ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ದಂಪತಿಗಳಾಗಿದ್ದಾರೆ. ಇವರ ವಿವಾಹದ ಫೋಟೋಗಳು (Marriage Photo) ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿವೆ. ಈ ಜೋಡಿಯ ಮದುವೆ ಎರಡು ವಿಭಿನ್ನ ಸಂಪ್ರದಾಯಗಳ ಸಮ್ಮಿಲನವಾಗಿತ್ತು. ತೆಲುಗು ಮತ್ತು ನಂತರ ಕೊಡವ ವಿವಾಹ ವಿಧಿವಿಧಾನಗಳ ಪ್ರಕಾರ ಆಚರಣೆಗಳನ್ನು ನಡೆಸಲಾಯಿತು. ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಕೆ-ಡ್ರಾಮಾ (K Drama) ಥೀಮ್ ಕೂಡ ಕಾಣಿಸಿಕೊಂಡಿತು.
ರಶ್ಮಿಕಾ ಮಂದಣ್ಣ ಆಸೆ ಈಡೇರಿಸಿ ವಿಜಯ್ ದೇವರಕೊಂಡ
ರಶ್ಮಿಕಾ ಕೆ-ಡ್ರಾಮಾ, ಕೊರಿಯನ್ ಪಾಪ್ ಸಂಸ್ಕೃತಿ ಇಷ್ಟಪಡುವವರು. ವಿವಾಹ ಪೂರ್ವ ಸಮಾರಂಭದಲ್ಲಿ ಕೇಕ್ ಕೂಡ ಕೆ-ಡ್ರಾಮಾ ಥೀಮ್ ಆಗಿತ್ತು. ವಿಜಯ್ ಅವರ ಸರ್ಪ್ರೈಸ್ ಡ್ಯಾನ್ಸ್ ಕಾರ್ಯಕ್ರಮದ ಹೈಲೈಟ್ ಆಗಿತ್ತು. ರಶ್ಮಿಕಾಗಾಗಿ ಗಂಗ್ನಮ್ ಶೈಲಿಯಲ್ಲಿ ನೃತ್ಯ ಮಾಡಿದರು. ಈ ಮೂಲಕ ರಶ್ಮಿಕಾ ಮಂದಣ್ಣ ಅವರ ಆಸೆ ಈಡೇರಿಸಿದ್ದಾರೆ.
ಇದನ್ನೂ ಓದಿ: ವಿಜಯ್ ದೇವರಕೊಂಡ ತಾಳಿ ಕಟ್ಟುವ ವೇಳೆ ಕಣ್ತುಂಬಿಕೊಂಡ ರಶ್ಮಿಕಾ ಮಂದಣ್ಣ; ಇಲ್ಲಿದೆ ವಿರೋಶ್ ವಿವಾಹದ ಫೋಟೊಗಳು
ವಿವಾಹ ಸಮಾರಂಭದ ನಂತರ, ರಶ್ಮಿಕಾ ಮಂದಣ್ಣ ಅವರ ತಂಡವು ಪಾಪರಾಜಿಗಳಿಗೆ ಸಿಹಿತಿಂಡಿಗಳನ್ನು ವಿತರಿಸಿತು. ವಿವಾಹ ಸ್ಥಳದ ಹೊರಗೆ ನಿಂತಿದ್ದ ಮಕ್ಕಳಿಗೆ ಸಿಹಿತಿಂಡಿಗಳನ್ನು ಸಹ ನೀಡಲಾಗಿದೆ.
ಕಿತ್ತಳೆ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ
ರಶ್ಮಿಕಾ ಕಿತ್ತಳೆ ಬಣ್ಣದ ಸೀರೆಯಲ್ಲಿ, ಮೈತುಂಬ ಆಭರಣ ತೊಟ್ಟು ಅಪ್ಸರೆಯಂತೆ ಕಂಡರೆ, ವಿಜಯ್ ದೇವರಕೊಂಡ ಬಿಳಿ ಪಂಚೆ ಮತ್ತು ಕೆಂಪು ಶಾಲು ತೊಟ್ಟು ರಾಜನಂತೆ ಮಿಂಚಿದರು. ʼʼಬೆಸ್ಟ್ ಫ್ರೆಂಡ್ ಈಗ ನನ್ನ ಪತ್ನಿʼʼ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ. ವಿಜಯ್ ದೇವರಕೊಂಡ ತಾಳಿ ಕಟ್ಟುವ ವೇಳೆ ರಶ್ಮಿಕಾ ಭಾವುಕರಾಗಿದ್ದು, ಕಣ್ತುಂಬಿಕೊಂಡರು.
ʼʼಅವಳು ನನ್ನ ಜತೆ ಇದ್ದಿದ್ದರೆ ನನ್ನ ದಿನ ಚೆನ್ನಾಗಿರುತ್ತಿತ್ತು ಅಂತ ಅನಿಸುವಷ್ಟು ಅವಳನ್ನು ಮಿಸ್ ಮಾಡಿಕೊಂಡೆ. ಅವಳು ನನ್ನ ಎದುರು ಕುಳಿತಿದ್ದರೆ ನಾನು ಸೇವಿಸುವ ಆಹಾರ ಇನ್ನಷ್ಟು ಆರೋಗ್ಯಕರವಾಗಿರುತ್ತಿದ್ದವುʼʼ ಎಂದು ವಿಜಯ್ ಬರೆದುಕೊಂಡಿದ್ದಾರೆ.
ಫೆಬ್ರವರಿ 26ರಂದು ಉದಯಪುರದಲ್ಲಿ ಮದುವೆ ನಡೆದರೆ, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಮದುವೆ ಆರತಕ್ಷತೆ ನಡೆಯಲಿದೆ. ಉದಯಪುರದಲ್ಲಿ ನಡೆದ ಈ ಮದುವೆಗೆ ಕೆಲವೇ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಹೈದರಾಬಾದ್ ಮತ್ತು ವಿರಾಜಪೇಟೆಯಲ್ಲಿ ಆರತಕ್ಷತೆ ಆಯೋಜಿಸಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: Vijay Rashmika Wedding: ʻವಿರೋಷ್ʼ ಸಂಭ್ರಮ ನೋಡೋದೇ ಒಂದು ಸೌಭಾಗ್ಯ; ನಟಿ ಕಲ್ಯಾಣಿ ಪ್ರಿಯದರ್ಶನ್
ಭಾರತದ ವಿವಿಧ ಭಾಷೆಗಳ ಗಣ್ಯರನ್ನು ಆರತಕ್ಷತೆ ಆಹ್ವಾನಿಸುವ ಸಾಧ್ಯತೆ ಇದೆ. ಹೈದರಾಬಾದ್‌ನಲ್ಲಿ ಮದುವೆ ಆರತಕ್ಷತೆ ಮಾರ್ಚ್ 4ರಂದು ನಡೆದರೆ ವಿರಾಜಪೇಟೆಯಲ್ಲಿ ಯಾವ ನಡೆಯಲಿದೆ ಎನ್ನುವುದು ತಿಳಿದು ಬಂದಿಲ್ಲ. ಇನ್ನು ಒಂದೇ ದಿನ ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ಮದುವೆ ನಡೆದಿದ್ದು ವಿಶೇಷ.