ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jr. NTR: ಜೂನಿಯರ್ ಎನ್​ಟಿಆರ್ ಧರಿಸಿರುವ ಶರ್ಟ್​ ಬೆಲೆ ಎಷ್ಟು ಗೊತ್ತೆ? ಕೇಳಿದ್ರೆ ನೀವು ಶಾಕ್ ಆಗ್ತೀರಾ!..

RRR ಸಿನಿಮಾ ಖ್ಯಾತಿಯ ಜ್ಯೂನಿಯರ್ ಎನ್ ಟಿಆರ್ ಇತ್ತೀಚೆಗೆ ವೊಂದು ಟಿ ಶರ್ಟ್ ಧರಿಸಿದ್ದು ಇವರ ಲುಕ್ ಕಂಡು ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಶೂಟಿಂಗ್ ನಡುವೆಯೇ ಕುಟುಂಬದ ಜೊತೆ ವಿದೇಶಕ್ಕೆ ತೆರಳಿದ್ದ ನಟ ಜೂನಿಯರ್ ಎನ್ ಟಿ ಆರ್ ಹೊಸ ಶರ್ಟ್ ನಲ್ಲಿ ಸಖತ್ ಸ್ಮಾರ್ಟ್ ಆಗಿ ಕಾಣಿಸಿದ್ದಾರೆ. ಇವರು ಧರಿಸಿದ್ದ ಬಟ್ಟೆಯು ನೋಡಲು ಸಿಂಪಲ್ ಆಗಿದ್ದರೂ ಭಾರೀ ದುಬಾರಿ ಮೊತ್ತದ್ದು ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಅದರ ಬೆಲೆ ಎಷ್ಟು ಗೊತ್ತಾ?

ದುಬೈ ಪ್ರವಾಸದಲ್ಲಿ Jr. NTR ಶರ್ಟ್ ಕಂಡು ಫ್ಯಾನ್ಸ್‌ ಫುಲ್‌ ಫಿದಾ!

Profile Pushpa Kumari Apr 17, 2025 5:29 PM

ನವದೆಹಲಿ: ಸೆಲೆಬ್ರಿಟಿಗಳ ಫ್ಯಾಶನ್ ಸಾಮಾನ್ಯ ಜನರನ್ನು ಆಕರ್ಷಿಸುತ್ತದೆ. ತಮ್ಮ ನೆಚ್ಚಿನ ನಟ ನಟಿಯರ ಉಡುಗೆ ತೊಡುಗೆಳನ್ನು ಫಾಲೋ ಮಾಡುವ ಅನೇಕ ಅಭಿಮಾನಿಗಳಿದ್ದಾರೆ. ಸ್ಟಾರ್ ನಟ ನಟಿಯರು ತೊಡುವ ಉಡುಗೆ ನೋಡಲು ಗ್ರ್ಯಾಂಡ್ ಲುಕ್ ನೀಡುತ್ತದೆ. ಆದರೆ ಅದಕ್ಕೆ ತಕ್ಕಂತೆ ಬಟ್ಟೆ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಪಕ್ಕಾ. ಇದೇ ರೀತಿಯಲ್ಲಿ RRR ಸಿನಿಮಾ ಖ್ಯಾತಿಯ ಜ್ಯೂನಿಯರ್ ಎನ್ ಟಿಆರ್ (Jr. NTR) ಕೂಡ ಇತ್ತೀಚೆಗೆವೊಂದು ಟಿ ಶರ್ಟ್ ಧರಿಸಿದ್ದು ಇವರ ಲುಕ್ ಕಂಡು ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಶೂಟಿಂಗ್ ನಡುವೆಯೇ ಕುಟುಂಬದ ಜೊತೆ ವಿದೇಶಕ್ಕೆ ತೆರಳಿದ್ದ ನಟ ಜೂನಿಯರ್ ಎನ್ ಟಿ ಆರ್ ಹೊಸ ಶರ್ಟ್‌ನಲ್ಲಿ ಸಖತ್ ಸ್ಮಾರ್ಟ್ ಆಗಿ ಕಾಣಿಸಿದ್ದಾರೆ. ಇವರು ಧರಿಸಿದ್ದ ಬಟ್ಟೆಯು ನೋಡಲು ಸಿಂಪಲ್ ಆಗಿದ್ದರೂ ಭಾರೀ ದುಬಾರಿ ಮೊತ್ತದ್ದು ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಅದರ ಬೆಲೆ ಎಷ್ಟು ಗೊತ್ತೆ?

ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ RRR ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಉಗ್ರಂ, ಕೆಜಿಎಫ್​ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಡ್ರ್ಯಾಗನ್​ ಸಿನಿಮಾದ ತಯಾರಿಯಲ್ಲಿದ್ದು ಚಿತ್ರದ ಶೂಟಿಂಗ್ ಎಪ್ರಿಲ್ 22 ರಿಂದ ಆರಂಭವಾಗಲಿದೆ. ಈ ನಡುವೆ ನಟ ಜೂನಿಯರ್ ಎನ್​ಟಿಆರ್ ತಮ್ಮ ಫ್ಯಾಮಿಲಿ ಜೊತೆ ದುಬೈ ಪ್ರವಾಸಕ್ಕೆ ತೆರಳಿದ್ದಾರೆ. ಈ ಸಂದರ್ಭ ಜೂ. ಎನ್‌ಟಿಆರ್ ಧರಿಸಿದ ಶರ್ಟ್​ವೊಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ.

ನಟ ಜೂನಿಯರ್ ಎನ್ ಟಿಆರ್ ಕುಟುಂಬದ ಜೊತೆ ದುಬೈಗೆ ತೆರಳಿ ಐಶಾರಾಮಿ ಹೋಟೆಲ್ ನಲ್ಲಿ ತಂಗಿದ್ದಾರೆ. ಅಲ್ಲಿನ ಸಿಬಂದಿ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ. ಪ್ರವಾಸದ ವೇಳೆ ಬ್ಲೂ ಬಣ್ಣದ ಜೊತೆಗೆ ಕ್ರೀಮ್ ಹಾಗೂ ಬೂದು ಬಣ್ಣದ ವಿನ್ಯಾಸ ಇರುವ ಹಾಫ್​ ಬಟನ್​ ಶರ್ಟ್​ ಧರಿಸಿದ್ದಾರೆ. ಇದರ ವಿನ್ಯಾಸವು ಹೆಚ್ಚು ಕ್ಲಾಸಿಕ್ ಆಗಿದ್ದು ನೋಡಲು ಬಹಳ ಆಕರ್ಷಣೆಯಾಗಿದೆ. ಇದರ ನಡುವೆ ಈ ಶರ್ಟ್ ನ ಬೆಲೆ ಎಷ್ಟಿರಬಹುದು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಏರ್ಪಟ್ಟಿದೆ. ಈಟ್ರೋ ಕಂಪೆನಿಯ ಬ್ರ್ಯಾಂಡ್ ಹೊಂದಿದ್ದ ಈ ಶರ್ಟ್ ಗೆ ಬರೋಬ್ಬರಿ 85,000 ರೂಪಾಯಿ ಮೊತ್ತ ಅಂದರೆ ನಿಮಗೂ ಆಶ್ಚರ್ಯ ವಾಗಬಹುದು.



ಇದನ್ನು ಓದಿ: NTRNeel Update: ಪ್ರಶಾಂತ್‌ ನೀಲ್‌, ಜೂ. ಎನ್‌ಟಿಆರ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ʼಎನ್‌ಟಿಆರ್‌ನೀಲ್‌ʼ ಚಿತ್ರದಿಂದ ಹೊರಬಂತು ಎಕ್ಸೈಟಿಂಗ್‌ ಅಪ್‌ಡೇಟ್‌

ದುಬೈ ಪ್ರವಾಸದ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳ ಫೋಟೋಗೆ ಪೋಸ್ ನೀಡಿದ್ದ ಜೂನಿಯರ್ ಎನ್ ಟಿ ಆರ್ ಫೋಟೊ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ‌. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದು ಈ ಒಂದು ಶರ್ಟ್ ನಲ್ಲಿ ನನ್ನ 4 ತಿಂಗಳ ಸಂಬಳ ಸಿಗುತ್ತೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಹಾಕಿದ್ದಾರೆ. ಕೋಟಿ ಕೋಟಿ ಗಳಿಸುವ ನಟನಿಗೆ 85ಸಾವಿರ ರೂಪಾಯಿ ಬೆಲೆಯ ಶರ್ಟ್ ಧರಿಸುವುದು ದೊಡ್ಡ ವಿಚಾರವಲ್ಲ, ಎಂದು ಅಭಿಮಾನಿ ವೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.ಸದ್ಯ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ ಇರುವ ಜೂ. ಎನ್ ಟಿ ಆರ್ ದುಬೈ ನಿಂದ ವಾಪಾಸ್ ಆದ ಬಳಿಕ ಇದೇ ಎಪ್ರಿಲ್ 22 ರಂದು ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಡ್ರ್ಯಾಗನ್ ಸಿನಿಮಾದ ಶೂಟಿಂಗ್​ನಲ್ಲಿ ತೊಡಗಿಕೊಳ್ಳಲ್ಲಿದ್ದಾರೆ. ಬಾಹುಬಲಿ ಖ್ಯಾತ ನಿರ್ದೇಶಕ ರಾಜಮೌಳಿ ಜೊತೆ RRR ಸಕ್ಸಸ್ ಬಳಿಕ ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿದೆ.