ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು ಫೆ.26ರಂದು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ಸಂಭ್ರಮದಿಂದ ನಡೆದಿದೆ. ಈ ನಡುವೆ ಅವರಿಬ್ಬರು ಒಟ್ಟಿಗೆ ನಟಿಸುತ್ತಿರುವ ಹೊಸ ಸಿನಿಮಾ ʻರಣಬಾಲಿʼಯ ಹೊಸ ಟೀಸರ್ ಮತ್ತು ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಅದು ಕೂಡ ಮದುವೆಗೆ ಸಂಬಂಧಿಸಿದ್ದೇ ಆಗಿತ್ತು. ಆದರೆ ಪೋಸ್ಟರ್ ಬಹಳ ವಿಭಿನ್ನವಾಗಿತ್ತು. ಇದೀಗ ಆ ಬಗ್ಗೆ ಚಿತ್ರದ ರಾಹುಲ್ ಸಾಂಕೃತ್ಯಾಯನ್ ಮಾಹಿತಿ ಹಂಚಿಕೊಂಡಿದ್ದಾರೆ.
ತಾಲೀಮು ಮಾಡಿದ ನಗು ಇರಲಿಲ್ಲ
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಸಾಂಕೃತ್ಯಾಯನ್ ಅವರು, ಹಲವು ವರ್ಷಗಳ ಹಿಂದಿನ ಕೆಲವು ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಫೋಟೋಗಳ ರೆಫರೆನ್ಸ್ ಮೇಲೆಯೇ ಈ ರಣಬಾಲಿ ಮದುವೆ ಪೋಸ್ಟರ್ ಕ್ರಿಯೆಟ್ ಮಾಡಲಾಗಿದೆ. "ಮದುವೆ ಪೋಸ್ಟರ್ ಹಿಂದಿನ ಕಥೆ.. ನಿನ್ನೆ ನಾವು ‘ರಣಬಾಲಿ’ ಚಿತ್ರದ ವಿವಾಹದ ಪೋಸ್ಟರ್ ಬಿಡುಗಡೆ ಮಾಡಿದೆವು. ಆದರೆ, ಇದು ಕೇವಲ ಒಂದು ಪೋಸ್ಟರ್ ಆಗಿ ವಿನ್ಯಾಸಗೊಂಡಿದ್ದಲ್ಲ. ಅದೊಂದು ಅದ್ಭುತ ಕ್ಷಣ. ನನಗೆ ಹಳೆಯ ಕಾಲದ ಛಾಯಾಚಿತ್ರಗಳ ಬಗ್ಗೆ ಯಾವಾಗಲೂ ಅತೀವ ಕುತೂಹಲ. ನಮ್ಮ ಪೋಷಕರು, ಅಜ್ಜ-ಅಜ್ಜಿಯರು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದ ಆ ರೀತಿ... ಅಲ್ಲಿ ಯಾವುದೇ ಕೃತಕ ಪೋಸ್‌ಗಳಿರಲಿಲ್ಲ, ತಾಲೀಮು ಮಾಡಿದ ನಗು ಇರಲಿಲ್ಲ. ಅದು ಹೇಗೆ ಕಾಣಬಹುದು ಎಂಬ ಆತಂಕವೂ ಅವರಿಗಿರಲಿಲ್ಲ. ಅಲ್ಲಿ ಬರೀ ಸತ್ಯವಿತ್ತು, ಸಹಜತೆಯಿತ್ತು. ಆ ಚಿತ್ರಗಳು ಅತ್ಯಂತ ನೈಜವಾಗಿ, ಪ್ರಾಮಾಣಿಕವಾಗಿ ಮತ್ತು ಶಾಶ್ವತವಾಗಿ ಕಾಣುತ್ತವೆ"
ವಿಜಯ್ ದೇವರಕೊಂಡ ತಾಳಿ ಕಟ್ಟುವ ವೇಳೆ ಕಣ್ತುಂಬಿಕೊಂಡ ರಶ್ಮಿಕಾ ಮಂದಣ್ಣ; ಇಲ್ಲಿದೆ ವಿರೋಶ್ ವಿವಾಹದ ಫೋಟೊಗಳು
ಯಾವುದೇ ವಿಲಕ್ಷಣವಾದ ಪೋಸ್‌ಗಳಿಲ್ಲ
