ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada: ಬಿಗ್ ಬಾಸ್ ನ ಮೊದಲ ಸ್ಪರ್ಧಿ ಬಗ್ಗೆ ಸಿಕ್ತು ಸುಳಿವು! ಯಾರಿವನು ಮಾಸ್ಕ್ ಮ್ಯಾನ್!

Bigg Boss Kannada: ಕಲರ್ಸ್ ಕನ್ನಡ ಮಾಸ್ಕ್ ಮ್ಯಾನ್ ಜನರ ಅಭಿಪ್ರಾಯ ಸಂಗ್ರಹಿಸುವ ವಿಡಿಯೋ ವೊಂದನ್ನು ಬಿಡುಗಡೆ ಮಾಡಿದೆ. ಆ ಮಾಸ್ಕ್ ಮ್ಯಾನ್ ವೀಕ್ಷಕರ ಬಳಿ ಹೋಗಿ ಈ ಭಾರೀ ಬಿಗ್‌ಬಾಸ್ ಹೋಗುತ್ತಿದ್ದೇನೆ ನಿಮ್ಮ ಅಭಿಪ್ರಾಯ ಏನು? ಎಂದು ಕೇಳುತ್ತಿರುವ ವಿಡಿಯೊ ವೈರಲ್ ಆಗಿದೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada) ಆರಂಭಕ್ಕೆ ಹೆಚ್ಚಿನ ಪ್ರೇಕ್ಷ ಕರು ಕಾದು ಕುಳಿತಿದ್ದಾರೆ. ಇನ್ನೇನು ಬಿಗ್ ಬಾಸ್ ಆರಂಭ ವಾಗಲು ಕೆಲವೇ ದಿನಗಳು ಬಾಕಿ ಇದ್ದು ಕಿರುತೆರೆಯಲ್ಲಿ ಅತ್ಯಂತ ಇಂಟ್ರಸ್ಟಿಂಗ್ ರಿಯಾಲಿಟಿ ಶೋ ಅಂದ್ರೆ ಅದು 'ಬಿಗ್ ಬಾಸ್‌' ಶೋ ಆಗಿದೆ. ಸೆಪ್ಟೆಂಬರ್ 28ರಂದು ಭಾನುವಾರ ಸಂಜೆ 6 ಗಂಟೆಗೆ ಬಿಗ್‌‌ ಬಾಸ್‌ ಕನ್ನಡ ಸೀಸನ್‌ 12ರ ಗ್ರಾಂಡ್‌ ಒಪನಿಂಗ್‌ ಪ್ರಸಾರವಾಗದೆ. ಅದರಲ್ಲೂ ಈ ವರ್ಷ ಬಿಗ್ ಬಾಸ್ ಮನೆಯಲ್ಲಿ ಫೈಟ್ ಹೇಗಿರಲಿದೆ? ಯಾರೆಲ್ಲ ಸ್ಪರ್ಧಿಗಳು ಎಂಟ್ರಿ ನೀಡಲಿದ್ದಾರೆ ಎನ್ನುವ ಕ್ಯುರಾಸಿಟಿ ಹೆಚ್ಚಿನ ಜನರಿಗೆ ಇದೆ. ಈಗಾಗಲೇ‌ ಕೆಲವು ಸ್ಪರ್ಧಿಗಳ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ.

ಈ ನಡುವೆ ಕಲರ್ಸ್ ಕನ್ನಡ ಮಾಸ್ಕ್ ಮ್ಯಾನ್ ಜನರ ಅಭಿಪ್ರಾಯ ಸಂಗ್ರಹಿಸುವ ವಿಡಿಯೋ ವೊಂದನ್ನು ಬಿಡು ಗಡೆ ಮಾಡಿದೆ. ಆ ಮಾಸ್ಕ್ ಮ್ಯಾನ್ ವೀಕ್ಷಕರ ಬಳಿ ಹೋಗಿ ಈ ಭಾರೀ ಬಿಗ್‌ಬಾಸ್ ಹೋಗುತ್ತಿದ್ದೇನೆ ನಿಮ್ಮ ಅಭಿಪ್ರಾಯ ಏನು? ಎಂದು ಕೇಳುತ್ತಿರುವ ವಿಡಿಯೊ ವೈರಲ್ ಆಗಿದೆ.



'ಬಿಗ್‌ ಬಾಸ್‌’ ನ ಈ ಸೀಸನ್‌ನಲ್ಲಿ ‘ ಎಕ್ಸ್ ಪೆಕ್ಟ್ ದ ಅನ್ ಎಕ್ಸ್ ಪೆಕ್ಟೆಟ್' Expect the Unexpected ಎಂಬ ಥೀಮ್‌ ಈ ಭಾರೀ ಇರಲಿದೆ. ‘ಬಿಗ್‌ ಬಾಸ್ 'ಶೋ ಬಗ್ಗೆ ನಮಗೆ ಎಲ್ಲವೂ ಗೊತ್ತಿದೆ, ಅಲ್ಲಿ ಯಾವಾಗ ಏನು ಆಗುತ್ತದೆ ಎನ್ನುವ ಅರಿವೂ ನಮಗೆ ಚೆನ್ನಾಗಿದೆ ಅಂತ ಕೆಲವರು ಹೇಳುತ್ತಾರೆ. ಇದಕ್ಕೆ ಕಿಚ್ಚ ಸುದೀಪ್‌ ಅವರು ಪ್ರೋಮೋ ಮೂಲಕ "ಓಹ್.. ಭ್ರಮೆ!" ಎಂದು ಹೇಳುವ ಪ್ರೋಮೊ ಕೂಡ ಬಿಡುಗಡೆಯಾಗಿದೆ. ಈ ನಡುವೆ ಮಾಸ್ಕ್ ತೊಟ್ಟ ವ್ಯಕ್ತಿಯೊಬ್ಬ ಜನರ ನಡುವೆ ತೆರಳಿ ನಾನು ಬಿಗ್ ಬಾಸ್ ಒಳಗೆ ಹೋಗುತ್ತಿದ್ದೇನೆ. ನಿಮಗೆ ಈ ಬಗ್ಗೆ ಅನಿಸಿಕೆ ಏನು ಎಂದು ಆ ಸ್ಪರ್ಧಿ ಜನರನ್ನ ಕೇಳಿದ್ದಾರೆ. ಅದಕ್ಕೆ ಜನ ತಮ್ಮ ಅಭಿಪ್ರಾಯ ರೀತಿಯಲ್ಲಿಯೇ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಜನರು ಹೇಗೆಲ್ಲ ರೆಸ್ಪಾನ್ಸ್ ಮಾಡಿದ್ದಾರೆ ಎಂದು ಕ್ಯಾಮರಾದಲ್ಲಿ ಆತ ರೆಕಾರ್ಡ್ ಮಾಡಿದ್ದಾರೆ.‌ ಈ ದೃಶ್ಯವನ್ನು ಕಲರ್ಸ್ ಕನ್ನಡ ಬಿಗ್ ಬಾಸ್ ಪ್ರೋಮೊದಲ್ಲಿ ಬಿಡುಗಡೆ ಮಾಡಲಾಗಿದ್ದು ಈ ಮಾಸ್ಕ್ ಮ್ಯಾನ್ ಯಾರು ಎಂದು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ.

ಇದನ್ನು ಓದಿ:Bigg Boss Kannada: ‘ಬಿಗ್ ಬಾಸ್ ಕನ್ನಡ-ಸೀಸನ್ 12’ ಸೆಪ್ಟೆಂಬರ್ 28ಕ್ಕೆ ಗ್ರ್ಯಾಂಡ್‌ ಓಪನಿಂಗ್!

ಇದೀಗ ವ್ಯಕ್ತಿ ಯಾರು ಎಂಬುದನ್ನು ಜನರೇ ಕಂಡು ಹಿಡಿದಿದ್ದಾರೆ..ಆ ವ್ಯಕ್ತಿ ಬೇರೆ ಯಾರೂ ಅಲ್ಲ ಕಾಕ್ರೋಚ್ ಸುಧಿ ಅಂತ ಗೆಸ್ ಮಾಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ಇವರಿಗೆ 'ಟಗರು’ ಸಿನಿಮಾ ಜನಪ್ರಿಯತೆ ತಂದು ಕೊಟ್ಟಿತ್ತು. ಈ ಸಿನಿಮಾದಲ್ಲಿ ಕಾಕ್ರೋಚ್ ಹೆಸರಿನ ಪಾತ್ರವನ್ನು ಸುಧಿ ಮಾಡಿದ್ದರು. ಸದ್ಯ ಕಾಕ್ರೋಜ್ ಸುಧಿಯೇ ಬಿಗ್ ಬಾಸ್ ಮನೆಗೆ ಹೋಗುದು ಪಕ್ಕಾ ಅಂತ ಫ್ಯಾನ್ಸ್ ಶುಭ ಹಾರೈಸಿದ್ದಾರೆ. ಈ ಸಲ ಕಪ್ ನಿಮ್ದೆ ಶುಭವಾಗಲಿ ಅಂತ ಕೆಲವರು ಕಾಮೆಂಟ್ ‌ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್ ಬಾಸ್ ಸೀಸನ್-12 ರ ಗ್ರ್ಯಾಂಡ್ ಓಪನಿಂಗ್ ಇದೇ ವಾರ ನಡೆಯುತ್ತಿದೆ. ಭಾನುವಾರ 28 ರಂದು ಸಂಜೆ 6 ಗಂಟೆಗೆ ಈ‌ ಶೋ ಆರಂಭ ವಾಗಲಿದ್ದು ಪ್ರೇಕ್ಷಕರ ನಿರೀಕ್ಷೆ ಹೆಚ್ಚು ಮಾಡಿದೆ. ಈ ಭಾರೀ ಕೂಡ ಪ್ತೇಕ್ಷಕರ ಒತ್ತಾಸೆಯಂತೆ ಸುದೀಪ್ ಅವರೇ ಕಾರ್ಯಕ್ರಮ‌ ಹೋಸ್ಟ್ ಮಾಡುತ್ತಿದ್ದು ಜನರು ಬಹಳಷ್ಟು ಎಕ್ಸೈಟ್ ಆಗಿದ್ದಾರೆ.