ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vijay Deverakonda: ವಿದೇಶದಿಂದ ಭದ್ರತಾ ಸಿಬ್ಬಂದಿಯನ್ನು ಕರೆಸಿಕೊಂಡ ರಶ್ಮಿಕಾ-ವಿಜಯ್; ಕಾರಣ ಇದು

Vijay: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26, 2026 ರಂದು ಅದ್ದೂರಿ ವಿವಾಹಕ್ಕೆ ಸಜ್ಜಾಗುತ್ತಿದ್ದಾರೆ. ಬಹಳ ದಿನಗಳಿಂದ ತಮ್ಮ ವಿವಾಹದ ವಿವರಗಳನ್ನು ಗೌಪ್ಯವಾಗಿಟ್ಟಿದ್ದ ಜೋಡಿ, ದಿನಾಂಕ, ಸಮಯ, ಸ್ಥಳ ಮತ್ತು ಸಂಬಂಧಿತ ಸಂಪರ್ಕ ಸಂಖ್ಯೆಗಳು ಸೇರಿದಂತೆ ಅವರ ವಿವಾಹ ಆಮಂತ್ರಣ ಪತ್ರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮದುವೆಯ ಬಗ್ಗೆ ದಿನಕ್ಕೊಂದು ವಿಷಯಗಳು ಲೀಕ್ ಆಗುತ್ತಲೇ ಇವೆ.

ರಶ್ಮಿಕಾ ಮಂದಣ್ಣ

ವಿಜಯ್ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಫೆಬ್ರವರಿ 26, 2026 ರಂದು ಅದ್ದೂರಿ ವಿವಾಹಕ್ಕೆ ಸಜ್ಜಾಗುತ್ತಿದ್ದಾರೆ. ಬಹಳ ದಿನಗಳಿಂದ ತಮ್ಮ ವಿವಾಹದ ವಿವರಗಳನ್ನು ಗೌಪ್ಯವಾಗಿಟ್ಟಿದ್ದ ಜೋಡಿ, ದಿನಾಂಕ, ಸಮಯ, ಸ್ಥಳ ಮತ್ತು ಸಂಬಂಧಿತ ಸಂಪರ್ಕ ಸಂಖ್ಯೆಗಳು ಸೇರಿದಂತೆ ಅವರ ವಿವಾಹ ಆಮಂತ್ರಣ ಪತ್ರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮದುವೆಯ ಬಗ್ಗೆ ದಿನಕ್ಕೊಂದು ವಿಷಯಗಳು ಲೀಕ್ ಆಗುತ್ತಲೇ ಇವೆ. ಭದ್ರತೆಯ ಬಗ್ಗೆ ಜೋಡಿಗೆ ಆತಂಕ ಎದುರಾಗಿದ್ದು, ಇದೇ ಕಾರಣಕ್ಕೆ ವಿದೇಶದಿಂದ ಭದ್ರತಾ (hires international security ) ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಮದುವೆಗೆ ಒಂದು ವಾರ ಮಾತ್ರ ಬಾಕಿ ಇರುವಾಗ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಾಕಷ್ಟು ಭದ್ರತಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿದಿನ, ಅವರ ವಿವಾಹದ ಹೊಸ ವಿವರಗಳು ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿವೆ. ಹೀಗಾಗಿತಂಡದ ಸಹಾಯವನ್ನು ಕೋರಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Actor Yash: ಇದೊಂದು ಕಾರಣಕ್ಕೆ ರಾವಣನ ಪಾತ್ರಕ್ಕೆ ಯಶ್‌ ಸೂಕ್ತ ಆಯ್ಕೆಯಂತೆ!

ವಿದೇಶದಿಂದ ವಿಶೇಷ ಏಜೆನ್ಸಿ

"ಅರಮನೆಯ ಪರಿಧಿಯನ್ನು ಭದ್ರಪಡಿಸಿಕೊಳ್ಳಲು, ವಿದೇಶದಿಂದ ವಿಶೇಷ ಏಜೆನ್ಸಿಯನ್ನು ನೇಮಿಸಲಾಗಿದೆ. ಈಗ ವಿದೇಶಿ ಭದ್ರತಾ ಸಂಸ್ಥೆಯೊಂದನ್ನು ನೇಮಿಸಿಕೊಂಡಿದೆ. ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ಈ ಮದುವೆಗೆ ಯಾವುದೇ ಅಡೆತಡೆ ಉಂಟಾಗಬಾರದು, ಅಭಿಮಾನಿಗಳಿಂದ ತೊಂದರೆ ಆಗಬಾರದು ಎಂಬುದು ಇವರ ಉದ್ದೇಶ." ಮೂಲವೊಂದು ಹಂಚಿಕೊಂಡಿದೆ.

, ರಶ್ಮಿಕಾ ಮತ್ತು ವಿಜಯ್‌ ಕುಟುಂಬಸ್ಥರು, ಸ್ನೇಹಿತರು ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮಾತ್ರ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ ಮತ್ತು ಈ ಮದುವೆ ಬಹಳ ಸರಳವಾಗಿ ನಡೆಯಲಿದೆಯಂತೆ.



ಮೊಬೈಲ್‌ ಫೋನ್‌ ಬ್ಯಾನ್‌

ಇನ್ನು, ಈ ಮದುವೆಯಲ್ಲಿ ಮೊಬೈಲ್‌ ಫೋನ್‌ ಬ್ಯಾನ್‌ ಮಾಡಲಾಗಿದೆ. ಮದುವೆಗೆ ಆಗಮಿಸುವವರು ಮೊಬೈಲ್‌ ತರುವಂತಿಲ್ಲ. ಯಾವುದೇ ಫೋಟೋ ಮತ್ತು ವಿಡಿಯೋ ವೈರಲ್‌ ಆಗಬಾರದು ಎಂದು ಕಾರಣಕ್ಕೆ ಈ ನಿಯಮ ಮಾಡಲಾಗಿದೆ. "ಅತಿಥಿಗಳ ಪಟ್ಟಿ ತುಂಬಾ ಚಿಕ್ಕದಾಗಿದೆ ಮತ್ತು ಅಲ್ಲಿ ಕಟ್ಟುನಿಟ್ಟಾದ 'ನೋ-ಫೋನ್ ಪಾಲಿಸಿ' (ಮೊಬೈಲ್ ನಿಷೇಧ) ಜಾರಿಯಲ್ಲಿರುತ್ತದೆ. ಫೋಟೋಗ್ರಫಿ ತಂಡದವರಿಂದಲೂ ಗೌಪ್ಯತಾ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ" ಎಂದು ಮೂಲವೊಂದು ತಿಳಿಸಿದೆ. ಯಾವುದೇ ಕಾರಣಕ್ಕೂ ಅವರು ರಶ್ಮಿಕಾ ಮತ್ತು ವಿಜಯ್‌ ಮದುವೆ ಫೋಟೋಗಳನ್ನು ಎಲ್ಲಿಯೂ ಶೇರ್‌ ಮಾಡುವಂತಿಲ್ಲ ಎಂದು ಈ ಒಪ್ಪಂದದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Toxic Movie Teaser: `ಟಾಕ್ಸಿಕ್‌' ಟೀಸರ್‌ ನೋಡಿ ರುಕ್ಮಿಣಿ ವಸಂತ್ ಫ್ಯಾನ್ಸ್‌ ಫುಲ್‌ ಟೆನ್ಷನ್!

ಫೆಬ್ರವರಿ 24 ರಿಂದಲೇ ಮದುವೆ ಶಾಸ್ತ್ರಗಳು ಶುರುವಾಗಲಿದ್ದು, ಫೆಬ್ರವರಿ 26 ರಂದು ಮುಹೂರ್ತ ನಡೆಯಲಿದೆ. ಇನ್ನು, ಮದುವೆಯ ಮುಖ್ಯ ಸಮಾರಂಭಕ್ಕೆ ಚಿತ್ರರಂಗದ ಸಹೋದ್ಯೋಗಿಗಳು ಅಥವಾ ಸಹನಟರಿಗೆ ಆಹ್ವಾನ ನೀಡಿಲ್ಲವಂತೆ. ಆದರೆ, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ದೂರಿ ಆರತಕ್ಷತೆ ನಡೆಯುವ ನಿರೀಕ್ಷೆಯಿದೆ.

Yashaswi Devadiga

View all posts by this author