ಟಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಎನ್‌ಟಿಆರ್-ನೀಲ್ ಕೂಡ ಒಂದು. ಈ ಚಿತ್ರದ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಯಾವಾಗ ಈ ಚಿತ್ರ ತೆರೆಗೆ ಬರಬಹುದು ಎಂಬ ಬಗ್ಗೆ ಚಿತ್ರತಂಡಕ್ಕೇ ಸದ್ಯ ಸ್ಪಷ್ಟತೆ ಇಲ್ಲ. ಈ ನಡುವೆ ಪ್ರಶಾಂತ್ ನೀಲ್ ಮತ್ತು ಎನ್‌ಟಿಆರ್ ಕಾಂಬಿನೇಷನ್‌ನ ಈ ಸಿನಿಮಾದಲ್ಲಿ ಮಲಯಾಳಂ ನಟ ಟೊವಿನೋ ಥಾಮಸ್ ಬಣ್ಣ ಹಚ್ಚಲಿದ್ದಾರೆ ಎಂಬ ಟಾಕ್ ಇತ್ತು. ಆದರೆ ಅದು ನಿಜವಲ್ಲ ಎಂಬುದನ್ನು ಸ್ವತಃ ಟೊವಿನೋ ಥಾಮಸ್ ತಿಳಿಸಿದ್ದಾರೆ
ಈ ಪ್ರಾಜೆಕ್ಟ್‌ನಿಂದ ಹೊರಬಂದ ಟೊವಿನೋ
ಜ್ಯೂನಿಯರ್ ಎನ್ ಟಿ ಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಈ ಹೊಸ ಸಿನಿಮಾದಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ನಟ ಟೊವಿನೋ ಥಾಮಸ್ ಅವರು ವಿಲನ್ ಆಗಿ ನಟಿಸಿಬೇಕಿತ್ತು. ಜೋರ್ಡಾನ್‌ನಲ್ಲಿ ಎನ್‌ಟಿಆರ್ ಮತ್ತು ಟೊವಿನೋ ನಡುವೆ ಭರ್ಜರಿ ಸಾಹಸ ಸನ್ನಿವೇಶಗಳನ್ನು ಕೂಡ ಪ್ರಶಾಂತ್ ನೀಲ್ ಪ್ಲ್ಯಾನ್ ಮಾಡಿಕೊಂಡಿದ್ದರಂತೆ. ಆದರೆ ಟೊವಿನೋ ಈಗ ಆ ಪ್ರಾಜೆಕ್ಟ್‌ನಿಂದಲೇ ಹೊರಬಂದಿದ್ದಾರೆ.
Rukmini Vasanth: ಜೂ. ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿ; ನಿರ್ಮಾಪಕನಿಂದ ಘೋಷಣೆ
ಟೊವಿನೋಗೆ ಕಾಲ್‌ಶೀಟ್ ಸಮಸ್ಯೆ ಆಯ್ತಾ?
ಸಿಕ್ಕಾಪಟ್ಟೆ ಬ್ಯುಸಿ ಇರುವ ಟೊವಿನೋ, ಆ ಕಾರಣಕ್ಕೆ ಈ ಚಿತ್ರದಿಂದ ಹೊರಗೆಬಂದಿದ್ದಾರಂತೆ. ಅದರ ಜೊತೆಗೆ ತೆಲುಗು ಸಿನಿಮಾಗಳ ಚಿತ್ರೀಕರಣದ ಶೈಲಿ ಮತ್ತು ಮಲಯಾಳಂ ಚಿತ್ರರಂಗದ ಶೈಲಿಯ ನಡುವಿನ ವ್ಯತ್ಯಾಸ ಅವರನ್ನು ಮತ್ತಷ್ಟು ಕಾಡಿದೆ. ಈ ಸಿನಿಮಾದಿಂದ ಹೊರಗೆ ಬರಲು ಅದೇ ಮುಖ್ಯ ಕಾರಣ ಎನ್ನಲಾಗಿದೆ. ಮಲಯಾಳಂನಲ್ಲಿ ಮೂರು ತಿಂಗಳೊಳಗೆ ಒಂದೇ ಹಂತದಲ್ಲಿ ಒಂದು ಸಿನಿಮಾದ ಶೂಟಿಂಗ್ ಮುಗಿಯುತ್ತದೆ. ಆದರೆ ಟಾಲಿವುಡ್‌ನಲ್ಲಿ ಒಂದು ಸಿನಿಮಾಗೆ ವರ್ಷಗಟ್ಟಲೆ ಕಾಲ್‌ಶೀಟ್ ನೀಡಬೇಕಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟೊವಿನೋ ಥಾಮಸ್ ಹೇಳಿದ್ದೇನು?
