ವಿನಯ್ ರಾಜ್‌ಕುಮಾರ್ ಹಾಗೂ ಮೇಘ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಬಹುನಿರೀಕ್ಷಿತ ‘ಗ್ರಾಮಾಯಣ’ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಪ್ರಕಟಗೊಂಡಿದೆ. ಗ್ರಾಮೀಣ ಸೊಗಡಿನ ಈ ಸದಭಿರುಚಿಯ ಸಿನಿಮಾ ಇದೇ ಜುಲೈ 3 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಚಿತ್ರದ ಐದನೇ ಲಿರಿಕಲ್ ಸಾಂಗ್ ‘ಏನೇ ಹೇಳು ಕುಸುಮ’ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರೆಸ್‌ಮೀಟ್ ನಡೆಸಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿತು.
‘ಏನೇ ಹೇಳು ಕುಸುಮ’ ಮೆಲೋಡಿ ಸಾಂಗ್ ರಿಲೀಸ್
ಲಹರಿ ಫಿಲಂಸ್‌ನ ನಿರ್ಮಾಪಕ ಲಹರಿ ವೇಲು ಅವರು ಈ ಸುಂದರ ಮೆಲೋಡಿ ಹಾಡನ್ನು ಅನಾವರಣಗೊಳಿಸಿದರು. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ. ಜನಪ್ರಿಯ ಗಾಯಕರಾದ ನಿಹಾಲ್ ತವ್ರೊ ಹಾಗೂ ಸಾಕ್ಷಿ ಕಲ್ಲೂರ್ ಧ್ವನಿಯಾಗಿರುವ ಈ ಹಾಡು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸುತ್ತಿದೆ.
Gramayana Movie: ವಿನಯ್, ಮೇಘಾ ಶೆಟ್ಟಿ ʻಗ್ರಾಮಾಯಣʼಮೂವಿ ಸಾಂಗ್ ಔಟ್: ಶಿವರಾಜ್‌ಕುಮಾರ್ ಸಾಥ್
"ನಮ್ಮ ಲಹರಿ ಸಂಸ್ಥೆ ಸುವರ್ಣ ವರ್ಷದ ಸಂಭ್ರಮದಲ್ಲಿದೆ. ‘ಗ್ರಾಮಾಯಣ’ ನಮ್ಮ ಬ್ಯಾನರ್‌ನ 9ನೇ ಸಿನಿಮಾ. 9 ನಮ್ಮ ಸಂಸ್ಥೆಗೆ ಅತ್ಯಂತ ಅದೃಷ್ಟದ ಸಂಖ್ಯೆ. ಚಿತ್ರದಲ್ಲಿ ಒಟ್ಟು 9 ಹಾಡುಗಳಿದ್ದು, ಈ ಹಿಂದೆ ಶಿವರಾಜ್‌ಕುಮಾರ್ ಬಿಡುಗಡೆ ಮಾಡಿದ್ದ ‘ಬೆಂಕಿ’ ಹಾಡು ಹಿಟ್ ಆಗಿತ್ತು. ಈಗ 5ನೇ ಹಾಡು ಕೂಡ ಜನರ ಮನಗೆದ್ದಿದೆ. ಜುಲೈ 3ಕ್ಕೆ ಸಿನಿಮಾ ಬರಲಿದ್ದು ಎಲ್ಲರ ಪ್ರೋತ್ಸಾಹವಿರಲಿ" ಎಂದರು.
ವಿಭಿನ್ನ ಪಾತ್ರದಲ್ಲಿ ವಿನಯ್ - ಮೇಘ ಶೆಟ್ಟಿ ಜೋಡಿ
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ದೇವನೂರು ಚಂದ್ರು, "ಇದು ಕಂಪ್ಲೀಟ್ ಕಮರ್ಷಿಯಲ್ ಎಲಿಮೆಂಟ್ಸ್ ಇರುವ ಗ್ರಾಮೀಣ ಸೊಗಡಿನ ಕಥೆ. ವಿನಯ್ ರಾಜ್‌ಕುಮಾರ್ ಅವರು ಈವರೆಗೆ ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘ ಶೆಟ್ಟಿ ಅವರದು ‘ಕುಸುಮ’ ಎಂಬ ವಿಶಿಷ್ಟ ಪಾತ್ರ" ಎಂದು ಮಾಹಿತಿ ನೀಡಿದರು.
Ramya and Vinay Rajkumar: ನಟ ವಿನಯ್ ರಾಜ್‌ಕುಮಾರ್ ಜೊತೆ ರಮ್ಯಾ ಡೇಟಿಂಗ್? ಏನಿದು ರೂಮರ್ಸ್?
ವಿನಯ್ ರಾಜ್‌ಕುಮಾರ್ ಏನಂದ್ರು?
"ಈ ಹಿಂದೆ ಕಲಾವಿದರ ಸಂಘದ ಆವರಣದಲ್ಲೇ ಅಪ್ಪ (ರಾಘವೇಂದ್ರ ರಾಜ್‌ಕುಮಾರ್), ದೊಡ್ಡಪ್ಪ (ಶಿವರಾಜ್‌ಕುಮಾರ್) ಹಾಗೂ ಚಿಕ್ಕಪ್ಪ (ಪುನೀತ್ ರಾಜ್‌ಕುಮಾರ್) ಅವರ ಸಮ್ಮುಖದಲ್ಲಿ ನಮ್ಮ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಈಗ ಅದೇ ಜಾಗದಲ್ಲಿ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿರುವುದು ಭಾವುಕ ಮತ್ತು ಸಂತೋಷದ ಸಂಗತಿ. ಇದು ನನ್ನ ಕೆರಿಯರ್‌ನ 9ನೇ ಸಿನಿಮಾ" ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು ವಿನಯ್. ನಾಯಕಿ ಮೇಘ ಶೆಟ್ಟಿ ತಮ್ಮ ಪಾತ್ರದ ಹೆಸರಿನಲ್ಲೇ ಹಾಡು ಮೂಡಿಬಂದಿರುವುದಕ್ಕೆ ಖುಷಿ ವ್ಯಕ್ತಪಡಿಸಿದರು.
ವಿಶೇಷ ಪಾತ್ರದಲ್ಲಿ ನಟ ಲೂಸ್ ಮಾದ ಯೋಗಿ
ಗ್ರಾಮಾಯಣ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಚಿತ್ರದಲ್ಲಿ ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ದಿವಂಗತ ಅಪರ್ಣ ವಸ್ತಾರೆ, ಸೀತಾ ಕೋಟೆ, ಪ್ರಶಾಂತ್ ಹೊನ್ನಾಳಿ, ಅವಿನಾಶ್ ರೈ ಮುಂತಾದ ಅನುಭವಿ ಕಲಾವಿದರ ದೊಡ್ಡ ಪಡೆಯೇ ಇದೆ. ವಿಶೇಷವಾಗಿ 'ಲೂಸ್ ಮಾದ' ಯೋಗಿ ಅವರು ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.