Actor Yash: ʼರಾಮಾಯಣʼ ಶೂಟಿಂಗ್‌ಗಾಗಿ ಮುಂಬೈಗೆ ಬಂದಿಳಿದ ಯಶ್; ಸ್ಟೈಲಿಶ್ ಎಂಟ್ರಿಗೆ ಫ್ಯಾನ್ಸ್ ಫಿದಾ
Ramayana Movie: ಘೋಷಣೆಯಾದಾಗಿನಿಂದ ಸದಾ ಸುದ್ದಿಯಲ್ಲಿರುವ ಚಿತ್ರ ಬಾಲಿವುಡ್‌ನ ರಾಮಾಯಣ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದ ಮೂಲಕ ಯಶ್ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಚಿತ್ರದಲ್ಲಿ ರಾವಣನಾಗಿ ಅವರು ಕಾಣಿಸಿಕೊಂಡಿದ್ದು, ಶೂಟಿಂಗ್‌ಗಾಗಿ ಮುಂಬೈಗೆ ಬಂದಿಳಿದಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ಯಶ್.

ಮುಂಬೈ: ಸಿನಿಪ್ರಿಯರು ಬಹು ದಿನಗಳಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ದೇಶಾದ್ಯಂತ ಅತ್ಯಂತ ಕುತೂಹಲ ಕೆರಳಿಸಿದ ಬಾಲಿವುಡ್‌ನ ʼರಾಮಾಯಣʼ (Ramayana Movie) ಚಿತ್ರದ ಅಪ್‌ಡೇಟ್‌ಗಾಗಿ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಗುಡ್‌ನ್ಯೂಸ್ ಸಿಕ್ಕಿದೆ. ಜನಪ್ರಿಯ ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಮೂಲಕ ಯಶ್ ಬಾಲಿವುಡ್‌ಗೆ ಕಾಲಿಡುತ್ತಿದ್ದು, ಶೂಟಿಂಗ್ ನಿಮಿತ್ತ ಮುಂಬೈಗೆ ಬಂದಿಳಿದಿದ್ದಾರೆ. ಈ ವಾರದಿಂದಲೇ ಚಿತ್ರೀಕರಣದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಸದ್ಯ ಅವರು ಮುಂಬೈಗೆ ಬಂದಿಳಿದಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಪ್ಪು ಟೀ ಶರ್ಟ್-ಜೀನ್ಸ್ ತೊಟ್ಟಿದ್ದ ಯಶ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ನೆರೆದಿರುವ ಅಭಿಮಾನಿಗಳಿಗೆ ಕೈ ಮುಗಿದು ವಾಹನ ಏರುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಚಿತ್ರೀಕರಣ ಆರಂಭಕ್ಕೂ ಮುನ್ನ ಮಧ್ಯ ಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದ ಅವರು ನೇರ ಮುಂಬೈಗೆ ಬಂದಿಳಿದರು.
ವೈರಲ್ ವಿಡಿಯೊ ಇಲ್ಲಿದೆ:
ಈಗಾಗಲೇ ನಿರೀಕ್ಷೆ ಮೂಡಿಸಿರುವ ಮತ್ತೊಂದು ಚಿತ್ರ ʼಟಾಕ್ಸಿಕ್ʼನ ಶೂಟಿಂಗ್ ಪೂರ್ತಿಗೊಳಿಸಿರುವ ಯಶ್ ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗುವ ಮುನ್ನ ʼರಾಮಾಯಣʼ ಚಿತ್ರದಲ್ಲಿನ ಒಂದಷ್ಟು ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿರುವ ʼಟಾಕ್ಸಿಕ್ʼ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತಯಾರಾಗುತ್ತಿದೆ. ಹಾಲಿವುಡ್ ಶೈಲಿಯ ಈ ಚಿತ್ರ ಬಹುಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗುತ್ತಿದ್ದು, ಡ್ರಗ್ಸ್ ಮಾಫಿಯಾದ ಸುತ್ತ ಅದರ ಕಥೆ ಸಾಗಲಿದೆ ಎನ್ನುವ ಸೂಚನೆ ಈಗಾಗಲೇ ಹೊರ ಬಿದ್ದಿರುವ ಟೀಸರ್ ಮೂಲಕ ಸಿಕ್ಕಿದೆ.
