ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Yash: ʻಹಾಲಿವುಡ್‌ ರೇಂಜ್‌, ಕಾಂಡೋಮ್‌ ಜಾಹೀರಾತು, ಸಿಇಓ ವಾಪಸ್‌ ಬಂದ್ರು...ʼ; ʻಟಾಕ್ಸಿಕ್‌ʼ ಟೀಸರ್‌ಗೆ ಸಿಕ್ತಿರುವ ರಿಯಾಕ್ಷನ್ಸ್‌ ಒಂದೊಂದಲ್ಲ!

Toxic Teaser Reaction: ಟಾಕ್ಸಿಕ್ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ ಪಡೆದಿದ್ದರೂ, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಟ್ಯಾಗ್‌ಲೈನ್ 'ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಎಂಬುದಕ್ಕೆ ತಕ್ಕಂತೆ ಟೀಸರ್ ಬೋಲ್ಡ್ ಆಗಿದೆ. ಗೀತು ಮೋಹನ್‌ದಾಸ್ ಅವರ ಕಥೆ ಹೇಳುವ ಶೈಲಿ ಸ್ಯಾಂಡಲ್‌ವುಡ್‌ಗೆ ಹೊಸದಾಗಿದ್ದರೂ, ಮಡಿವಂತ ಪ್ರೇಕ್ಷಕರಿಗೆ ಇದು ನುಂಗಲಾರದ ತುತ್ತಾಗಿದೆ.

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರ ಹೊಸ ಸಿನಿಮಾ Toxic: A Fairy Tale for Grown-Ups ಟೀಸರ್‌ ರಿಲೀಸ್‌ ಆಗಿದೆ. ಇದೊಂದು ಪ್ಯಾನ್‌ ವರ್ಲ್ಡ್‌ ಸಿನಿಮಾ ಆಗಿದ್ದು, ಇದರಲ್ಲಿ ಯಶ್‌ ಯಾವ ರೀತಿ ಕಾಣಿಸಿಕೊಳ್ಳಬಹುದು ಎಂಬ ಸಹಜಕೂತುಹಲ ಅಭಿಮಾನಿಗಳಲ್ಲಿ ಇತ್ತು. ಸದ್ಯ ರಿಲೀಸ್‌ ಆಗಿರುವ ಟೀಸರ್‌ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾಪಲ್ಟಾ ಮಾಡಿವೆ. ಅದರಲ್ಲೂ ಯುವತಿಯೊಂದಿಗೆ ಯಶ್‌ ಅವರು ಕಾರಿನಲ್ಲಿ ರೊಮ್ಯಾನ್ಸ್‌ ಮಾಡುವಂತಹ ಸೀನ್‌ ಸದ್ಯದ ಹಾಟ್‌ ಟಾಪಿಕ್!‌ ಸೋಶಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ತರಹೇವಾರಿ ಮಾತುಗಳು ಕೇಳಿಬಂದಿವೆ.

ಈ ಬಾರಿ ವರ್ಲ್ಡ್‌ ಬಾಕ್ಸ್‌ ಆಫೀಸ್‌ ಸಿಇಓ

ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ರಿಲೀಸ್‌ ಆದಾಗ, ಯಶ್‌ ಅವರನ್ನು ಇಂಡಿಯನ್‌ ಬಾಕ್ಸ್‌ ಆಫೀಸ್‌ ಸಿಇಓ ಎಂದು ಕರೆಯಲಾಗಿತ್ತು. ಸದ್ಯ ಟಾಕ್ಸಿಕ್‌ ಟೀಸರ್‌ ನೋಡಿದವರು ಯಶ್‌ ಅವರನ್ನು ವರ್ಲ್ಡ್‌ ಬಾಕ್ಸ್‌ ಆಫೀಸ್‌ ಸಿಇಓ ಅಂತ ಕರೆಯುತ್ತಿದ್ದಾರೆ. ಈ ಬಾರಿ ಪ್ಯಾನ್‌ ವರ್ಲ್ಡ್‌ ಮಟ್ಟದಲ್ಲಿ ರಾಕಿ ಭಾಯ್‌ ಸದ್ದು ಮಾಡೋದು ಗ್ಯಾರಂಟಿ ಎಂಬ ಮಾತುಗಳು ಕೇಳಿಬಂದಿವೆ.

Toxic Teaser: ಹಸಿಬಿಸಿ ದೃಶ್ಯಗಳಿಂದಲೇ ಸದ್ದು ಮಾಡಿದ ʻಟಾಕ್ಸಿಕ್‌ʼ ಟೀಸರ್‌; ಯಶ್‌ ಹೊಸ ಸಿನಿಮಾದ ಸ್ಪೆಷಾಲಿಟಿಗಳಿವು!

ಹಸಿ ಬಿಸಿ ಸೀನ್‌ಗಳದ್ದೇ ಸದ್ದು!

"ಹಾಲಿವುಡ್ ರೇಂಜ್ ಸಿನಿಮಾ ಅಂದ್ರೆ ಅಂಥ ಸೀನ್ಸ್ ಇರ್ಲೇಬೇಕಾ? ಗುಣಮಟ್ಟ ಚೆನ್ನಾಗಿದೆ ಆದರೆ ಭಾರತೀಯ, ವಿಶೇಷವಾಗಿ ಕನ್ನಡ ಫ್ಯಾಮಿಲಿ ಆಡಿಯನ್ಸ್ ಗೆ ಹೆಂಗ್ ತೋರ್ಸೋದು ಇದನ್ನಾ? ಫ್ಯಾಮಿಲಿ ಆಡಿಯನ್ಸ್ ಇಲ್ಲದೆ ಇದು ದಾಖಲೆಗಳನ್ನು ಮಾಡಬಹುದು ಎಂದು ಹೇಳಬೇಡಿ. ಪ್ರತಿ ಅಪ್‌ಡೇಟ್‌ನಿಂದಲೂ ಭರವಸೆ ಕಳೆದುಕೊಳ್ಳುತ್ತಿದೆ. ಏನೇ ಆಗಲಿ ಯಶ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಕೆಲ ಫ್ಯಾನ್ಸ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಾಕ್ಸಿಕ್‌ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್‌



ಇದು ಕಾಂಡೋಮ್ ಜಾಹೀರಾತಿನಂತಿದೆ

"ಅಂತಹ ದೃಶ್ಯವನ್ನು ಚಿತ್ರದ ಟ್ರೇಲರ್‌ನಲ್ಲಿ ಸೇರಿಸಬಾರದಿತ್ತು. ಯಶ್ ಕೂಡ ತನ್ನ ಅಭಿಮಾನಿಗಳಲ್ಲಿ ಚಿಕ್ಕ ಮಕ್ಕಳೂ ಇದ್ದಾರೆ ಎಂಬುದನ್ನು ಪರಿಗಣಿಸಬೇಕಿತ್ತು. ಟಾಕ್ಸಿಕ್ ಟೀಸರ್ ಗ್ಯಾಂಗ್‌ಸ್ಟರ್ ಥೀಮ್ ಹೊಂದಿರುವ ಪೋ*ರ್ನ್ ಕ್ಲಿಪ್ ಆಗಿದೆ! ಇದು ಕಾಂಡೋಮ್ ಜಾಹೀರಾತಿನಂತೆ ಕಾಣುತ್ತಿದೆ" ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. ಫ್ಯಾಮಿಲಿ ಆಡಿಯೆನ್ಸ್‌ ಇದನ್ನು ಹೇಗೆ ಸಹಿಸಿಕೊಳ್ಳಬೇಕು ಎಂಬ ಪ್ರಶ್ನೆ ಕೂಡ ಮೂಡಿದೆ.

ಟಾಕ್ಸಿಕ್‌ ಟೀಸರ್‌ ರಿವ್ಯೂ



ಹಾಲಿವುಡ್‌ ರೇಂಜ್‌ನ ಟೀಸರ್‌

ಇನ್ನು ಕೆಲವರು ಟೀಸರ್‌ ಅನ್ನು ಮೆಚ್ಚಿಕೊಂಡಿದ್ದಾರೆ. ಇದು ಹಾಲಿವುಡ್‌ ರೇಂಜ್‌ನಲ್ಲಿದೆ ಎಂಬ ಹೊಗಳಿದ್ದಾರೆ. ಅಲ್ಲದೆ, ಬೋಲ್ಡ್‌ ಸೀನ್‌ಗಳು ಸಿನಿಮಾಕ್ಕೆ ಅವಶ್ಯಕವಾಗಿರಬಹುದು, ಆ ಕಾರಣಕ್ಕೆ ಇಟ್ಟಿದ್ದಾರೆ ಎಂಬ ಸಮರ್ಥನೆಯೂ ಕೇಳಿಬಂದಿದೆ. ಮೇಕಿಂಗ್‌ ಮತ್ತು ಹಿನ್ನೆಲೆ ಸಂಗೀತವನ್ನು ಮನಸಾರೆ ಹೊಗಳಿದ್ದಾರೆ.

ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾವನ್ನು ಗೀತು ಮೋಹನ್‌ದಾಸ್‌ ನಿರ್ದೇಶಿಸಿದ್ದು, ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡಿದೆ. ರವಿ ಬಸ್ರೂರು ಅವರು ಸಂಗೀತ ಸಂಯೋಜಿಸಿದ್ದು, ನಯನತಾರಾ, ರುಕ್ಮಿಣಿ ವಸಂತ್‌, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮುಂತಾದವರು ನಟಿಸಿದ್ದಾರೆ.