ʻರಾಕಿಂಗ್ ಸ್ಟಾರ್ʼ ಯಶ್ ಅವರ ಶ್ರಮ, ವೃತ್ತಿಪರತೆ ಮತ್ತು ಅವರು ಸಾಧಿಸಿದ ಎತ್ತರದ ಬಗ್ಗೆ ನಟಿ ಮೇಘನಾ ರಾಜ್ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶ್ವವಾಣಿ ಟಿವಿಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿರುವ ಮೇಘನಾ ರಾಜ್ ಸರ್ಜಾ ಅವರು ಯಶ್ ಜೊತೆ 'ರಾಜಾಹುಲಿ' ಸಿನಿಮಾದಲ್ಲಿ ಅಭಿನಯಿಸಿದ್ದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಯಶ್ ಅವರ ಪರ್ಫೆಕ್ಷನ್ ಹಾಗೂ 'ರಾಮಾಯಣ' ಸಿನಿಮಾದಲ್ಲಿ ಅವರ ಲುಕ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
'ರಾಜಾಹುಲಿ' ಶೂಟಿಂಗ್ ನೆನಪಿಸಿಕೊಂಡ ಮೇಘನಾ
ಯಶ್ ಅವರ ಕೆಲಸದ ಮೇಲಿರುವ ಶ್ರದ್ಧೆಯ ಬಗ್ಗೆ ಮಾತನಾಡಿದ ಮೇಘನಾ ರಾಜ್, "ರಾಜಾಹುಲಿ ಸಿನಿಮಾದ 'ಫಾಲಿಂಗ್ ಇನ್ ಲವ್' ಹಾಡಿನ ಶೂಟಿಂಗ್ ವೇಳೆ ಯಶ್, ಚಿಕ್ಕಣ್ಣ ಎಲ್ಲರೂ ಇದ್ದರು. ಆ ಶಾಟ್‌ನಲ್ಲಿ ಯಶ್ ಹಾಕಿದ್ದ ಶರ್ಟ್ ಸರಿಯಾಗಿ ಐರನ್ ಆಗಿರಲಿಲ್ಲ. ಆ ಶರ್ಟ್ ಅಷ್ಟಾಗಿ ಹೈಲೈಟ್ ಆಗುತ್ತಿರಲಿಲ್ಲವಾದರೂ, ಯಶ್ ಶರ್ಟ್ ಐರನ್ ಆಗುವವರೆಗೂ ಕಾದಿದ್ದು, ಐರನ್ ಆದ ಶರ್ಟ್ ಧರಿಸಿಯೇ ಶಾಟ್ ಮುಗಿಸಿದರು. ಅವರಿಗೆ ಕೆಲಸ, ಸೀನ್, ಶಾಟ್ ಹೇಗೆ ಬರುತ್ತದೆ ಎಂಬುದಷ್ಟೇ ಚಿಂತೆ. ಪ್ರತಿಯೊಂದರಲ್ಲೂ ಪರ್ಫೆಕ್ಷನ್ ಹುಡುಕುವ ಅವರ ಕಮಿಟ್‌ಮೆಂಟ್ ನಿಜಕ್ಕೂ ಅದ್ಭುತ" ಎಂದು ಹೊಗಳಿದ್ದಾರೆ.
Yash Meets Shivanna: ರಾಕಿಭಾಯ್ ಮೀಟ್ಸ್ ಶಿವಣ್ಣ; ಶಿವ ರಾಜ್‌ಕುಮಾರ್ ಆರೋಗ್ಯ ವಿಚಾರಿಸಿದ ಯಶ್-ರಾಧಿಕಾ ಪಂಡಿತ್
ಕನ್ನಡ ಸಿನಿಮಾ ಗ್ಲೋಬಲ್ ಮಟ್ಟಕ್ಕೇರಿದೆ
ಬೆನಕ ಥಿಯೇಟರ್ ತಂಡದಲ್ಲಿದ್ದಾಗಿನಿಂದಲೂ ಯಶ್ ಪರಿಚಯವಿದೆ ಎಂದಿರುವ ಮೇಘನಾ, "ಯಶ್ ಯಾವಾಗಲೂ ದೊಡ್ಡ ಕನಸು ಕಾಣುತ್ತಾರೆ. ಆ ಕನಸನ್ನು ನನಸು ಮಾಡಿಕೊಳ್ಳುವ ಆಟಿಟ್ಯೂಡ್ ಅವರಲ್ಲಿದೆ. 'ಕೆಜಿಎಫ್' ಮೂಲಕ ಕನ್ನಡ ಸಿನಿಮಾ ಪ್ಯಾನ್-ಇಂಡಿಯಾ ಮಟ್ಟಕ್ಕೆ ತಲುಪಿದರೆ, ಈಗ 'ಟಾಕ್ಸಿಕ್' ಮೂಲಕ ಗ್ಲೋಬಲ್ ಮಟ್ಟಕ್ಕೆ ತಲುಪುತ್ತಿದೆ. ಒಬ್ಬ ಕನ್ನಡತಿಯಾಗಿ ನನಗೆ ಇದು ಅತ್ಯಂತ ಹೆಮ್ಮೆಯ ವಿಷಯ" ಎಂದಿದ್ದಾರೆ.
'ರಾಮಾಯಣ ಟ್ರೈಲರ್ ನೋಡಿದ ತಕ್ಷಣ ರಾಧಿಕಾಗೆ ಕಾಲ್ ಮಾಡಿದೆ!'
Ramayana: 'ರಾಮಾಯಣ'ದಲ್ಲಿ ನಟಿಸಲು ನೂರಾರು ಕೋಟಿ ರೂ. ಸಂಭಾವನೆ ಪಡೆದ ಯಶ್-ರಣಬೀರ್ ಕಪೂರ್
'ರಾಮಾಯಣ' ನೋಡಿ ರಾಧಿಕಾಗೆ ಕರೆ ಮಾಡಿದ್ದ ಮೇಘನಾ!
ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ಟ್ರೇಲರ್ ಹಾಗೂ ಅದರಲ್ಲಿ ಯಶ್ ಅವರ ಲುಕ್ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ ರಾಜ್, "ರಾಮಾಯಣ ಟ್ರೇಲರ್ ನೋಡಿದ ಮೇಲೆ ನಾನು ರಾಧಿಕಾಗೆ ಕರೆ ಮಾಡಿ, ಇದು 'ರಾಮಾಯಣ' ಅಲ್ಲ, 'ರಾವಣಾಯಣ' ಆಗಿದೆ ಎಂದು ಹೇಳಿದೆ. ನಮ್ಮವರನ್ನು ಆ ಮಟ್ಟದ ದೊಡ್ಡ ಸ್ಕೇಲ್‌ನಲ್ಲಿ ಮತ್ತು ಅಷ್ಟೊಂದು ಅಬ್ಬರಿಸುವುದನ್ನು ನೋಡಿದಾಗ ಕನ್ನಡಿಗರಾಗಿ ನಮಗೆಲ್ಲರಿಗೂ ತುಂಬಾ ಹೆಮ್ಮೆ ಎನಿಸುತ್ತದೆ" ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.