ಈ ಸುದ್ದಿಯನ್ನೂ ಓದಿ: Actor Yash: ʼರಾವಣʼನಾಗುವ ಮುನ್ನ ಉಜ್ಜಯಿನಿಯ ಮಹಾಕಾಲನ ದರ್ಶನ ಪಡೆದ ರಾಕಿಂಗ್ ಸ್ಟಾರ್ ಯಶ್
ರಾವಣನಾಗಿ ಯಶ್
ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದಿರುವ ಯಶ್‌ಗೆ ಈಗ ಬಹು ಬೇಡಿಕೆ ಇದೆ. ಅವರು ಅಳೆದೂ ತೂಗಿ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದು, ಆ ಪೈಕಿ ಬಾಲಿವುಡ್‌ನ ʼರಾಮಾಯಣʼವೂ ಒಂದು. ರಾವಣನ ಪಾತ್ರಕ್ಕೆ ಯಶ್ ಬಣ್ಣ ಹಚ್ಚುತ್ತಿದ್ದು, ಪವರ್‌ಫುಲ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ʼರಾಮಾಯಣʼದಲ್ಲಿ ರಾವಣ ಪಾತ್ರಕ್ಕೆ ತನ್ನದೇ ಆದ ಮಹತ್ವವಿದೆ. ವಿವಿಧ ಗುಣಗಳ ಸಂಗಮವಾಗಿರುವ ಈ ಪಾತ್ರದಲ್ಲಿ ಅಭಿನಯಕ್ಕೆ ಸಾಕಷ್ಟು ಅವಕಾಶವಿರುವುದರಿಂದ ಯಶ್ ಇದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರ ಕೂಡ ಅದ್ಧೂರಿಯಾಗಿಯೇ ನಿರ್ಮಾಣವಾಗಲಿದೆ. ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಿರುವ ಅದ್ಭುತ ಮಹಾಕಾವ್ಯ ʼರಾಮಾಯಣʼವನ್ನು ನಿತೇಶ್ ತೆರೆಮೇಲೆ ಪರಿಣಾಮಕಾರಿಯಾಗಿ ಚಿತ್ರಿಸಲಿದ್ದಾರೆ.
1 ವರ್ಷದಲ್ಲಿ 2 ಬಹು ನಿರೀಕ್ಷಿತ ಚಿತ್ರ
ʼರಾಮಾಯಣʼ 2 ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗ 2026ರ ದೀಪಾವಳಿಗೆ ಮತ್ತು 2ನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ. ವಿಶೇಷ ಎಂದರೆ 2026ರ ಮಾ. 19ರಂದು ʼಟಾಕ್ಸಿಕ್ʼ ಬಿಡುಗಡೆಯಾಗುತ್ತಿದೆ. ಅದಾಗಿ 8 ತಿಂಳ ಅಂತರದಲ್ಲಿ ʼರಾಮಾಯಣ ಭಾಗ 1ʼ ತೆರೆಗೆ ಬರಲಿದೆ. ಇವೆರಡೂ ಜಾಗತಿಕವಾಗಿ ಗಮನ ಸೆಳೆದ ಚಿತ್ರಗಳು. ಹೀಗಾಗಿ ಮುಂದಿನ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಯಶ್ ಅವರದ್ದೇ ಹವಾ ಎಂದು ಫ್ಯಾನ್ಸ್ ಭವಿಷ್ಯ ನುಡಿದ್ದಾರೆ. ವಿಶೇಷ ಎಂದರೆ ಈ ಎರಡು ಚಿತ್ರಗಳು ವಿಭಿನ್ನ ಜಾನರ್‌ನವು. ʼಟಾಕ್ಸಿಕ್ʼ ಗ್ಯಾಂಗ್‌ಸ್ಟರ್ ಕಥೆಯನ್ನು ಹೊಂದಿದರೆ, ʼರಾಮಾಯಣʼ ಪೌರಾಣಿಕ ಕಥೆ. ಎರಡೂ ಚಿತ್ರಗಳಲ್ಲಿ ಹೈವೋಲ್ಟೇಜ್ ಆ್ಯಕ್ಷನ್ ದೃಶ್ಯಗಳು ಪ್ರೇಕ್ಷಕರ ಮನರಂಜಿಸಲಿದೆ.