ್ನು ಅಸೆಂಬ್ಲಿಯ ಫೋಟೋವೊಂದರಿಂದ ತ್ರಿಶಾ ಕಾಪಿ ಮಾಡಿದ್ದಾರೆ. ಅಸೆಂಬ್ಲಿಯಲ್ಲಿ ಇರುವಂತಹ ವಿಜಯ್ ಅವರ ಸಾಕಷ್ಟು ಫೋಟೋಗಳು ಸಿಗುತ್ತವೆ. ಆ ಫೋಟೋದಲ್ಲಿರುವ ಮುಖ, ಕೂದಲೆಲ್ಲಾ ವಿಧಾನಸಭೆಯಲ್ಲಿ ಇರುವ ವಿಜಯ್ ಅವರ ಫೋಟೋಗಳಂತೆಯೇ ಇವೆ. ಎಐ ಬಳಸಿ ಫೋಟೋ ಮಾಡಿದರೆ ಇಂತಹ ಚಿತ್ರಗಳೇ ಸಿಗುತ್ತವೆ'' ಎಂದು ಸುಚಿತ್ರಾ ಹೇಳಿದ್ದಾರೆ.
ಪ್ರಶ್ನೆ ಹುಟ್ಟುಹಾಕಿದ ಸುಚಿ
"ಬರ್ತ್‌ಡೇ ಕೇಕ್ ಜೊತೆಗೆ ಮೂರು ಸ್ವೀಟ್ ಬೌಲ್ಸ್ ಇದೆ, ಅದೂ ಕೂಡ ಅಷ್ಟೊಂದು ದೊಡ್ಡದಾಗಿರುವ ಮೂರು ಸ್ವೀಟ್ ಬೌಲ್ಸ್ ಇಡಲಾಗಿದೆ. ಕೇಕ್ ಮೇಲೆ ಹೂವುಗಳನ್ನು ಇಡಲಾಗಿದೆ. ಕೇಕ್ ಮೇಲೆ ಇಷ್ಟೊಂದು ದೊಡ್ಡ ಹೂವುಗಳನ್ನು ಯಾರು ಇಡುತ್ತಾರೆ? ಶರ್ಟ್‌ನ ಫ್ಯಾಬ್ರಿಕ್ ಮತ್ತು ಟೇಬಲ್ ಪರಸ್ಪರ ಬ್ಲೆಂಡ್ ಆದಂತೆ ಕಾಣುತ್ತಿದೆ. ಇದೇನಾ ಇವರ ಪ್ರೀತಿ? ಅಯ್ಯಯ್ಯೋ ಇದನ್ನು ನೋಡಿದರೆ ಭಯವಾಗುತ್ತದೆ'' ಎಂದೂ ಸುಚಿತ್ರಾ ಲೇವಡಿ ಮಾಡಿದ್ದಾರೆ.
ವಿಜಯ್ - ತ್ರಿಶಾ ಬಗ್ಗೆ ಮಾತನಾಡಿದ ಸುಚಿ
😳 Suchi Leaks Akka இவ என்ன புதுசா சொல்லுறா? | விஜய் அண்ணா & Trisha Birthday Wishes AI-ஆ? 🤯 | இதான் விசயமா? 🫡 #ThalapathyVijay #Trisha #SuchiLeaks #CMVijay #VijayBirthday #TVK #VijayFans #TrishaFans #AI #ViralNews #TamilCinema #Kollywood #Trending #Shorts #ViralVideo pic.twitter.com/PCAx3at9dB
— Jeeva Sk Official (@jeevaskj) June 24, 2026
ಸುಚಿ ಈ ರೀತಿ ಹೇಳಿಕೆ ನೀಡಿದ ಮೇಲೆ ವಿಜಯ್ ಮತ್ತು ತ್ರಿಶಾ ಫೋಟೋ ಪುನಃ ವೈರಲ್ ಆಗುತ್ತಿದೆ. ಎಲ್ಲರೂ ಆ ಫೋಟೋವನ್ನು ಮತ್ತೆ ಮತ್ತೆ ಜೂಮ್ ಮಾಡಿ ನೋಡಲು ಆರಂಭಿಸಿದ್ದಾರೆ. ಅಂದಹಾಗೆ, ವಿಜಯ್ ಹುಟ್ಟುಹಬ್ಬದ ಮಾರನೇ ದಿನ ಫೋಟೋ ಹಂಚಿಕೊಂಡಿದ್ದ ತ್ರಿಷಾ, "ಎಲ್ಲವನ್ನೂ ಅರ್ಥಪೂರ್ಣವಾಗಿಸುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಬರೆದುಕೊಂಡಿದ್ದರು.