Trivikram, BBK 11: ಭವ್ಯಾಗೆ ಪ್ರಪೋಸ್ ಮಾಡೋಕೆ ನಾನ್ಯಾಕೆ ಹೆದರಲಿ: ತ್ರಿವಿಕ್ರಮ್ ಖಡಕ್ ಉತ್ತರ
ಬಿಗ್ ಬಾಸ್ ಮನೆಯಲ್ಲಿದ್ದಾಗ ತ್ರಿವಿಕ್ರಮ್ ಅವರು ಭವ್ಯ ಗೌಡಗೆ ಪ್ರಪೋಸ್ ಮಾಡಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದೀಗ ತ್ರಿವಿಕ್ರಮ್ ಅವರು ವಿಶ್ವವಾಣಿ ಜೊತೆಗಿನ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ.


ಬಿಗ್ ಬಾಸ್ ಸೀಸನ್ 11ರ (Bigg Boss Kannada 11) ಗ್ರ್ಯಾಂಡ್ ಫಿನಾಲೆ ಮುಗಿದು ಒಂದು ವಾರ ಕಳೆದಿದೆ. ಹನುಮಂತ ವಿನ್ನರ್ ಹಾಗೂ ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಸದ್ಯ ಕಾರ್ಯಕ್ರಮ ಮುಗಿದು ಒಂದು ವಾರ ಆಗಿದ್ದರೂ ಸ್ಪರ್ಧಿಗಳ ಹವಾ ಮಾತ್ರ ಕಮ್ಮಿ ಆಗಿಲ್ಲ. ಬಿಗ್ ಬಾಸ್ ಮನೆಯೊಳಗಿಂದ ಹೊರ ಬಂದಿರುವ ಫಿನಾಲೆ ಸ್ಪರ್ಧಿಗಳು ಇದೀಗ ಸಂದರ್ಶನಗಳಲ್ಲಿ ಬ್ಯೂಸಿಯಾಗಿದ್ದಾರೆ. ಇದೀಗ ಕನ್ನಡ ಕಿರುತೆರೆಯಲ್ಲಿ ಸಾಮ್ರಾಟ್ ಅಂತಲೇ ಜನಪ್ರಿಯತೆ ಪಡೆದಿರುವ ಬಿಗ್ ಬಾಸ್ ಸೀಸನ್ 11ರ ಫಸ್ಟ್ ರನ್ನರ್ ರಪ್ ನಟ ತ್ರಿವಿಕ್ರಮ್ ವಿಶ್ವವಾಣಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಈ ಬಾರಿಯ ಬಿಗ್ ಬಾಸ್‌ನಲ್ಲಿ ತ್ರಿವಿಕ್ರಮ್ ಒಂದು ರೀತಿ ಕ್ರೇಜ್ ಆದ್ರೆ, ತ್ರಿವ್ಯಾ ಎನ್ನುವುದು ನೆಕ್ಸ್ಟ್ ಲೆವೆಲ್ ಕ್ರೇಜ್ ಆಗಿದೆ. ಬಿಗ್ ಬಾಸ್ ಸ್ಪರ್ಧಿಗಳಾದ ತ್ರಿವಿಕ್ರಮ್ ಹಾಗೂ ಭವ್ಯಾ ಹೆಸರನ್ನು ಒಟ್ಟಾಗಿ ತ್ರಿವ್ಯಾ ಎಂದು ಹ್ಯಾಷ್‌ಟ್ಯಾಗ್ ರಚಿಸಿರುವ ಅಭಿಮಾನಿಗಳು, ಅವರಿಬ್ಬರು ಜೊತೆಯಾಗಿರುವ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದು ಭರ್ಜರಿ ವೈರಲ್ ಆಗಿತ್ತು.
ಹಾಗೆಯೆ ಬಿಗ್ ಬಾಸ್ ಮನೆಯಲ್ಲಿದ್ದಾಗ ತ್ರಿವಿಕ್ರಮ್ ಅವರು ಭವ್ಯ ಗೌಡಗೆ ಪ್ರಪೋಸ್ ಮಾಡಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ತ್ರಿವಿಕ್ರಮ್ ಅವರು ಭವ್ಯಗೆ ಲವ್ ಪ್ರಪೋಸ್ ಮಾಡಿದ್ದಾರೆ. ಅದಕ್ಕೆ ಭವ್ಯ ಸಮಯ ಕೇಳಿದ್ದಾರೆ ಅನ್ನೋ ಸುದ್ದಿ ಎದ್ದಿತ್ತು. ಇದೀಗ ಈ ಎಲ್ಲಾ ವದಂತಿಗಳಿಗೆ ತ್ರಿವಿಕ್ರಮ್ ಸ್ಪಷ್ಟನೆ ನಿಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ತ್ರಿವಿಕ್ರಮ್, ಆ ತರದ್ದು ಏನೂ ಆಗಿಲ್ಲ. ಪ್ರಪೋಸ್ ಮಾಡ್ಲೇ ಬೇಕು ಅಂತಾಗಿದ್ರೆ ನಾನು ಯಾಕೆ ತಲೆಕೆಡಿಸಿಕೊಳ್ಳಬೇಕಾಗಿತ್ತು.. ಲವ್ ಇರ್ತಿದ್ರೆ ನಾನಿನ್ನ ಇಷ್ಟ ಪಡ್ತಾ ಇದ್ದೀನಿ.. ನಾನಿನ್ನ ಮದುವೆ ಆಗ್ತಾ ಇದ್ದೀನಿ ಅಂತ ಅಲ್ಲೆ ಎಲ್ಲರ ಮುಂದೆನೇ ಹೇಳುರುತ್ತಿದ್ದೆ. ಲವ್ ಎಲ್ಲ ಏನೂ ಇರಲಿಲ್ಲ. ಒಳ್ಳೆ ಫ್ರೆಂಡ್ಶಿಪ್ ಇತ್ತಷ್ಟೆ. ಪ್ರಮೋಸ್ ಮಾಡಬೇಕು ಅಂತಾ ನನ್ನ ಮನಸ್ಸಲ್ಲಿ ಇರ್ತಿದ್ರೆ ನಾನ್ಯಾಕೆ ಅಲ್ಲಿ ಹೆದರಲಿ.. ಅಲ್ಲೇ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
Bhavya Gowda, BBK 11: ಬಿಗ್ ಬಾಸ್ ಮುಗಿದ ಬೆನ್ನಲ್ಲೇ ಬದಲಾಯಿತು ಭವ್ಯಾ ಗೌಡ ಅದೃಷ್ಟ: ಸಿಕ್ತು ಸರ್ಪ್ರೈಸ್ ಗಿಫ್ಟ್