ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಹುಚ್ಚು ಅನ್ನೋಕೆ ನೀವ್ಯಾರು? ಕಿರಣ್ ಶಾಸ್ತ್ರಿಯನ್ನ ತರಾಟೆಗೆ ತೆಗೆದುಕೊಂಡ ವೈಷ್ಣವಿ

Bigg Boss Kannada 13:ಬಿಗ್‌ ಬಾಸ್‌ ಮನೆ (Bigg Boss Kannada 13) ಒಂದೇ ದಿನಕ್ಕೆ ರಣರಂಗವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಜಗಳ ಮಾಡಿದರೆ ಹೆಚ್ಚು ಅಟೆನ್ಷನ್ ಸಿಗುತ್ತದೆ ಎಂಬ ಭಾವನೆ ಕೆಲವು ಸ್ಪರ್ಧಿಗಳಿಗೆ ಇದ್ದಂತಿದೆ. ಮಂಜ, ಕಿರಣ್ ಶಾಸ್ತ್ರಿ (Kiran shastri) ಮುಂತಾದವರು ಮೊದಲ ದಿನವೇ ಜಗಳಕ್ಕೆ ಇಳಿದಿದ್ದಾರೆ. ಇದೀಗ ಕಿರಣ್ ಶಾಸ್ತ್ರಿ ಹಾಗೂ ವೈಷ್ಣವಿ ಜಗಳ ತಾರಕಕ್ಕೇರಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆ (Bigg Boss Kannada 13) ಒಂದೇ ದಿನಕ್ಕೆ ರಣರಂಗವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಜಗಳ ಮಾಡಿದರೆ ಹೆಚ್ಚು ಅಟೆನ್ಷನ್ ಸಿಗುತ್ತದೆ ಎಂಬ ಭಾವನೆ ಕೆಲವು ಸ್ಪರ್ಧಿಗಳಿಗೆ ಇದ್ದಂತಿದೆ. ಮಂಜ, ಕಿರಣ್ ಶಾಸ್ತ್ರಿ (Kiran shastri) ಮುಂತಾದವರು ಮೊದಲ ದಿನವೇ ಜಗಳಕ್ಕೆ ಇಳಿದಿದ್ದಾರೆ. ಇದೀಗ ಕಿರಣ್ ಶಾಸ್ತ್ರಿ ಹಾಗೂ ವೈಷ್ಣವಿ ಜಗಳ ತಾರಕಕ್ಕೇರಿದೆ.

ಹೌದು ಬಿಗ್‌ ಬಾಸ್‌ ಕೆಲವರನ್ನು ಮಾತ್ರ ಬಿಗ್‌ ಬಾಸ್‌ ಮನೆಯೊಳಗೆ ಕಳುಹಿಸಿದ್ದಾರೆ. ಕೆಲವರಿಗೆ ಇಂತಿಷ್ಟು ಸಮಯ ಮಾತ್ರ ನೀಡಿ ಬಿಗ್‌ ಬಾಸ್‌ ಮನೆಯನ್ನ ಬಳಸಿಕೊಳ್ಳಲು ಹೇಳಿದ್ದರು. ಆದರೆ ಸಮಯ ಮೀರಿದ್ದರೂ ಕಿರಣ್ ಶಾಸ್ತ್ರಿ ಬರಲೇ ಇಲ್ಲ. ಇದು ವೈಷ್ಣವಿಗೆ ಕೋಪ ತರಿಸಿದೆ.

ಎಷ್ಟೊತ್ತು ಮಾಡೋದು? ನಿಮ್ಮಿಂದ ಎಲ್ಲರಿಗೂ ತೊಂದರೆ ಆಗುತ್ತಿದೆ ಎಂದಿದ್ದಾರೆ. ಅದಕ್ಕೆ ಕಿರಣ್‌ ಏಕೆ ಕಿರುಚಾಡುತ್ತೀರಿ? ಎಂದು ಪ್ರಶ್ನೆ ಇಟ್ಟಿದ್ದಾರೆ. ಹುಚ್ಚು ಅನ್ನೋಕೆ ನೀವ್ಯಾರು? ಸಾರಿ ಕೇಳಿದ್ರೆ ಗಂಟು ಏನು ಹೋಗತ್ತೆ? ಎಂದು ಕಿರಣ್‌ ಮೇಲೆ ಹರಿಹಾಯ್ದರು.

ಇದನ್ನೂ ಓದಿ: Bigg boss Kannada 13: ಮಗುನಾ ನಗಿಸೋ ಟಾಸ್ಕ್‌ನಲ್ಲಿ ಗೆದ್ರಾ ಸಂಗೀತ - ಓಂಪ್ರಕಾಶ್?



ನಿನ್ನೆಯ ಎಪಿಸೋಡ್‌ನಲ್ಲಿ ಪ್ರಮುಖವಾಗಿ ಹೈಲೈಟ್‌ ಆಗಿದ್ದು ಅಗ್ನಿಪರೀಕ್ಷೆಯಿಂದ ಬಂದವರು ಎಂದು ವೀಕ್ಷಕರು ಕಮೆಂಟ್‌ ಮಾಡುತ್ತಿದ್ದಾರೆ. ಈ ಬಾರಿ ವಿಮಾನಯಾನದ ಥೀಮ್​ನಲ್ಲಿ ‘ಬಿಗ್ ಬಾಸ್ ಕನ್ನಡ’ ಶೋ ನಡೆಯುತ್ತಿದೆ. ಎಲ್ಲ ಸ್ಪರ್ಧಿಗಳು ಇನ್ನೂ ಪೂರ್ತಿಯಾಗಿ ಮನೆಯನ್ನು ಎಂಜಾಯ್ ಮಾಡಲು ಸಾಧ್ಯವಾಗಿಲ್ಲ. ಬಹುತೇಕ ಸಮಯವನ್ನು ವಿಮಾನದ ಸೆಟ್ ಒಳಗೆ ಕಳೆಯುವಂತಾಗಿದೆ. ಅದರಲ್ಲೂ ಕೆಲವರು ಮಾತ್ರ ಬಿಗ್‌ ಬಾಸ್‌ ಮನೆಯೊಳಗೆ ಇದ್ದಾರೆ, ಇದು ಕೋಪ ಬರಿಸವಂತೆ ಮಾಡಿದೆ ಕೆಲವರಿಗೆ.

ಇದನ್ನೂ ಓದಿ: Bigg boss Kannada 13: ಮಗುನಾ ನಗಿಸೋ ಟಾಸ್ಕ್‌ನಲ್ಲಿ ಗೆದ್ರಾ ಸಂಗೀತ - ಓಂಪ್ರಕಾಶ್?

ಸೆಲೆಬ್ರಿಟಿಗಳಿಗಿಂತ ಕಾಮನರ್ ಸ್ಪರ್ಧಿಗಳೇ ಹೆಚ್ಚಾಗಿ ಸದ್ದು ಮಾಡುತ್ತಿದ್ದಾರೆ. ಅಗ್ನಿ ಪರೀಕ್ಷೆ ಮೂಲಕ ಬಿಗ್​ ಬಾಸ್ ಮನೆಗೆ ಬಂದಿರುವ ಕಿರಣ್ ಶಾಸ್ತ್ರಿ ಹೆಚ್ಚಾಗಿ ಕೂಗಾಡುತ್ತಿದ್ದಾರೆ.

Yashaswi Devadiga

View all posts by this author