ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vijay Sethupathi: ಪುರಿ ಜಗನ್ನಾಥ್ -ವಿಜಯ್ ಸೇತುಪತಿ ಸಿನಿಮಾ ಟೈಟಲ್‌ ಅನೌನ್ಸ್‌!

Puri Jagannadh: ಡ್ಯಾಷಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ವಿಜಯ್ ಸೇತುಪತಿ ಕಾಂಬೋದ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ವಿಜಯ್ ಸೇತುಪತಿ ಬರ್ತಡೇ ವಿಶೇಷವಾಗಿ ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ. ಪುರಿ-ವಿಜಯ್ ಬಹು ನಿರೀಕ್ಷಿತ ಸಿನಿಮಾಗೆ ಸ್ಲಂಡಾಗ್-33 ಟೆಂಪಲ್ ರೋಡ್ ಎಂಬ ಟೈಟಲ್ ಇಡಲಾಗಿದೆ. ಟೈಟಲ್ ಜೊತೆಗೆ ಚಿತ್ರತಂಡ ವಿಜಯ್ ಸೇತುಪತಿ ಅವರ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ.

ವಿಜಯ್‌ ಸೇತುಪತಿ

ಡ್ಯಾಷಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ವಿಜಯ್ ಸೇತುಪತಿ (Vijay Sethupathi) ಕಾಂಬೋದ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ವಿಜಯ್ ಸೇತುಪತಿ ಬರ್ತಡೇ ವಿಶೇಷವಾಗಿ ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ. ಪುರಿ-ವಿಜಯ್ (Puri Jagannadh Film) ಬಹು ನಿರೀಕ್ಷಿತ ಸಿನಿಮಾಗೆ ಸ್ಲಂಡಾಗ್-33 ಟೆಂಪಲ್ ರೋಡ್ ಎಂಬ ಟೈಟಲ್ ಇಡಲಾಗಿದೆ. ಟೈಟಲ್ ಜೊತೆಗೆ ಚಿತ್ರತಂಡ ವಿಜಯ್ ಸೇತುಪತಿ ಅವರ ಫಸ್ಟ್ ಲುಕ್ (First Look) ಕೂಡ ರಿಲೀಸ್ ಮಾಡಿದೆ.

ಯಾರೆಲ್ಲ ಇದ್ದಾರೆ?

ಕೈಯಲ್ಲಿ ರಕ್ತಸಿಕ್ತ ಕತ್ತಿ ಹಿಡಿದು‌,‌ ಹರಿದ ಬಟ್ಟೆ ತೊಟ್ಟು ಹೊಸ ಅವತಾರದಲ್ಲಿ ವಿಜಯ್ ಸೇತುಪತಿ‌ ಕಾಣಿಸಿಕೊಂಡಿದ್ದಾರೆ. ಮಾಸ್ ಆಕ್ಷನ್ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಸಂಯುಕ್ತ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಕುಮಾರ್, ಟಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬ್ರಹ್ಮನಂದ್ ಹಾಗೂ ವಿಟಿವಿ ಗಣೇಶ್ ಕೂಡ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: Bigg Boss Kannada 12: ಇದು ಅನ್ನವನ್ನೇ ಕದ್ದು ತಿಂದ ಕಥೆ! ಮೊದಲ ಬಾರಿಗೆ ಮನದಾಳದ ನೋವನ್ನು ಹೊರಹಾಕಿದ ಗಿಲ್ಲಿ ನಟ

ಪುರಿ ಜಗನ್ನಾಥ್ ಅವರು ತಮ್ಮದೇ ಪುರಿ ಕನೆಕ್ಸ್ಟ್‌ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಜೆಬಿ ನಾರಾಯಣ್ ರಾವ್ ಕೊಂಡ್ರೊಲ್ಲಾ ಅವರ ಜೆಬಿ ಮೋಷನ್ ಪಿಕ್ಚರ್ಸ್ ಬ್ಯಾನರ್ ಸಹಯೋಗದಲ್ಲಿ ಚಾರ್ಮಿ ಕೌರ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಅರ್ಜುನ್ ರೆಡ್ಡಿ, ಅನಿಮಲ್ ಚಿತ್ರಗಳಿಗೆ ಸಂಗೀತ ಒದಗಿಸಿರುವ ಹರ್ಷವರ್ದನ್ ರಾಮೇಶ್ವರ್ ಈ ಚಿತ್ರಕ್ಕೂ ಮ್ಯೂಸಿಕ್ ನೀಡಿದ್ದಾರೆ.



ಪ್ಯಾನ್-ಇಂಡಿಯಾ ಸಿನಿಮಾ

ದುನಿಯಾ ವಿಜಯ್ ಅವರು ‘ವೀರ ಸಿಂಹ ರೆಡ್ಡಿ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈಗ ಅವರು ನಟಿಸುತ್ತಿರುವ ಎರಡನೇ ಟಾಲಿವುಡ್ ಸಿನಿಮಾ ಇದಾಗಿದೆ. ಈ ಪ್ಯಾನ್-ಇಂಡಿಯಾ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Bigg Boss Kannada 12 Finale: ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್‌ ಮಾಡಿದ್ರಾ? ವೋಟಿಂಗ್‌ಗೆ ಡೆಡ್‌ಲೈನ್‌ ಯಾವಾಗ ಗೊತ್ತಾ?

ಸೇತುಪತಿಯವರ ಇತ್ತೀಚಿನ ಸಿನಿಮಾ "ತಲೈವನ್ ತಲೈವಿ", ಇದು ಜುಲೈ 2025 ರಲ್ಲಿ ಬಿಡುಗಡೆಯಾಯಿತು. ಪಾಂಡಿರಾಜ್ ನಿರ್ದೇಶಿಸಿದ, ರೋಶಿನಿ ಹರಿಪ್ರಿಯನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Yashaswi Devadiga

View all posts by this author