ಈ ಕುರಿತು ಈಚೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಟೊವಿನೋ ಥಾಮಸ್, "ಆ ಚಿತ್ರಕ್ಕೆ ಡೇಟ್ಸ್ ಹೊಂದಿಸುವುದು ಕಷ್ಟ. ಆದ್ದರಿಂದ ನಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ. ನನಗೆ ತೆಲುಗು ಸಿನಿಮಾಗಳಲ್ಲಿ ನಟಿಸುವ ಆಸೆಯಿದೆ, ಆದರೆ ಆ ಸಿನಿಮಾ ತಂಡಗಳ ಕೆಲಸದ ಸಂಸ್ಕೃತಿ ಬೇರೆ ರೀತಿಯಲ್ಲಿದೆ. ತೆಲುಗು ನಿರ್ದೇಶಕರು ಹಲವು ಹಂತಗಳಲ್ಲಿ ಶೂಟಿಂಗ್ ಮಾಡುತ್ತಾರೆ. ಆದರೆ ಮಲಯಾಳಂನಲ್ಲಿ ನಾವು ಒಂದೇ ಹಂತದಲ್ಲಿ ಕೆಲಸ ಮಾಡಿಮುಗಿಸುತ್ತೇವೆ" ಎಂದು ಹೇಳಿಕೊಂಡಿದ್ದಾರೆ.
NTRNeel: ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕಾಗಿ ಸಿದ್ಧವಾಗುತ್ತಿದೆ ಕಾರ್ಖಾನೆಯ ಬೃಹತ್ ಸೆಟ್
"ಒಂದೇ ಸಮಯಕ್ಕೆ ಹಲವು ಸಿನಿಮಾಗಳನ್ನು ಒಪ್ಪಿಕೊಳ್ಳುವುದು ನನಗೆ ಇಷ್ಟವಿಲ್ಲ. ಒಂದನ್ನು ಮುಗಿಸಿ ಮತ್ತೊಂದಕ್ಕೆ ಹೋಗುವುದು ನನ್ನ ಕೆಲಸದ ಪದ್ಧತಿ. ತೆಲುಗು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಮೂಡಿಬರುತ್ತವೆ. ನಾನು ಒಂದು ತೆಲುಗು ಸಿನಿಮಾಕ್ಕೆ 1 ವರ್ಷ ನೀಡಿದರೆ, ಅದು ನನ್ನ ಮಲಯಾಳಂ ಚಿತ್ರಗಳ ಮೇಲೆ ಪ್ರಭಾವ ಬೀರುತ್ತದೆ" ಎಂದು ನೇರವಾಗಿ ಹೇಳಿದ್ದಾರೆ ಟೊವಿನೋ.
ಟೊವಿನೋ ಅವರ ಈ ಮಾತುಗಳನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಒಂದೇ ಚಿತ್ರಕ್ಕೆ ಸಾಕಷ್ಟು ಸಮಯ ವ್ಯಯಿಸುವ ಬದಲು, ಆ ಸಮಯದಲ್ಲಿ ಮೂರ್ನಾಲ್ಕು ಸಿನಿಮಾಗಳನ್ನು ಮಾಡಿದರೆ, ಚಿತ್ರರಂಗವು ಬೆಳೆಯುತ್ತದೆ, ಕಲಾವಿದರ ಕಾಲ್‌ಶೀಟ್ ಕೂಡ ಉಳಿಯುತ್ತದೆ. ದೊಡ್ಡ ಸಿನಿಮಾದ ಆಫರ್ ಸಿಕ್ಕರೂ ಈ ರೀತಿ ತಮ್ಮ ನಿಲುವಿಗೆ ಬದ್ಧರಾಗಿರುವ ಟೊವಿನೋ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ.