ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kichcha Sudeep: ವಿಜಯಲಕ್ಷ್ಮಿ ದರ್ಶನ್‌ ಬಗ್ಗೆ ಕೇಳಿದ ಪ್ರಶ್ನೆ; ಲೈಫಲ್ಲಿ ನನ್ನ ಬಗ್ಗೆ ಮಾತಾಡಿ, ಪಕ್ಕದ್ಮನೆ ಬಗ್ಗೆ ಅಲ್ಲ ಎಂದ ಕಿಚ್ಚ

Sudeep: ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ಗುರುವಾರ (ಡಿ.31) ದಿಢೀರ್‌ ಎಂದು ನಗರ ಪೊಲೀಸ್ ಆಯುಕ್ತರ ಕಛೇರಿ ಆಗಮಿಸಿದ್ದರು. ತಮ್ಮ ವಕೀಲರ ಜೊತೆಗೆ ಆಗಮಿಸಿದ್ದ ಅವರು, ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್‌ ಮಾಡಿದವರ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದರು.

ವಿಜಯಲಕ್ಷ್ಮಿ ಬಗ್ಗೆ ಕೇಳಿದ ಪ್ರಶ್ನೆಗೆ ಸುದೀಪ್ ರಿಯಾಕ್ಷನ್ ಹೇಗಿತ್ತು?

ಕಿಚ್ಚ ಸುದೀಪ್‌ -

Yashaswi Devadiga
Yashaswi Devadiga Dec 31, 2025 8:54 PM

ನಟ ದರ್ಶನ್‌ (Actor Darshan) ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರು ಗುರುವಾರ (ಡಿ.31) ದಿಢೀರ್‌ ಎಂದು ನಗರ ಪೊಲೀಸ್ ಆಯುಕ್ತರ ಕಛೇರಿ ಆಗಮಿಸಿದ್ದರು. ತಮ್ಮ ವಕೀಲರ ಜೊತೆಗೆ ಆಗಮಿಸಿದ್ದ ಅವರು, ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್‌ ಮಾಡಿದವರ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದರು. ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ ಬಳಿಕ ಪೈರಸಿ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಸುದೀಪ್ (Sudeep) ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.ವಿಜಯಲಕ್ಷ್ಮಿ ದೂರು ಎಂದು ಪ್ರಶ್ನೆ ಕೇಳುತ್ತಿದ್ದಂತೆ ಸುದೀಪ್ ಮಾತನಾಡಲು ನಿರಾಕರಿಸಿದ್ದಾರೆ.

ಸುದೀಪ್‌ ಉತ್ತರ ಇದು

"ನನ್ನ ಲೈಫಲ್ಲಿ ನನ್ನ ಬಗ್ಗೆ ಮಾತಾಡಿ, ಪಕ್ಕದ್ಮನೆ ಬಗ್ಗೆ ಅಲ್ಲ" ಎಂದು ಸುದೀಪ್ ಹೇಳಿ ಸುಮ್ಮನಾಗಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಪಕ್ಕಾ ಪ್ಲೇಯರ್; ಶೋಗೆ ನ್ಯಾಯ ಒದಗಿಸುತ್ತ ಇರೋದು ಇವರೇ ಎಂದ ಸೂರಜ್‌!

ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

ಕಮೀಷನರ್‌ ಕಚೇರಿಯಿಂದ ಹೊರನಡೆದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ವಿಜಯಲಕ್ಷ್ಮೀ, "ನಮ್ಮ ದೇಶದ ಕಾನೂನು ಮತ್ತು ವ್ಯವಸ್ಥೆ ಎಲ್ಲರಿಗೂ ಒಂದೇ ಎಂದು ನಾನು ಯಾವಾಗಲೂ ನಂಬಿದ್ದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈಗಿನ ಅನುಭವವು ಆ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ. ಆಶ್ಚರ್ಯವೆಂದರೆ, ನಾನು ನೀಡಿದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆದರೆ ಮತ್ತೊಬ್ಬ ಮಹಿಳೆ ನೀಡಿದ ದೂರಿಗೆ ಕೇವಲ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗಿದೆ. ನನ್ನ ದೂರು ಅಷ್ಟು ಮುಖ್ಯವಾದುದಲ್ಲವೇ ಅಥವಾ ಅದಕ್ಕೆ ಮಾನ್ಯತೆ ಇಲ್ಲವೇ ಎಂದು ನನಗೆ ನಿಜವಾಗಿಯೂ ಆಶ್ಚರ್ಯವಾಗುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದ್ದರು.

"ನನ್ನ ವಕೀಲರು ನಿರಂತರವಾಗಿ ಈ ಬಗ್ಗೆ ಫಾಲೋಅಪ್‌ ಮಾಡುತ್ತಲೇ ಇದ್ರೂ ಸಹ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ದೂರನ್ನು ಕನಿಷ್ಠ ಪಕ್ಷ ಗಮನಿಸಿ ಎಂದು ನೆನಪಿಸಲು ಇಂದು ನಾನೇ ಖುದ್ದಾಗಿ ಅಲ್ಲಿಗೆ ಹೋಗಬೇಕಾಯಿತು. ಈ ವಿಳಂಬದ ಹಿಂದೆ ಯಾವುದೇ ಬಾಹ್ಯ ಒತ್ತಡ ಅಥವಾ ಪ್ರಭಾವ ಇಲ್ಲ ಎಂದು ನಾನು ನಂಬಿದ್ದೇನೆ. ನ್ಯಾಯವು ಅದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರಬಾರದು" ಎಂದು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ ವಿಜಯಲಕ್ಷ್ಮಿ.

ನ್ಯಾಯಕ್ಕಾಗಿ ಕಾಯುತ್ತಿದ್ದೇನೆ

"ಇಂತಹ ನಡವಳಿಕೆಯನ್ನು ಬೆಂಬಲಿಸುವವರಿಗೆ ಅಥವಾ ರಕ್ಷಿಸುವವರಿಗೆ ನಾನು ಹೇಳುವುದಿಷ್ಟೇ, ಕುರುಡಾಗಿ ಇಂತಹ ಕೃತ್ಯಗಳನ್ನು ಬೆಂಬಲಿಸುವ ಬದಲು, ಆ ಶಕ್ತಿಯನ್ನು ನಿಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಬಳಸಿ. ನಾನು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದ್ದೇನೆ ಮತ್ತು ಇದನ್ನು ನಾನು ಇಲ್ಲಿಗೇ ಸುಮ್ಮನೆ ಬಿಡುವುದಿಲ್ಲ" ಎಂದು ವಿಜಯಲಕ್ಷ್ಮೀ ಅವರು ಖಡಕ್‌ ಆಗಿ ಹೇಳಿದ್ದಾರೆ. ಈ ಪೋಸ್ಟ್‌ನೊಂದಿಗೆ ಬೆಂಗಳೂರು ಸಿಟಿ ಪೊಲೀಸ್‌, ಗೃಹ ಸಚಿವ ಜಿ. ಪರಮೇಶ್ವರ್‌ ಹಾಗೂ ಕರ್ನಾಟಕ ಸರ್ಕಾರವನ್ನು ಟ್ಯಾಗ್‌ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಸ್ಪಂದನಾ ನೀವು ಅಷ್ಟೊಂದು ವೀಕ್‌ ಇದ್ದೀರಾ? ಅಶ್ವಿನಿ ಟಾಂಗ್‌; ಸ್ಪಂದನಾ- ರಾಶಿಕಾ ಒಬ್ಬರನ್ನೊಬ್ಬರು ಲಾಕ್!

ಇನ್ನೊಂದು ಕಡೆ ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಸುದೀಪ್ ನಟಿಸಿದ 'ಮಾರ್ಕ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡ್ತಿದೆ. ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕಿಚ್ಚ 'ಮಾರ್ಕ್' ಸಿನಿಮಾ ನೋಡಿ ಖುಷಿಪಟ್ಟರು.