Sanjay Dutt: ಯಾರೇ ನೀ ಅಭಿಮಾನಿ!? ಸಂಜಯ್ ದತ್ ಹೆಸರಿಗೆ 72 ಕೋಟಿ ರೂ. ಆಸ್ತಿ ಬರೆದಿಟ್ಟ ಫ್ಯಾನ್
ನಿಷಾ ಪಾಟೀಲ್ ಎಂಬುವವರು ಮೃತಪಡುವುದಕ್ಕೂ ಮುನ್ನವೇ ತನ್ನ ಹೆಸರಿನ ಆಸ್ತಿಯನ್ನು ಸಿನಿಮಾ ಸ್ಟಾರ್ ಸಂಜಯ್ ದತ್ ಅವರ ಹೆಸರಿಗೆ ಬರೆದಿಟ್ಟಿದ್ದು, ತನ್ನ ಸುಮಾರು 72 ಕೋಟಿ ರೂಪಾಯಿ ಆಸ್ತಿಯನ್ನು ನಟನಿಗೆ ವರ್ಗಾಯಿಸುವಂತೆ ಅವರು ಬ್ಯಾಂಕುಗಳಿಗೆ ಸೂಚಿಸಿದ್ದಾರೆ. ಈ ಕುರಿತು ಎಲ್ಲಾ ದಾಖಲೆ ಪತ್ರಗಳನ್ನು ಪೊಲೀಸರು ಪರಿಶೀಲನೆ ಮಾಡಿ ಸಂಜಯ್ ದತ್‌ಗೆ ಕರೆ ಮಾಡಿ ಮಾಹಿತಿ ಕೂಡ ನೀಡಿದ್ದರು.

Sanjay Dutt

ನವದೆಹಲಿ: ಬಾಲಿವುಡ್ ಜನಪ್ರಿಯ ನಟ ಸಂಜಯ್ ದತ್ (Sanjay Dutt's) ಇಂದಿಗೂ ಸಿನಿಪ್ರಿಯರ ಮೋಸ್ಟ್ ಫೇವರೆಟ್ ನಟ. ವಿವಾದಗಳೆಷ್ಟೇ ಎದುರಿಸಿದ್ದರೂ ಅಪಾರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವ ನಟ ಸಂಜಯ್ ದತ್ ಕ್ರೇಜ್ ಇಂದಿಗೂ ಅಷ್ಟೇ ಇದೇ. ಸುಮಾರು 135ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ನ ಖ್ಯಾತ ನಟನ ಕ್ರೇಜ್ ಎಷ್ಟಿದೆ ಎನ್ನುವುದಕ್ಕೆ ಬಹುಶ: ಈ ಘಟನೆಯೇ ಸಾಕ್ಷಿ. ಸಂಜಯ್ ಅಭಿಮಾನಿಯೊಬ್ಬರು ತಮ್ಮ ಆಸ್ತಿಯನ್ನೇ ಅವರ ಹೆಸರಿಗೆ ಬರೆದು ಸಾಯುವಷ್ಟು ಅಭಿಮಾನವನ್ನು ಮೆರೆದಿದ್ದಾರೆ. ನಿಶಾ ಪಾಟೀಲ್ ಎನ್ನುವ ಮಹಿಳಾ ಅಭಿಮಾನಿ ತನ್ನ ಒಟ್ಟು 72 ಕೋಟಿ ರೂಪಾಯಿ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರೆದಿಟ್ಟು ಕೊನೆಯುಸಿರೆಳೆದಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ನಿಷಾ ಪಾಟೀಲ್ ಎಂಬುವವರು ಮೃತಪಡುವುದಕ್ಕೂ ಮುನ್ನವೇ ತನ್ನ ಹೆಸರಿನ ಆಸ್ತಿಯನ್ನು ಫಿಲಂ ಸ್ಟಾರ್ ಸಂಜಯ್ ದತ್ ಎಂದು ಬರೆದಿದ್ದು ತನ್ನ ಸುಮಾರು 72 ಕೋಟಿ ರೂಪಾಯಿ ಆಸ್ತಿಯನ್ನು ನಟನಿಗೆ ವರ್ಗಾಯಿಸುವಂತೆ ಅವರು ಬ್ಯಾಂಕುಗಳಿಗೆ ಸೂಚಿಸಿದ್ದಾರೆ.ಈ ಕುರಿತು ಎಲ್ಲಾ ದಾಖಲೆ ಪತ್ರಗಳನ್ನು ಪೊಲೀಸರು ಪರಿಶೀಲನೆ ಮಾಡಿ ಸಂಜಯ್ ದತ್‌ಗೆ ಕರೆ ಮಾಡಿ ಮಾಹಿತಿ ಕೂಡ ನೀಡಿದ್ದರು.
ಘಟನೆ ಬಹಿರಂಗವಾದದ್ದು ಹೇಗೆ?
2018 ರಲ್ಲಿ, ನಿಶಾ ಪಾಟೀಲ್ ಎಂಬ ಅಭಿಮಾನಿಯ ಕುರಿತಾಗಿ ಸಂಜಯ್ ದತ್ ಅವರಿಗೆ ಪೊಲೀಸರಿಂದ ಒಂದು ಕಾಲ್ ಬಂದಿತ್ತು. ನಿಶಾ ಎಂಬ ಅಭಿಮಾನಿ ಯೊಬ್ಬರು ಆಕೆಯ ನಿಧನದ ನಂತರ, ಒಟ್ಟು 72 ಕೋಟಿ ರೂಪಾಯಿ ಮೌಲ್ಯದ ಸಂಪೂರ್ಣ ಆಸ್ತಿಯನ್ನು ತಮ್ಮ ಹೆಸರಿಗೆ ವಿಲ್ ಮಾಡಿದ್ದಾರೆ ಎನ್ನುವ ವಿಚಾರವನ್ನು ಪೊಲೀಸರು ತಿಳಿಸುತ್ತಾರೆ. ಈ ವಿಚಾರ ಕೇಳಿಯೇ ನಟ ಸಂಜಯ್ ದತ್ ಶಾಕ್ ಆಗಿದ್ದಾರೆ. ಪ್ರಾಣಕ್ಕಿಂತ ಹೆಚ್ಚಾಗಿ ಸಂಜಯ್ ದತ್ ಪ್ರೀತಿಸಿ ಕೊನೆಯ ದಿನಗಳಲ್ಲಿ ತನ್ನ 72 ಕೋಟಿ ರೂಪಾಯಿ ಆಸ್ತಿಯನ್ನು ತನ್ನ ಹೆಸರಿಗೆ ಬರೆದ ಅಭಿಮಾನಿ ನಡೆಗೆ ಸಂಜಯ್ ದತ್ ಭಾವುಕರಾಗಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ನಟ ಸಂಜಯ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ನಿಶಾ ಪಾಟೀಲ್ ತಮ್ಮ ಅಭಿಮಾನಿ ಎಂದು ತಿಳಿದು ಬಹಳಷ್ಟು ಖುಷಿ ನೀಡಿದ್ದು ಅವರನ್ನು ಭೇಟಿ ಮಾಡಿಲ್ಲ ಎನ್ನುವ ಬೇಸರ ಇದೆ. ಆದರೆ ನಿಶಾ ಪಾಟೀಲ್ ಜೊತೆಗೆ ತನಗೆ ಯಾವುದೇ ಸಂಬಂಧ ಇಲ್ಲ. ಭೇಟಿಯಾಗಿಲ್ಲ. ನನಗೆ ಪರಿಚಯ ಇಲ್ಲ. ಹೀಗಾಗಿ ಅವರ ಆಸ್ತಿಯನ್ನು ತಾನು ಸ್ವೀಕರಿಸುವುದಿಲ್ಲ ಎಂದು ವಕೀಲರ ಮೂಲಕ ನೊಟೀಸ್ ನೀಡಿದ್ದಾರೆ. ಈ ಘಟನೆ ಸಂಜಯ್ ದತ್‌ರನ್ನು ತೀವ್ರ ಆಘಾತ ಗೊಳ್ಳುವಂತೆ ಮಾಡಿದ್ದು ಈ ಘಟನೆಯನ್ನು ಯಾರೊಂದಿಗೂ ಚರ್ಚಿಸದೆ ಗೌಪ್ಯವಾಗಿಟ್ಟಿದ್ದರು. ಆದರೆ ಇದೀಗ ಈ ಮಾಹಿತಿ ಹೊರಬಿದ್ದಿದೆ.