"ರಣಬಾಲಿಯ ಪ್ರಪಂಚವನ್ನು ಕಟ್ಟಿಕೊಡುವಾಗ, ನನಗೂ ಅಷ್ಟೇ ಪ್ರಾಮಾಣಿಕತೆ ಬೇಕಿತ್ತು. 1800ರ ದಶಕದ ಉತ್ತರಾರ್ಧವು ವೈಭವೋಪೇತವಾಗಿರಲಿಲ್ಲ. ಅದು ಕಠಿಣವಾಗಿತ್ತು, ಮಣ್ಣಿನ ಸೊಗಡಿನಿಂದ ಕೂಡಿತ್ತು ಮತ್ತು ಬದುಕುಳಿಯುವ ಹೋರಾಟದಿಂದ ಕೂಡಿತ್ತು. ಆದರೆ ಅಂತಹ ಜಗತ್ತಿನಲ್ಲೂ, ಮದುವೆ ಎಂಬ ಬಂಧಕ್ಕೆ ಒಂದು ಘನತೆ ಇತ್ತು, ಗಾಂಭೀರ್ಯವಿತ್ತು ಮತ್ತು ಶಾಶ್ವತತೆಯಿತ್ತು. ವಿಜಯ್ ಮತ್ತು ರಶ್ಮಿಕಾ ಮದುವೆಯ ಉಡುಪಿನಲ್ಲಿ ಸೆಟ್‌ಗೆ ಬಂದ ದಿನ, ಅಲ್ಲಿ ಏನೋ ಒಂದು ಬದಲಾವಣೆ ಶುರುವಾಯಿತು. ಅವರು ಕೇವಲ ನಟರಂತೆ ಕಾಣಲಿಲ್ಲ, ಬದಲಾಗಿ ಆ ಕಾಲಕ್ಕೆ ಹೋಗಿ ಬಂದವರಂತೆ ಕಂಡರು. ಅದು ನನ್ನ ಅಂತಃಪ್ರೇರಣೆಯಾಗಿತ್ತು. ನಾನು ಸರಳವಾದ ಹಿನ್ನೆಲೆಯನ್ನು ಕೇಳಿದೆ. ಯಾವುದೇ ನಾಟಕೀಯ ಬೆಳಕಿಲ್ಲ, ಯಾವುದೇ ವಿಲಕ್ಷಣವಾದ ಪೋಸ್‌ಗಳಿಲ್ಲ. ಕೇವಲ ನಿಶ್ಚಲತೆ. ನಾವು ಆ ಕ್ಷಣವನ್ನು ಸೆರೆಹಿಡಿದವು"
ಮದುವೆಯಾದ 13 ಗಂಟೆಯಲ್ಲೇ ದಾಖಲೆ ಬರೆದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಜೋಡಿ
ಹಿಂದಿನ ಜನ್ಮದ ಮದುವೆಯ ಫೋಟೋ
"ನನ್ನನ್ನು ಹೆಚ್ಚು ಆಕರ್ಷಿಸಿದ್ದು ಏನೆಂದರೆ, ಅವರಿಬ್ಬರೂ ಆ ಕ್ಷಣದಲ್ಲಿ ಲೀನವಾದ ರೀತಿ, ಸಮಯವನ್ನು ನಿಯಂತ್ರಿಸಿ ಅದನ್ನು ಸಾಕಾರಗೊಳಿಸಿದ ರೀತಿ. ಯಾವುದೋ ಮರೆತುಹೋದ ಹಳೆಯ ಪೆಟ್ಟಿಗೆಯಿಂದ ತೆಗೆದ ನೆನಪಿನಂತೆ ಅದು ಇತ್ತು. ಅದು ಅವರ ನಿಜಜೀವನದ ಮದುವೆಯೊಂದಿಗೆ ತಾಳೆಯಾದಾಗ, ಅತೀಂದ್ರಿಯ ಅನುಭವ ನೀಡುತ್ತದೆ. ಕೆಲವೊಮ್ಮೆ ಸಿನಿಮಾ ಮತ್ತು ಜೀವನ ಪರಸ್ಪರ ಸಮ್ಮತಿ ಸೂಚಿಸುತ್ತವೆ. ಆ ಕಾಲಾತೀತ ಭಾವನೆ, ಆ ಹಳೆಯ ನೆನಪುಗಳ ಮೆಲುಕು, ‘ರಣಬಾಲಿ’ಯ ಬಲವಾದ ಸ್ತಂಭಗಳಲ್ಲಿ ಒಂದಾಗಿದೆ. ಕೆಲವು ಬಂಧಗಳು ಶಾಶ್ವತ. ಇದು ಅವರ ಹಿಂದಿನ ಜನ್ಮದ ಮದುವೆಯ ಫೋಟೋ ಇರಬಹುದು ಎಂದು ನನಗೆ ಅನಿಸುತ್ತದೆ" ಎಂದು ರಾಹುಲ್ ಸಾಂಕೃತ್ಯಾಯನ್ ಬರೆದುಕೊಂಡಿದ್ದಾರೆ.
ವಿಜಯ್ ದೇವರಕೊಂಡ ಟ್ವೀಟ್
ವಿಜಯ್ ದೇವರಕೊಂಡ ಏನಂದ್ರು?
"ನನ್ನನ್ನು ಭಾವುಕನನ್ನಾಗಿ ಮಾಡಿದೆ ರಾಹುಲ್ ಸಾಂಕೃತ್ಯಾಯನ್.. ನೈಜ ವಿವರಗಳು ಮತ್ತು ಜನರ ಕಡೆಗೆ ನೀವು ತೋರಿದ ಅಪಾರ ಗಮನವು ನನ್ನನ್ನು ರೋಮಾಂಚನಗೊಳಿಸಿದೆ, ಪ್ರೇರೇಪಿಸಿದೆ. ಈ ವಿವರಗಳನ್ನು ಓದಲು ತುಂಬಾ ಆಸಕ್ತಿದಾಯಕವಾಗಿದೆ. ಇದು ನಮ್ಮ ದೇಶದ ಕಥೆ ಮತ್ತು ನಾನು ಮತ್ತು ರಶ್ಮಿಕಾ ಎಲ್ಲರೂ ಉತ್ತಮ ಸಿನಿಮಾ ಮಾಡುವ ಈ ಅದ್ಭುತ ಪ್ರಯಾಣದಲ್ಲಿ ನಿಮ್ಮೊಂದಿಗೆ ಇದ್ದೇವೆ" ಎಂದು ವಿಜಯ್ ದೇವರಕೊಂಡ ಹೇಳಿಕೊಂಡಿದ್ದಾರೆ.