ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Nanda Gokula Serial: ʻನಂದಗೋಕುಲ’ದ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಏಕೆ?

Nanda Gokula Kannada Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಂದ ಗೋಕುಲ' ಧಾರಾವಾಹಿ ಈಗ ಕುತೂಹಲಕಾರಿ ಘಟ್ಟ ತಲುಪಿದೆ. ನಂದಕುಮಾರ್ ಮತ್ತು ಗಿರಿಜಾರ ಮುದ್ದಿನ ಸಂಸಾರದ ಕಥೆಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಸದ್ಯ ಬಿಡುಗಡೆಯಾಗಿರುವ ಹೊಸ ಪ್ರೋಮೊ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಜೊತೆಗೆ ಸೀರಿಯಲ್‌ ಬಗ್ಗೆ ವೀಕ್ಷಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ನಂದ ಗೋಕುಲ ಧಾರಾವಾಹಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರವಾಗುತ್ತಿರುವ 'ನಂದ ಗೋಕುಲ' (Nanda Gokula Serial) ಧಾರಾವಾಹಿ ಈಗ ಕುತೂಹಲಕಾರಿ ಘಟ್ಟ ತಲುಪಿದೆ. ನಂದಕುಮಾರ್ ಮತ್ತು ಗಿರಿಜಾರ ಮುದ್ದಿನ ಸಂಸಾರದ ಕಥೆಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಸದ್ಯ ಬಿಡುಗಡೆಯಾಗಿರುವ ಹೊಸ ಪ್ರೋಮೊ (New Promo) ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಜೊತೆಗೆ ಸೀರಿಯಲ್(Kannada Serial) ಬಗ್ಗೆ ವೀಕ್ಷಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ವಲ್ಲಭ ಮತ್ತು ಅಮ್ಮು ಭಾವುಕ ಕ್ಷಣ

ವಲ್ಲಭ ಮತ್ತು ಅಮ್ಮು ನಡುವಿನ ಒಂದು ಭಾವುಕ ವಿಡಿಯೋ ಬಗ್ಗೆ ಒಂದು ಕಡೆ ಮೆಚ್ಚುಗೆ ಆದ್ರೆ, ಕಥೆಯ ಬಗ್ಗೆಯೂ ವೀಕ್ಷಕರು ಅಸಮಾಧಾನ ಹೊರ ಹಾಕಿದ್ದಾರೆ. ಧಾರಾವಾಹಿಯ ಇತ್ತೀಚಿನ ಎಪಿಸೋಡ್‌ನಲ್ಲಿ ಅಮ್ಮು ತುಂಬಾ ಮನನೊಂದು ಕುಳಿತಿರುತ್ತಾಳೆ.

ಇದನ್ನೂ ಓದಿ: Chaithra Kundapura: ಇದೊಂದೇ ಕಾರಣಕ್ಕೆ ವಂಚನೆ ಪ್ರಕರಣ ಬಗ್ಗೆ ಮಾತನಾಡಲ್ಲ; ಚೈತ್ರಾ ಕುಂದಾಪುರ ಮನದಾಳದ ಮಾತು

ಅಮ್ಮು ಬೇಸರದಲ್ಲಿದ್ದಾಳೆ ಎಂದು ತಿಳಿದ ವಲ್ಲಭ, ಅವಳಿಗೆ ಊಟ ತರುತ್ತಾನೆ. ಮೊದಮೊದಲು ಅಮ್ಮು ತನಗೆ ಹಸಿವಿಲ್ಲ ಎಂದು ಊಟ ಮಾಡಲು ನಿರಾಕರಿಸುತ್ತಾಳೆ. ವಲ್ಲಭ ಊಟ ಮಾಡಿಸುವಾಗ ಅಮ್ಮುಗೆ ತನ್ನ ತಂದೆಯ ನೆನಪಾಗುತ್ತದೆ. ಹಿಂದೆ ತನ್ನ ತಂದೆ ಕೂಡ ಹೀಗೆಯೇ ಪ್ರೀತಿಯಿಂದ ಊಟ ಮಾಡಿಸುತ್ತಿದ್ದ ಕ್ಷಣಗಳನ್ನು ಅವಳು ನೆನಪಿಸಿಕೊಳ್ಳುತ್ತಾಳೆ. ಈ ಭಾವನಾತ್ಮಕ ಕ್ಷಣದ ಬಗ್ಗೆ ವೀಕ್ಷಕರು ಮೆಚ್ಚುಗೆ ಹೊರ ಹಾಕಿದ್ದಾರೆ.



ಅದೇ ಸೊಸೆ ಮನೆಗೆ ವಿಲನ್

ಇನ್ನೊಂದು ಕಡೆ ನಂದಕುಮಾರ್ ತಾನೇ ಹುಡುಕಿ ಮಾಡಿದಂತಹ ಹಿರಿಯ ಮಗ ಮಾಧವನ ಮದುವೆ ಮಾಡಿಸಿದ್ದು, ಇದೀಗ ಅದೇ ಸೊಸೆ ಮನೆಗೆ ವಿಲನ್ ಆದಂತಿದೆ. ಅತ್ತೆ ಮಾವನನ್ನುಇಂಪ್ರೆಸ್ ಮಾಡಲು ಹೊರಟಿದ್ದಾಳೆ ಪ್ರಿಯಾ.

ಇದನ್ನೂ ಓದಿ: Pramod Shetty: ಮದುವೆಗೆ ರಶ್ಮಿಕಾ ನಮ್ಮನ್ನೆಲ್ಲಾ ಕರೆಯಲ್ಲ; ಪ್ರಮೋದ್ ಶೆಟ್ಟಿ

ಇಲ್ಲಿವರೆಗೆ ಮನೆಯ ಒಳಗೆ ಯಾವುದೇ ವಿಲನ್ ಇಲ್ಲದೇ, ಸುಂದರವಾಗಿ ಸಾಗುತ್ತಿದ್ದ ಕತೆಯಲ್ಲಿ ಇದೀಗ ಮನೆಗೆ ಬಂದಿರುವ ಸೊಸೆಯೇ ವಿಲನ್ ಆಗಿರುವುದನ್ನು ನೋಡಿ, ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಈ ಸೀರಿಯಲ್ ಈಗ ಹೊಸ ತಿರುವು ಪಡೆದುಕೊಂಡಿದೆ.

Yashaswi Devadiga

View all posts by this author