Vijay Rashmika Wedding: ʻವಿರೋಷ್ʼ ಸಂಭ್ರಮ ನೋಡೋದೇ ಒಂದು ಸೌಭಾಗ್ಯ; ನಟಿ ಕಲ್ಯಾಣಿ ಪ್ರಿಯದರ್ಶನ್
Rashmika: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26 ರಂದು ಉದಯಪುರದಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ವಿವಾಹ ಸಮಾರಂಭದಲ್ಲಿ ಆಪ್ತರಷ್ಟೇ ಭಾಗಿಯಾಗಿದ್ದರು. ನಟಿ ಕಲ್ಯಾಣಿ ಪ್ರಿಯದರ್ಶನ್ ಕೂಡ , ಹಾಜರಿದ್ದ ಕೆಲವೇ ಕೆಲವು ನಟಿಯರಲ್ಲಿ ಒಬ್ಬರು. ಈ ಸಂಭ್ರಮ ನೋಡುವುದೇ ಒಂದು ಸೌಭಾಗ್ಯ ಎಂದು ನಟಿ ಪೋಸ್ಟ್ ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ -
ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarkonda) ಫೆಬ್ರವರಿ 26 ರಂದು ಉದಯಪುರದಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ವಿವಾಹ ಸಮಾರಂಭದಲ್ಲಿ ಆಪ್ತರಷ್ಟೇ ಭಾಗಿಯಾಗಿದ್ದರು. ನಟಿ ಕಲ್ಯಾಣಿ ಪ್ರಿಯದರ್ಶನ್ (Kalyani Priyadarshan) ಕೂಡ , ಹಾಜರಿದ್ದ ಕೆಲವೇ ಕೆಲವು ನಟಿಯರಲ್ಲಿ ಒಬ್ಬರು. ಈ ಸಂಭ್ರಮ ನೋಡುವುದೇ ಒಂದು ಸೌಭಾಗ್ಯ ಎಂದು ನಟಿ ಪೋಸ್ಟ್ ಹಂಚಿಕೊಂಡಿದ್ದಾರೆ.
ವಿರೋಶ್ ಮದುವೆ ಬಗ್ಗೆ ಕಲ್ಯಾಣಿ ಪ್ರಿಯದರ್ಶನ್ ಹೇಳಿದ್ದೇನು?
ರಶ್ಮಿಕಾ ಮಂದಣ್ಣ ಅವರ ಮದುವೆಯ ಪೋಸ್ಟ್ ಅನ್ನು ರೀ-ಶೇರ್ ಮಾಡುವ ಮೂಲಕ ಕಲ್ಯಾಣಿ ಬರೆದಿದ್ದಾರೆ, "ಇಂದು ನಾನು ತುಂಬಾ ಕೈಂಡ್ ಆಗಿರೋ ಹುಡುಗಿ ನನ್ನ ಆತ್ಮೀಯ ಸ್ನೇಹಿತನನ್ನು ಮದುವೆಯಾಗುವುದನ್ನು ನೋಡಿದೆ. ಅವಳು ಅವನ ಕಡೆಗೆ ನಡೆಯುತ್ತಿದ್ದಾಗ, ಅವನು ಅವಳಿಗಾಗಿಯೇ ಕಾಯುತ್ತಾ ಕುಳಿತಿದ್ದಾಗ, ಅವಳು ಇಟ್ಟ ಪ್ರತಿ ಹೆಜ್ಜೆಯ ರೋಮಾಂಚಕ. ಆ ನಿಧಾನ ಹೆಜ್ಜೆಗಳು, ಅವಳ ಉಸಿರು ಮತ್ತು ಅರಳಿದ ಕಣ್ಣುಗಳು ಎಲ್ಲವನ್ನೂ ಹೇಳುತ್ತಿದ್ದವು (sic)."
"ಇದೆಲ್ಲ ವೀಕ್ಷಿಸುವುದೇ ಒಂದುಸೌಭಾಗ್ಯ. ನನ್ನ ಪ್ರೀತಿಯ ರಶ್ಮಿಕಾ

ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರಿಗೆ ಅಭಿನಂದನೆಗಳು. ಜೀವನ ಅತ್ಯಂತ ಸುಂದರವಾಗಿ ಆರಂಭವಾಗಲಿ" ಎಂದು ಬರೆದುಕೊಂಡಿದ್ದಾರೆ. ನಟ ನಾನಿ ಅವರು X ನಲ್ಲಿ ವಿಜಯ್ ಅವರ ಪೋಸ್ಟ್ ಅನ್ನು ಮರು-ಶೇರ್ ಮಾಡಿದ್ದಾರೆ. ಅವರು ಬರೆದಿದ್ದಾರೆ, ಹನ್ಸಿಕಾ ಮೋಟ್ವಾನಿ ಮತ್ತು ಮೋನಾ ಸಿಂಗ್, ಸಮಂತಾ, ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ.
ಇದನ್ನೂ ಓದಿ: Rashmika Vijay Wedding: ಅದ್ಭುತ ವ್ಯಕ್ತಿ ಅತ್ತಿಗೆ; ವಿಜಯ್ ದೇವರಕೊಂಡ ಸಹೋದರನ ಸ್ಪೆಷಲ್ ಪೋಸ್ಟ್
ಫೆಬ್ರವರಿ 26ರಂದು ಉದಯಪುರದಲ್ಲಿ ಮದುವೆ ನಡೆದರೆ, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಮದುವೆ ಆರತಕ್ಷತೆ ನಡೆಯಲಿದೆ. ಉದಯಪುರದಲ್ಲಿ ನಡೆದ ಈ ಮದುವೆಗೆ ಕೆಲವೇ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಹೈದರಾಬಾದ್ ಮತ್ತು ವಿರಾಜಪೇಟೆಯಲ್ಲಿ ಆರತಕ್ಷತೆ ಆಯೋಜಿಸಲಾಗುತ್ತದೆ ಎನ್ನಲಾಗಿದೆ. ಭಾರತದ ವಿವಿಧ ಭಾಷೆಗಳ ಗಣ್ಯರನ್ನು ಆರತಕ್ಷತೆ ಆಹ್ವಾನಿಸುವ ಸಾಧ್ಯತೆ ಇದೆ.
ಹೈದರಾಬಾದ್‌ನಲ್ಲಿ ಮದುವೆ ಆರತಕ್ಷತೆ ಮಾರ್ಚ್ 4ರಂದು ನಡೆದರೆ ವಿರಾಜಪೇಟೆಯಲ್ಲಿ ಯಾವ ನಡೆಯಲಿದೆ ಎನ್ನುವುದು ತಿಳಿದು ಬಂದಿಲ್ಲ. ಇನ್ನು ಒಂದೇ ದಿನ ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ಮದುವೆ ನಡೆದಿದ್ದು ವಿಶೇಷ.
ಇದನ್ನೂ ಓದಿ: ವಿಜಯ್ ದೇವರಕೊಂಡ ತಾಳಿ ಕಟ್ಟುವ ವೇಳೆ ಕಣ್ತುಂಬಿಕೊಂಡ ರಶ್ಮಿಕಾ ಮಂದಣ್ಣ; ಇಲ್ಲಿದೆ ವಿರೋಶ್ ವಿವಾಹದ ಫೋಟೊಗಳು
ಈ ಅದ್ಧೂರಿ ಮದುವೆಗಾಗಿ ಕೆಲವು ದಿನಗಳ ಹಿಂದೆಯೇ ಎರಡೂ ಕುಟುಂಬಸ್ಥರು ಉದಯಪುರಕ್ಕೆ ಆಗಿಮಿಸಿವೆ. ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತರು ಪರಸ್ಪರ ಗೇಮ್ಗಳನ್ನು ಆಡಿದ್ದಾರೆ. ಅದ್ಧೂರಿಯಾಗಿ ನಡೆದ ಮೆಹಂದಿ, ಹಳದಿ, ಸಂಗೀತ್ ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.