ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada 11) ಫಿನಾಲೆ ಸ್ಪರ್ಧಿಗಳು ದೊಡ್ಮನೆಯಿಂದ ಹೊರಬಂದ ಬಳಿಕ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲೂ ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿರುವ ಭವ್ಯಾ ಗೌಡ ಅವರು ತ್ರಿವಿಕ್ರಮ್ ಹಾಗೂ ಅನುಷಾ ರೈ ಜೊತೆ ಊರೂರು ಸುತ್ತುತ್ತಿದ್ದಾರೆ. ಅಭಿಮಾನಿಗಳಂತು ಭವ್ಯಾ ಅವರನ್ನು ಕಂಡ ಕೂಡಲೇ ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ. ಅತ್ತ ಇತರೆ ಕೆಲ ಬಿಬಿಕೆ 11 ಸ್ಪರ್ಧಿಗಳು ಮತ್ತೊಂದು ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ 11 ಮುಗಿದ ಬೆನ್ನಲ್ಲೇ ವೀಕೆಂಡ್ನಲ್ಲಿ ಅನುಪಮಾ ಗೌಡ ಅವರ ಸಾರಥ್ಯದಲ್ಲಿ ಬಾಯ್ಸ್ vs ಗರ್ಲ್ ಎಂಬ ಹೊಸ ರಿಯಾಲಿಟಿ ಶೋ ಆರಂಭವಾಗಿದೆ. ಈ ಶೋನ ಬಾಯ್ಸ್ ತಂಡದಲ್ಲಿ ಬಿಗ್ ಬಾಸ್ ಕನ್ನಡ 11’ಕಾರ್ಯಕ್ರಮದ ವಿನ್ನರ್ ಹನುಮಂತ ಲಮಾಣಿ, ಧನರಾಜ್, ರಜತ್ ಸ್ಪರ್ಧಿಸುತ್ತಿದ್ದಾರೆ. ಇನ್ನೂ ಗರ್ಲ್ಸ್ ತಂಡದಲ್ಲಿ ಶೋಭಾ ಶೆಟ್ಟಿ ಹಾಗೂ ಐಶ್ವರ್ಯಾ ಸಿಂಧೋಗಿ ಇದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಭವ್ಯಾ ಗೌಡ ಸಹ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸಬೇಕಿತ್ತು. ಆದರೆ, ಇವರು ಶೋನಿಂದ ಹೊರ ನಡೆಸಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಸೀಸನ್ 11ರ ಟಿಕೆಟ್ ಟು ಫಿನಾಲೆ ವಾರ ನಡೆಯುವಾಗ ಅನುಪಮಾ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ನಡೆಯಲಿದೆ ಎಂದ ಮಾಹಿತಿ ನೀಡಿದ್ದರು. ಫಿನಾಲೆ ವಾರದ ದಿನ ಈ ಕಾರ್ಯಕ್ರಮದ ಸ್ಪರ್ಧಿಗಳು ಕೂಡ ಎಂಟ್ರಿ ಕೊಟ್ಟರು. ಆಗ ಫಿನಾಲೆಯಲ್ಲಿದ್ದ ಸ್ಪರ್ಧಿಗಳಾದ ಹನುಮಂತು, ರಜತ್ ಕಿಶನ್ ಮತ್ತು ಭವ್ಯಾ ಗೌಡರನ್ನು ಸ್ಪರ್ಧಿಗಳಾಗಿ ಆಯ್ಕೆ ಮಾಡಿದ್ದರು. ಅಲ್ಲಿಗೆ ಈ ನಾಲ್ವರಿಗೆ ಬಿಗ್ ಬಾಸ್ ಮುಗಿಯುವ ಮುನ್ನವೇ ಬಂಪರ್ ಆಫರ್ ಬಂದಿತ್ತು.
ಆದ್ರೆ ಶನಿವಾರ ಹಾಗೂ ಭಾನುವಾರ ಪ್ರಸಾರವಾಗಿದ್ದ ಸಂಚಿಕೆಯಲ್ಲಿ ಭವ್ಯಾ ಗೌಡ ಬಂದಿರಲಿಲ್ಲ. ಬದಲಾಗಿ ಅನಿರೀಕ್ಷಿತವಾಗಿ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ನೀಡಲಾಗಿತ್ತು. ಆದ್ರೆ ಇದೀಗ ಭವ್ಯಾ ಗೌಡ ಈ ಆಫರ್ ರಿಜೆಕ್ಟ್ ಮಾಡಿಬಿಟ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಯಾಕೆಂದರೆ ಬಿಗ್ ಬಾಸ್ ಮನೆಯೊಳಗೆ ಹೇಳಿದಂತೆ ಭವ್ಯಾ ಇದರಲ್ಲಿ ಭಾಗವಹಿಸಬೇಕಿತ್ತು. ಚೈತ್ರಾ ಹೆಸರು ಇದರಲ್ಲಿ ಇರಲೇ ಇಲ್ಲ. ಆದರೀಗ ಭವ್ಯಾ ಜಾಗಕ್ಕೆ ಚೈತ್ರಾರನ್ನು ಕರೆತಂದಿದ್ದು ಯಾಕೆ ಎಂಬ ಅನುಮಾನ ಎಲ್ಲರಲ್ಲಿದೆ.
ಬಿಗ್ ಬಾಸ್ ಮುಗಿದ ಬೆನ್ನಲ್ಲೇ ಭವ್ಯಾ ಅವರು ತ್ರಿವಿಕ್ರಮ್ ಹಾಗೂ ಅನುಷಾ ಜೊತೆ ತುಮಕೂರು-ಮೈಸೂರು ಹೀಗೆ ಸುತ್ತಾಡುತ್ತಿದ್ದಾರೆ. ಸದ್ಯಕ್ಕೆ ಅವರು ಬ್ರೇಕ್‌ನ ನಿರೀಕ್ಷೆಯಲ್ಲಿದ್ದಾರಾ ಎಂಬ ಅನುಮಾನ ಕೂಡ ಮೂಡಿದೆ. ಅಥವಾ ಬೇರೆ ಪ್ರಾಜೆಕ್ಟ್‌ಗಾಗಿ ತಯಾರಿ ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ ಭವ್ಯಾ ಗೌಡ ಏಕೆ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ ಅಂತ ವೀಕ್ಷಕರು ಮಾತ್ರ ತಲೆ ಕೆಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭವ್ಯಾ ಈ ಬಗ್ಗೆ ಏನಾದರೂ ಸ್ಪಷ್ಟನೆ ನೀಡುತ್ತಾರ ಎಂಬುದು ನೋಡಬೇಕಿದೆ.
Trivikram, BBK 11: ಭವ್ಯಾಗೆ ಪ್ರಪೋಸ್ ಮಾಡೋಕೆ ನಾನ್ಯಾಕೆ ಹೆದರಲಿ: ತ್ರಿವಿಕ್ರಮ್ ಖಡಕ್ ಉತ್ತರ