ಅಮೆರಿಕದ ತೈಲ ಟ್ಯಾಂಕರ್ ಮೇಲೆ ಇರಾನ್ ಸೂಸೈಡ್ ಬೋಟ್ ದಾಳಿ: ಓರ್ವ ಭಾರತೀಯ ಸಾವು
ಇಸ್ರೇಲ್, ಅಮೆರಿಕ, ಇರಾನ್ ನಡುವಿನ ಯುದ್ಧ ಮತ್ತಷ್ಟು ಹೆಚ್ಚಿದ್ದು, ಹೊರ್ಮುಜ್ ಜಲಸಂಧಿ ಸೇರಿದಂತೆ ಗಲ್ಫ್ ನಾದ್ಯಂತ ಇರುವ ಜಲಪ್ರದೇಶದಲ್ಲಿ ಹಡುಗಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿದೆ. ಅಮೆರಿಕಕ್ಕೆ ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ (ಸೂಸೈಡ್ ಬೋಟ್) ದೋಣಿ ಮೂಲಕ ದಾಳಿ ನಡೆಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಇಸ್ರೇಲ್, ಅಮೆರಿಕ, ಇರಾನ್ ನಡುವಿನ ಯುದ್ಧ ಮತ್ತಷ್ಟು ಹೆಚ್ಚಿದ್ದು, ಹೊರ್ಮುಜ್ ಜಲಸಂಧಿ ಸೇರಿದಂತೆ ಗಲ್ಫ್ ನಾದ್ಯಂತ ಇರುವ (Israel-Iran War) ಜಲಪ್ರದೇಶದಲ್ಲಿ ಹಡುಗಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿದೆ. ಅಮೆರಿಕಕ್ಕೆ ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ (ಸೂಸೈಡ್ ಬೋಟ್) ದೋಣಿ ಮೂಲಕ ದಾಳಿ ನಡೆಸಿದ್ದು, ಇದರಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇರಾಕ್ ಕರಾವಳಿಯಲ್ಲಿನ ಅಲ್ ಫಾ ಬಂದರಿನ ಸಮೀಪ US ಧ್ವಜವಿದ್ದ ಸೇಫ್ ಸಿ ವಿಷ್ಣು ಎಂಬ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಮಾರ್ಚ್ 12ಕ್ಕೆ 13 ನೇ ದಿನಕ್ಕೆ ಕಾಲಿಟ್ಟಿರುವ ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ಸಂದರ್ಭದಲ್ಲಿ ಇರಾನಿನ ದಾಳಿಯಲ್ಲಿ ಕನಿಷ್ಠ ಮೂವರು ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇಲ್ಲಿಯವರೆಗೆ ದೃಢಪಟ್ಟಿದೆ. ಮಾರ್ಚ್ 11, 2026 ರಂದು, ಮಾರ್ಷಲ್ ದ್ವೀಪಗಳ ಧ್ವಜದ ಅಡಿಯಲ್ಲಿ ಪ್ರಯಾಣಿಸುತ್ತಿದ್ದ ಅಮೆರಿಕ ಸ್ವಾಮ್ಯದ ಕಚ್ಚಾ ತೈಲ ಟ್ಯಾಂಕರ್ ಸಫೇಸಿಯಾ ವಿಷ್ಣು ಮೇಲೆ ಇರಾಕ್‌ನ ಬಸ್ರಾ ಬಳಿ ದಾಳಿ ನಡೆಸಲಾಯಿತು, ಇದರಲ್ಲಿ ಒಬ್ಬ ಭಾರತೀಯ ಸಿಬ್ಬಂದಿ ದುರದೃಷ್ಟವಶಾತ್ ಪ್ರಾಣ ಕಳೆದುಕೊಂಡರು.
Additional footage of the oil tanker on fire. https://t.co/0pj5ne1Zzg pic.twitter.com/L099FXUhNP
— Open Source Intel (@Osint613) March 11, 2026
ಉಳಿದ 15 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಾಗ್ದಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಇರಾಕಿ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ ಮತ್ತು ಭಾರತೀಯ ನಾವಿಕರನ್ನು ರಕ್ಷಿಸಿದೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ. ಮೃತ ಸಿಬ್ಬಂದಿ ಸದಸ್ಯರ ಕುಟುಂಬ ಸದಸ್ಯರಿಗೆ ರಾಯಭಾರ ಕಚೇರಿ ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತದೆ" ಎಂದು ಇರಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಮಾರ್ಚ್ 1 ಮತ್ತು 2 ರಂದು, ಇರಾನಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ಓಮನ್ ಕರಾವಳಿಯಲ್ಲಿ MV MKD ವ್ಯೋಮ್ ಮತ್ತು MV ಸ್ಕೈಲೈಟ್ ಎಂಬ ವ್ಯಾಪಾರಿ ಹಡಗುಗಳನ್ನು ಗುರಿಯಾಗಿಸಿಕೊಂಡವು. ಈ ದಾಳಿಗಳಲ್ಲಿ ಮೂವರು ಭಾರತೀಯರು ಸಾವನ್ನಪ್ಪಿದ್ದರು. ಸ್ಕೈಲೈಟ್‌ನಲ್ಲಿ ಇಬ್ಬರು ಮತ್ತು ವ್ಯೋಮ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ . ದಾಳಿಯಲ್ಲಿ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು ಒಬ್ಬ ವ್ಯಕ್ತಿಯ ಸ್ಥಿತಿ ಇನ್ನೂ ಗಂಭೀರವಾಗಿದೆ. ಮಾರ್ಚ್ 7 ರಂದು, ಸೌದಿ ಅರೇಬಿಯಾದ ಅಲ್ ಖಾರ್ಜ್‌ನಲ್ಲಿ ನಡೆದ ಉತ್ಕ್ಷೇಪಕ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು.