ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishnuvardhan: ಸಾಲು ಸಾಲು ಸವಾಲುಗಳನ್ನು ಎದುರಿಸಿದ ವಿಷ್ಣುದಾದನ ಸಿನಿ ಪಯಣ ಹೇಗಿತ್ತು ಗೊತ್ತಾ?

1950ರ ಸೆಪ್ಟೆಂಬರ್ 18ರಂದು ಮೈಸೂರಿನಲ್ಲಿ ಜನಿಸಿದ ಡಾ. ವಿಷ್ಣುವರ್ಧನ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. 1972ರಲ್ಲಿ ‘ವಂಶವೃಕ್ಷ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಪುಟ್ಟಣ್ಣ ಕಣಗಾಲ್‌ ಅವರ ‘ನಾಗರಹಾವು’ ಚಿತ್ರದಿಂದ ಖ್ಯಾತರಾದರು. ‘ಭೂತಯ್ಯನ ಮಗ ಅಯ್ಯು’, ‘ಸಾಹಸ ಸಿಂಹ’, ‘ಬಂಧನ’, ‘ಯಜಮಾನ’, ‘ಆಪ್ತಮಿತ್ರ’ ಸೇರಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಚಂದನವನದ ಸಾಹಸ ಸಿಂಹನಿಗೆ ಒಲಿದ ರಾಜ್ಯ ರತ್ನ ಪ್ರಶಸ್ತಿ

ವಿಷ್ಣುವರ್ಧನ್ -

Profile Sushmitha Jain Sep 11, 2025 10:29 PM

ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ, ಸಾಹಸ ಸಿಂಹ ಡಾ. ವಿಷ್ಣುವರ್ಧನ್‌ ಅವರಿಗೆ (Dr. Vishnuvardhan) ಮರಣೋತ್ತರವಾಗಿ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸರ್ಕಾರ ಘೋಷಿಸಿದೆ. ವಿಷ್ಣುವರ್ಧನ್‌ ಅವರ ಅಭಿಮಾನಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ, ಇತ್ತೀಚಿಗೆ ಅಭಿಮಾನ್ ಸ್ಟುಡಿಯೋದಲ್ಲಿ ಸಮಾಧಿ ನೆಲಸಮವಾದ ದುಃಖದ ನಡುವೆ ಈ ಗೌರವವನ್ನು ನೀಡಿದೆ.

ಡಾ. ವಿಷ್ಣುವರ್ಧನ್‌ ಚಿತ್ರರಂಗ ಪಯಣ

1950ರ ಸೆಪ್ಟೆಂಬರ್ 18ರಂದು ಮೈಸೂರಿನಲ್ಲಿ ಜನಿಸಿದ ಡಾ. ವಿಷ್ಣುವರ್ಧನ್, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. 1972ರಲ್ಲಿ ‘ವಂಶವೃಕ್ಷ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಪುಟ್ಟಣ್ಣ ಕಣಗಾಲ್‌ ಅವರ ‘ನಾಗರಹಾವು’ ಚಿತ್ರದಿಂದ ಖ್ಯಾತರಾದರು. ‘ಭೂತಯ್ಯನ ಮಗ ಅಯ್ಯು’, ‘ಸಾಹಸ ಸಿಂಹ’, ‘ಬಂಧನ’, ‘ಯಜಮಾನ’, ‘ಆಪ್ತಮಿತ್ರ’ ಸೇರಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ವಿಷ್ಣುವರ್ಧನ್, ರಾಜ್ಯ ಪ್ರಶಸ್ತಿ, ಡಾ. ರಾಜ್‌ಕುಮಾರ್ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2009ರ ಡಿಸೆಂಬರ್ 30ರಂದು ಅವರು ಇಹಲೋಕ ತ್ಯಜಿಸಿದರು.

‘ನಾಗರಹಾವು’ ಚಿತ್ರದ ಐತಿಹಾಸಿಕ ಯಶಸ್ಸು

1972ರ ‘ನಾಗರಹಾವು’ ಚಿತ್ರವು ವಿಷ್ಣುವರ್ಧನ್‌ ಅವರಿಗೆ ಭರ್ಜರಿ ಖ್ಯಾತಿಯನ್ನು ತಂದಿತು. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಈ ಚಿತ್ರದಲ್ಲಿ ರಾಮಾಚಾರಿ ಪಾತ್ರವು ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. ಆರತಿ, ಲೀಲಾವತಿ ಮತ್ತು ಕೆ.ಎಸ್.ಅಶ್ವತ್ಥ್‌ ಅವರಂತಹ ದಿಗ್ಗಜರ ಜತೆಗೆ ಅಂಬರೀಷ್‌ ಕೂಡ ಈ ಚಿತ್ರದಿಂದಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ವಿಷ್ಣುವರ್ಧನ್‌ರಿಗೆ ರಾಜ್ಯ ಪ್ರಶಸ್ತಿ ಲಭಿಸಿತು.

‘ಬಂಧನ’ ಮತ್ತು ‘ಮುತ್ತಿನ ಹಾರ’

1984ರ ‘ಬಂಧನ’ ಚಿತ್ರವು ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಸ್ಯಾಡ್ ಲವ್‌ಸ್ಟೋರಿಯಾಗಿ ದಾಖಲೆಯ ಹಿಟ್ ಆಯಿತು. ಉಷಾ ನವರತ್ನರಾಮ್‌ ಅವರ ಕಾದಂಬರಿಯನ್ನು ಆಧರಿಸಿದ ಈ ಚಿತ್ರದಲ್ಲಿ ವಿಷ್ಣುವರ್ಧನ್‌ ಅವರ ಡಾ. ಹರೀಶ್ ಪಾತ್ರಕ್ಕೆ ಫಿಲ್ಮ್‌ಫೇರ್ ಪ್ರಶಸ್ತಿ ಒಲಿಯಿತು. 1990ರ ‘ಮುತ್ತಿನ ಹಾರ’ ಚಿತ್ರದಲ್ಲಿ ಕೊಡಗಿನ ಯೋಧ ಮೇಜರ್ ಅಚ್ಚಪ್ಪನಾಗಿ ವಿಷ್ಣು ಮಿಂಚಿದರು. ಕಾಶ್ಮೀರದಲ್ಲಿ ಚಿತ್ರೀಕರಣಗೊಂಡ ಈ ಚಿತ್ರದಲ್ಲಿನ ಹಂಸಲೇಖ ಅವರ ಸಂಗೀತವು ಮೆಚ್ಚುಗೆ ಗಳಿಸಿತು.

‘ಆಪ್ತಮಿತ್ರ’ನ ದಾಖಲೆ

2004ರ ‘ಆಪ್ತಮಿತ್ರ’ ಚಿತ್ರವು ವಿಷ್ಣುವರ್ಧನ್‌ ಅವರ ವೃತ್ತಿಜೀವನದ ದೊಡ್ಡ ಯಶಸ್ಸಾಗಿತ್ತು. ಪಿ. ವಾಸು ನಿರ್ದೇಶನದ ಈ ಹಾರರ್ ಥ್ರಿಲ್ಲರ್ ಚಿತ್ರವು ರಾಜ್ಯಾದ್ಯಂತ ಒಂದು ವರ್ಷ ಪ್ರದರ್ಶನ ಕಂಡಿತು. ಮಲಯಾಳಂನ ‘ಮಣಿಚಿತ್ರತ್ತಾಳ್’ ರಿಮೇಕ್ ಆಗಿದ್ದರೂ, ಕನ್ನಡದ ಸ್ಥಳೀಯತೆಗೆ ತಕ್ಕಂತೆ ರೂಪಿತವಾಯಿತು. ಸೌಂದರ್ಯಾ, ರಮೇಶ್ ಅರವಿಂದ್‌ ಅವರೊಂದಿಗೆ ವಿಷ್ಣುವರ್ಧನ್‌ ನಟನೆಗೆ ಫಿಲ್ಮ್‌ಫೇರ್ ಪ್ರಶಸ್ತಿ ಒಲಿಯಿತು.

ಜೀವನದುದ್ದಕ್ಕೂ ಸಾಲು ಸಾಲು ಸವಾಲುಗಳನ್ನು ಎದುರಿಸಿದ ವಿಷ್ಣುವರ್ಧನ್, ತಮ್ಮ ಅಭಿನಯದಿಂದ ಕನ್ನಡಿಗರ ಹೃದಯದಲ್ಲಿ ಸ್ಥಾನ ಗಳಿಸಿದರು. ಕರ್ನಾಟಕ ರತ್ನ ಪ್ರಶಸ್ತಿಯ ಘೋಷಣೆಯು ಅವರ ಅಭಿಮಾನಿಗಳಿಗೆ ಸಂತಸ ತಂದಿದ್ದು, ಈ ಗೌರವವು ಅವರ ಕೊಡುಗೆಗೆ ನೀಡಿದ ಸೂಕ್ತ ಮನ್ನಣೆ ಎನಿಸಿಕೊಂಡಿದೆ. ರಮೇಶ್‌ ಅವರವಿಂದ್‌ ಸೇರಿದಂತೆ ಹಲವರು ವಿಷ್ಣು ದಾದಾಗೆ ಒಲಿದ ಪ್ರಶಸ್ತಿಗೆ ಸಂತಸ ವ್ಯಕ್ತಪಡಿಸಿದ್ದಾರೆ.