ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Most Expensive Film: ಹಾಲಿವುಡ್‌ನಲ್ಲಿ ತಯಾರಾಗ್ತಿದೆ ವಿಶ್ವದ ಅತ್ಯಂತ ದುಬಾರಿ ಸಿನಿಮಾ; ಇದರ ಬಜೆಟ್‌ ನಿಮ್ಮ ಊಹೆಗೂ ಮೀರಿದ್ದು

ಹಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್ ದೊಡ್ಡ ಬಜೆಟ್ ಸಿನಿಮಾಗಳಿಗೆ ಹೂಡಿಕೆ ಮಾಡುತ್ತಿದೆ. ಇದೀಗ ವಿಶ್ವದಲ್ಲಿಯೇ ಯಾರು ಮಾಡಿರದಷ್ಟು ವೆಚ್ಚದಲ್ಲಿ ಸಿನಿಮಾ ಮಾಡುವ ಸಾಹಸಕ್ಕೆ ಮಾರ್ವೆಲ್ ಸಿನಿಮಾ ನಿರ್ಮಾಣ ಸಂಸ್ಥೆ ಕೈ ಹಾಕಿದೆ. ಮಾರ್ವೆಲ್​ನ ಬಲು ಜನಪ್ರಿಯ ಸಿನಿಮಾ ಸರಣಿ ಗಳಾದ ಅವೇಂಜರ್ಸ್‌ನ ಹೊಸ ಆವೃತ್ತಿ ಜಾರಿಗೆ ತರಲು ಮುಂದಾಗುತ್ತಿದೆ.

9 ಸಾವಿರ ಕೋಟಿ ರೂ. ವೆಚ್ಚದಲ್ಲಿ ರೆಡಿಯಾಗ್ತಿದೆ ಹೈ ಬಜೆಟ್ ಸಿನಿಮಾ

World's most expensive film

Profile Pushpa Kumari Jun 4, 2025 9:37 PM

ನವದೆಹಲಿ: ಇತ್ತೀಚಿನ ವರ್ಷದಲ್ಲಿ ಹೈ ಬಜೆಟ್ ಸಿನಿಮಾಗಳು ತೆರೆ ಕಾಣುವ ಪ್ರಮಾಣ ಹೆಚ್ಚಾಗುತ್ತಿದೆ. ವಿಶ್ವದಾದ್ಯಂತ ಉತ್ತಮ ಕಥೆ ಉಳ್ಳ ಸಿನಿಮಾಕ್ಕೆ ಕೋಟಿ ಕೋಟಿ ರೂಪಾಯಿ ಹೂಡಿಕೆ ಮಾಡಿ ಬಳಿಕ ಲಾಭ ನಿರೀಕ್ಷೆ  ಮಾಡುವುದು ಸಾಮಾನ್ಯ ಎಂಬಂತಾಗಿದೆ. ಅಂತೆಯೇ  ಹಾಲಿವುಡ್ ಸಿನಿಮಾಗಳನ್ನು ಅಧಿಕ ಬಜೆಟ್‌ನಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗುತ್ತಿದೆ.  1990ರ ದಶಕದಲ್ಲಿ ʼಟೈಟಾನಿಕ್ʼ ಸಿನಿಮಾಕ್ಕೆ ಸುಮಾರು 200 ಮಿಲಿಯನ್ ಡಾಲರ್‌ ಹೂಡಿಕೆ ಮಾಡಲಾಗಿತ್ತು. ಜೇಮ್ಸ್ ಕೆಮರಾನ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದುವರೆಗೆ ಇದನ್ನು ಪ್ರಪಂಚದ ದುಬಾರಿ ವೆಚ್ಚದ ಸಿನಿಮಾ ಎಂದು ಕರೆಯಲಾಗುತ್ತಿತ್ತು. ಆದರೆ ಹಾಲಿವುಡ್‌ನ ಮತ್ತೊಂದು  ಸಿನಿಮಾಕ್ಕೆ ಸುಮಾರು  250 ಮಿಲಿಯನ್ ಡಾಲರ್‌ ಖರ್ಚು ಮಾಡಿ ಇಡೀ ಸಿನಿಮಾ ತಯಾರಾಗಲು ಬರೋಬ್ಬರಿ 1 ಬಿಲಿಯನ್ ಡಾಲರ್‌ (ಸುಮಾರು 9 ಸಾವಿರ ಕೋಟಿ ರೂ.) ಹೂಡಿಕೆ ಮಾಡಲಾಗಿದೆ ಎಂದರೆ ನಿಮಗೂ ಆಶ್ಚರ್ಯವಾಗಬಹುದು (Most Expensive Film). ಹಾಗಾದರೆ ಆ ಸಿನಿಮಾ ಯಾವುದು?

ಹಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ ಮಾರ್ವೆಲ್ ಸಿನಿಮ್ಯಾಟಿಕ್ (Marvel Cinematic) ಯೂನಿವರ್ಸ್ ದೊಡ್ಡ ಬಜೆಟ್ ಸಿನಿಮಾಗಳಿಗೆ ಹೂಡಿಕೆ ಮಾಡುತ್ತಲೇ ಗಮನ ಸೆಳೆದಿದೆ. ಇದೀಗ ವಿಶ್ವದಲ್ಲಿಯೇ ಯಾರು ಮಾಡಿರದಷ್ಟು ವೆಚ್ಚದಲ್ಲಿ ಸಿನಿಮಾ ಮಾಡುವ ದೊಡ್ಡ ಸಾಹಸಕ್ಕೆ ಮಾರ್ವೆಲ್ ಸಿನಿಮಾ ನಿರ್ಮಾಣ ಸಂಸ್ಥೆ ಕೈ ಹಾಕಿದೆ. ಮಾರ್ವೆಲ್​ನ ಬಲು ಜನಪ್ರಿಯ ಸಿನಿಮಾ ಸರಣಿಗಳಾದ ʼಅವೇಂಜರ್ಸ್‌ʼನ ಹೊಸ  ಆವೃತ್ತಿ ಜಾರಿಗೆ ತರಲು ಮುಂದಾಗುತ್ತಿದೆ‌. ʼಅವೇಂಜರ್ಸ್: ಡೂಮ್ಸ್​ಡೇʼ ಹೆಸರಿನ ಸಿನಿಮಾ ಮಾಡಲು ಮಾರ್ವೆಲ್ ಸಂಸ್ಥೆ ಹೊರಟಿದ್ದು ಇದು ವಿಶ್ವದ ಹೈ ಬಜೆಟ್​  ಸಿನಿಮಾ ಎಂಬ ಖ್ಯಾತಿ ಪಡೆಯಲಿದೆ.

ಕೆಲ ವಾರಗಳ ಹಿಂದಷ್ಟೆ ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್ ʼಅವೇಂಜರ್ಸ್: ಡೂಮ್ಸ್​ ಡೇʼ ಸಿನಿಮಾ ಮಾಡುವ ಬಗ್ಗೆ ಮಾಹಿತಿ ಹೊರ ಹಾಕಿದೆ. ಸುಮಾರು 1 ಬಿಲಿಯನ್ ಡಾಲರ್ ಸಿನಿಮಾಕ್ಕಾಗಿ ಖರ್ಚು ಮಾಡಲಾಗುತ್ತಿದೆ ಎಂಬ ಮಾಹಿತಿಯೂ ಇತ್ತೀಚೆಗಷ್ಟೇ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಅಂದರೆ ಭಾರತದ ಕರೆನ್ಸಿ ಲೆಕ್ಕದಲ್ಲಿ 9 ಸಾವಿರ ಕೋಟಿ ರೂಪಾಯಿ ಹಣವನ್ನು ಈ ಸಿನಿಮಾಕ್ಕಾಗಿ ಖರ್ಚು ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಸಿನಿ ಪ್ರಿಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

2015ರಲ್ಲಿ ಹಾಲಿವುಡ್ ನ ಸ್ಟಾರ್ ವಾರ್ಸ್  ಸಿನೆಮಾ ರಿಲೀಸ್ ಆಗುವ ಮೂಲಕ ಇದು ವಿಶ್ವದ ಅತ್ಯಂತ ದುಬಾರಿ ಬಜೆಟ್​ನ ಸಿನಿಮಾ ಎಂದು ಪ್ರಸಿದ್ಧಿ ಪಡೆದಿತ್ತು. ಆದರೆ ʼಅವೇಂಜರ್ಸ್: ಡೂಮ್ಸ್​ಡೇʼ ಸಿನಿಮಾ ಆ ದಾಖಲೆ ಮುರಿಯುವ ಪ್ರಯತ್ನದೆಡೆಗೆ ಸಾಗುತ್ತಿದೆ. ಈ  ಸಿನಿಮಾದ ಪ್ರಿ ಪ್ರೊಡಕ್ಷನ್​ಗೆ ಸುಮಾರು 100 ಕೋಟಿ ರೂಪಾಯಿ ಖರ್ಚಾಗಲಿದೆಯಂತೆ. ಇನ್ನು ಈ ಸಿನಿಮಾದಲ್ಲಿ ಬಹುದೊಡ್ಡ ತಾರಾಗಣ ಇರಲಿದ್ದು ಈ ಸಿನಿಮಾದಲ್ಲಿ ನಟಿಸುವ ಕಲಾವಿದರಿಗಾಗಿಯೇ ಸುಮಾರು 250 ಮಿಲಿಯನ್ ಡಾಲರ್‌ ಖರ್ಚಾಗಲಿದೆಯಂತೆ.

ಇದನ್ನು ಓದಿ: Khela Movie: ವಿಹಾನ್ ಪ್ರಭಂಜನ್ ಅಭಿನಯದ ʼಖೇಲಾʼ ಚಿತ್ರದ ʼಪುಣ್ಯಾತ್ ಗಿತ್ತೀʼ ಹಾಡು ರಿಲೀಸ್‌

ಖ್ಯಾತ ಹಾಲಿವುಡ್ ನಟ ರಾಬರ್ಟ್ ಡೌನಿ ಜೂನಿಯರ್ ವಿಲನ್ ಪಾತ್ರದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ  ಹೆಮ್ಸ್‌ವರ್ತ್, ವನೆಸ್ಸಾ ಕಿರ್ಬಿ, ಆಂಥೋನಿ ಮ್ಯಾಕಿ, ಸೆಬಾಸ್ಟಿಯನ್ ಸ್ಟಾನ್, ಲೆಟಿಟಿಯಾ ರೈಟ್, ಪಾಲ್ ರುಡ್, ವ್ಯಾಟ್ ರಸೆಲ್,  ಡ್ಯಾನಿ ರಾಮಿರೆಜ್, ಜೋಸೆಫ್ ಕ್ವಿನ್, ಡೇವಿಡ್ ಹಾರ್ಬರ್, ವಿನ್ಸ್ಟನ್ ಡ್ಯೂಕ್, ಹನ್ನಾ ಜಾನ್-ಕಾಮೆನ್, ಟಾಮ್ ಹಿಡಲ್‌ಸ್ಟನ್, ಪ್ಯಾಟ್ರಿಕ್ ಸ್ಟೀವರ್ಟ್, ಇಯಾನ್ ಮೆಕೆಲೆನ್, ಅಲನ್ ಕಮ್ಮಿಂಗ್, ಟೆನೋಚ್ ಹುಯೆರ್ಟಾ ಮೆಜಿಯಾ, ಎಬಾನ್ ಮಾಸ್-ಬಚ್ರಾಚ್, ಸಿಮು ಲಿಯು, ಫ್ಲಾರೆನ್ಸ್ ಪಗ್, ಕೆಲ್ಸಿ ಗ್ರಾಮರ್, ಲೂಯಿಸ್ ಪುಲ್‌ಮನ್, ರೆಬೆಕ್ಕಾ ರೊಮಿಜ್ನ್, ಜೇಮ್ಸ್ ಮಾರ್ಸ್ಡೆನ್, ಚಾನಿಂಗ್ ಟಾಟಮ್, ಪೆಡ್ರೊ ಪ್ಯಾಸ್ಕಲ್  ಸೇರಿದಂತೆ ಹಲವು ಟಾಪ್ ಸೆಲೆಬ್ರಿಟಿಗಳು  ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಬಜೆಟ್ ಕೂಡ ನಿರೀಕ್ಷೆಗೆ ಮೀರಿ ಸಾಗುತ್ತಿದೆ.  ಸಿನಿಮಾದ ನಿರ್ಮಾಣಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ  ಸುಮಾರು 700 ಮಿಲಿಯನ್ ಡಾಲರ್ (6 ಸಾವಿರ ಕೋಟಿ ರೂ.) ವೆಚ್ಚವಾಗುತ್ತಿದೆ. ಹಾಗೂ  ಪ್ರಚಾರ ಕಾರ್ಯಗಳಿಗೆ 800 ಕೋಟಿ ರೂ. ಖರ್ಚಾಗಲಿದೆ ಎಂದು ತಿಳಿದು ಬಂದಿದ್ದು ಇದು ವಿಶ್ವದ ಅತೀ ದೊಡ್ಡ ಬಜೆಟ್‌ನ ಸಿನಿಮಾವಾಗಲಿದೆ. ʼಅವೇಂಜರ್ಸ್: ಡೂಮ್ಸ್​ ಡೇʼ 2026ರ ಡಿಸೆಂಬರ್ 18ರಂದು ತೆರೆ ಕಾಣಲಿದೆ.