Vijay Deverakonda: ಪ್ರೇಕ್ಷಕರ ಮನಗೆದ್ದ ವಿಜಯ್ ದೇವರಕೊಂಡ ನಟನೆಯ ʼಕಿಂಗ್ ಡಮ್ʼ - ಮೂರು ದಿನದ ಕಲೆಕ್ಷನ್ ಎಷ್ಟು ಗೊತ್ತಾ?
ಗೀತಾಗೋವಿಂದಂ, ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಟಾಲಿವುಡ್ ನಲ್ಲಿ ಮಿಂಚಿದ್ದ ನಟ ವಿಜಯ್ ದೇವರಕೊಂಡ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಡಿಯರ್ ಕಾಂಬ್ರೆಡ್, ಟ್ಯಾಕ್ಸಿವಾಲಾ, ದಿ ಫ್ಯಾಮಿಲಿ ಸ್ಟಾರ್ ಸಿನಿಮಾಗಳು ಫ್ಲಾಪ್ ಆದ ಬಳಿಕ ಇವರಿಗೆ ಸಿನಿಮಾ ಆಫರ್ಸ್ ಬರುವ ಸಂಖ್ಯೆ ಕೂಡ ಕಡಿಮೆಯಾಗುತ್ತಾ ಬಂದಿದೆ. ಅಂತೆಯೇ ಇವರು ಕಲ್ಕಿ ಸಿನಿಮಾದಲ್ಲಿ ಅರ್ಜುನನ ಪಾತ್ರ ಅಭಿನಯಿಸುವ ಮೂಲಕ ಕೊನೆ ಬಾರಿ ಮಿಂಚಿದ್ದರು. ಇದೀಗ ಅವರ ಅಭಿನಯದ ಕಿಂಗ್ ಡಮ್ ಸಿನಿಮಾ ರಿಲೀಸ್ ಆಗಿದ್ದು ಪ್ರೇಕ್ಷಕರ ಮನಸೆಳೆಯುತ್ತಿದೆ.


ನವದೆಹಲಿ: ಗೀತಾಗೋವಿಂದಂ, ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಮಿಂಚಿದ್ದ ನಟ ವಿಜಯ್ ದೇವರಕೊಂಡ (Vijay Deverakonda) ಅವರು ಸದಾ ಒಂದಲ್ಲ ಒಂದು ವಿಚಾರ ದಿಂದ ಸುದ್ದಿಯಲ್ಲಿರುತ್ತಾರೆ. ಡಿಯರ್ ಕಾಂಬ್ರೆಡ್, ಟ್ಯಾಕ್ಸಿವಾಲಾ, ದಿ ಫ್ಯಾಮಿಲಿಸ್ಟಾರ್ ಸಿನಿಮಾಗಳು ಫ್ಲಾಪ್ ಆದ ಬಳಿಕ ಇವರಿಗೆ ಸಿನಿಮಾ ಆಫರ್ಸ್ ಬರುವ ಸಂಖ್ಯೆ ಕೂಡ ಕಡಿಮೆಯಾಗುತ್ತಾ ಬಂದಿದೆ. ಅಂತೆಯೇ ಇವರು ಕಲ್ಕಿ ಸಿನಿಮಾದಲ್ಲಿ ಅರ್ಜುನನ ಪಾತ್ರ ಅಭಿನಯಿಸುವ ಮೂಲಕ ಕೊನೆ ಬಾರಿ ಮಿಂಚಿದ್ದರು. ಇದೀಗ ಅವರ ಅಭಿನಯದ ಕಿಂಗ್ ಡಮ್ ಸಿನಿಮಾ ರಿಲೀಸ್ ಆಗಿದ್ದು ಪ್ರೇಕ್ಷಕರ ಮನ ಸೆಳೆಯುತ್ತಿದೆ. ಸ್ಪೈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಿ ಅಭಿಮಾನಿಗಳು ಕೂಡ ನಟ ವಿಜಯ್ ಅಭಿನಯಕ್ಕೆ ಮನ ಸೋತಿದ್ದಾರೆ. ಈ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಕೂಡ ಈ ಸಿನಿಮಾ ಹೊಸ ದಾಖಲೆ ನಿರ್ಮಿಸುತ್ತಿದೆ ಎಂದರೂ ತಪ್ಪಾಗದು.
ಗೌತಮ್ ತಿನ್ನೋರಿ ನಿರ್ದೇಶನದ ಕಿಂಗ್ ಡಮ್ ಸಿನಿಮಾ( Kingdom Movie) ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆ ಯುತ್ತಿದೆ. ಜುಲೈ 31ಕ್ಕೆ ಈ ಸಿನಿಮಾ ತೆರೆ ಕಂಡಿದ್ದು ಮೊದಲ ದಿನಕ್ಕೆ 18ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಡೀ ಭಾರತದಾದ್ಯಂತ ಈ ಸಿನಿಮಾ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದ್ದು ದಿನ ದಿಂದ ದಿನಕ್ಕೆ ಉತ್ತಮ ಗಳಿಕೆ ಮಾಡುತ್ತಿದ್ದು ಹೊಸ ದಾಖಲೆ ಮಾಡುತ್ತಿದೆ.
ಕಲೆಕ್ಷನ್ ಹೇಗಿದೆ?
ಸಿನಿಮಾ ಜುಲೈ 31ಕ್ಕೆ 18ಕೋಟಿ ರೂಪಾಯಿ ಗಳಿಕೆ ಮಾಡಿ ಬಳಿಕ ಎರಡನೇ ದಿನಕ್ಕೆ 7.5ಕೋಟಿ ರೂಪಾಯಿ ಗಳಿಸಿತ್ತು. ಬಳಿಕ ಮೂರನೇ ದಿನ 6.8 ಕೋಟಿ ರೂಪಾಯಿ ಗಳಿಸಿದೆ. ಹೀಗೆ ಬರೀ ಮೂರು ದಿನಕ್ಕೆ 32.3 ಕೋಟಿ ರೂಪಾಯಿಯನ್ನು ಸಂಗ್ರಹಿಸಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಕಿಂಗ್ ಡಮ್ ಸಿನಿಮಾಕ್ಕೆ ಪ್ರೇಕ್ಷಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದು ಸಿನಿಮಾ ಯಶಸ್ಸಿನೆಡೆಗೆ ಸಾಗುತ್ತಿದೆ.
ಈ ಸುದ್ದಿಯನ್ನೂ ಓದಿ:Just Married Movie: 'ಜಸ್ಟ್ ಮ್ಯಾರೀಡ್' ಚಿತ್ರದ 'ತಪ್ಪು ಮಾಡೋದು ಸಹಜ' ಹಾಡು ರಿಲೀಸ್
ಕಿಂಗ್ ಡಮ್ ಸಿನಿಮಾದ ಟೀಸರ್ ಗೆ ತೆಲುಗಿನಲ್ಲಿ ಜೂನಿಯರ್ ಎನ್ಟಿಆರ್, ಹಿಂದಿಯಲ್ಲಿ ರಣ ಬೀರ್ ಕಪೂರ್ ಹಾಗೂ ತಮಿಳಿನಲ್ಲಿ ಸೂರ್ಯ ಅವರು ಧ್ವನಿ ನೀಡಿದ್ದರು. ಹೀಗಾಗಿ ಟೀಸರ್ ಮೂಲಕ ಜನರಿಗೆ ಕುತೂಹಲ ಮೂಡಿಸಲಾಗಿತ್ತು. ಇದೀಗ ಸಿನಿಮಾ ರಿಲೀಸ್ ಆದ ಬಳಿಕ ಬಹುತೇಕ ಥಿಯೇಟರ್ ನಲ್ಲಿ ಹೌಸ್ ಫುಲ್ ಕೂಡ ಆಗಿದೆ. ಈ ಸಿನಿಮಾ 130 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಿಸಲಾಗಿದ್ದು ನಟ ವಿಜಯ್ ದೇವರಕೊಂಡ ಅವರು 30 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಕೂಡ ಸುದ್ದಿಯಾಗಿತ್ತು.
ಸಾಲು ಸಾಲು ಫ್ಲಾಪ್ ಸಿನಿಮಾ ಕಂಡ ನಟ ವಿಜಯ್ ದೇವರಕೊಂಡ ಅವರಿಗೆ ಕಿಂಗ್ ಡಮ್ ಸಿನಿಮಾ ಹೊಸ ಭರವಸೆ ಹುಟ್ಟಿಸಿದೆ. ಈ ಸಿನಿಮಾದ ಬಳಿಕ ಟ್ಯಾಕ್ಸಿವಾಲಾ ಸಿನಿಮಾ ನಿರ್ದೇಶಕ ರಾಹುಲ್ ಸಂಕೃತ್ಯನ್ ಜೊತೆಗೆ ಹೊಸ ಸಿನಿಮಾ ಮಾಡಲಿದ್ದಾರಂತೆ. ಇದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ವಸಾಹತು ಶಾಹಿ ಆಡಳಿತ ಅವಧಿಯ ಕುರಿತಾದ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದ್ದು ಶೀಘ್ರವೇ ಈ ಸಿನಿಮಾದ ಶೂಟಿಂಗ್ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದೆ.